ಸಚಿವೆ ಜಯಮಾಲಾ, ಚಿತ್ರನಟ ರಾಘವೇಂದ್ರ ರಾಜ್‌ಕುಮಾರ್‌ರಿಂದ ಹಾಸನಾಂಬೆ ದರ್ಶನ
ಹಾಸನ

ಸಚಿವೆ ಜಯಮಾಲಾ, ಚಿತ್ರನಟ ರಾಘವೇಂದ್ರ ರಾಜ್‌ಕುಮಾರ್‌ರಿಂದ ಹಾಸನಾಂಬೆ ದರ್ಶನ

November 5, 2018

ಹಾಸನ: ಹಾಸನಾಂಬೆ ದೇವಿಯನ್ನು ನೋಡಬೇಕು ಎಂಬುದು ನನ್ನ ಬಹು ದಿನದ ಕನಸು, ವರ್ಷಕ್ಕೊಮ್ಮೆ ಬಾಗಿಲು ತೆರೆಯುತ್ತದೆ ಎಂದು ಕೇಳಲಾಗಿತ್ತು. ಈಗ ಮೊಟ್ಟ ಮೊದಲ ಬಾರಿಗೆ ಹಾಸನಾಂಬೆ ದೇವಿ ದರ್ಶನ ಮಾಡಿದ್ದೇನೆ. ತಾಯಿಯನ್ನು ತುಂಬಾ ಹತ್ತಿರದಲ್ಲಿ ನೋಡುವ ಭಾಗ್ಯ ದೊರಕಿರುವುದು ನನ್ನ ಪುಣ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ತಿಳಿಸಿದರು.

ಹಾಸನಾಂಬೆ ದರ್ಶನ ಪಡೆದ ನಂತರ ದೇವಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪು ಜಯಂತಿ ಮಾಡಲು ಸರಕಾರದ ಆದೇಶವಿದ್ದಾಗ ಆಚರಿಸಲೇಬೇಕು. ಈ ಬಗ್ಗೆ ನಾನು ಏನು ಮಾತನಾಡಲ್ಲ. ಶಾಂತಿಯಿಂದ ಇರಬೇಕಾಗಿರುವುದು ನಮ್ಮ ಧರ್ಮ. ಈ ದೇಶದಲ್ಲಿ ಎಲ್ಲಾ ವಿಷಯಗಳನ್ನು ಪ್ರಥಮವಾಗಿ ಮಾಡುವಾಗ ವಿವಾದಗಳು ಬಂದೇ ಬರುತ್ತದೆ. ಜೊತೆಗೆ ಭಿನ್ನಾಭಿಪ್ರಾಯಗಳು ಬರುತ್ತದೆ. ಚರಿತ್ರೆಯಲ್ಲಿರುವ ವ್ಯಕ್ತಿಗಳ ಬಗ್ಗೆ ಅದರಲ್ಲೂ ಕೂಡ ಹಲವಾರು ಚರಿತ್ರೆಗಳನ್ನು ತಿದ್ದುವಂತಹ ಇಲ್ಲವೇ ಅವರ ಅನಿಸಿಕೆ ಗಳಿಗೆ ಚರಿತ್ರೆಯನ್ನು ಕಟ್ಟುವ, ಹೇಳುವಂತಹ ಅನೇಕ ಪ್ರಸಂಗಗಳು ಆಗಿದೆ. ಚರಿತ್ರೆಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದು ಸಮಾಜಕ್ಕೆ ಆಗಬೇಕಾಗಿದೆ ಎಂದು ಹೇಳಿದರು. ಒಂದು ಜಯಂತಿ ಇಷ್ಟೊಂದು ವಿವಾದಕ್ಕೆ ಏಕಾಗಿದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಅದ್ದರಿಂದ ಸಹಕರಿಸಿ ಎಂದು ಹೇಳುವ ಮೂಲಕ ಟಿಪ್ಪು ಜಯಂತಿ ವಿಚಾರದ ಮಾತಿಗೆ ಅಂತ್ಯ ಹಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಡಿಡಿ ಸೇರಿದಂತೆ 7 ಸಿಡಿಪಿ ಹುದ್ದೆಗಳು ಹಾಸನ ಜಿಲ್ಲೆಯಲ್ಲಿ ಖಾಲಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಇವತ್ತಿನ ಸಮಸ್ಯೆಯಲ್ಲ. ನಾನು ಈ ಇಲಾಖೆ ಸಚಿವಳಾಗಿ 5 ತಿಂಗಳು ಆಗಿದೆ. ಒಂದು ಪವಿತ್ರ ಪ್ರಕರಣದಿಂದಾಗಿ ಎಲ್ಲಾ ಹುದ್ದೆಗಳನ್ನು ತಡೆ ಹಿಡಿಯಲಾಗಿದೆ. ಎಂದರು. ತೊಡಕಿದ್ದರೂ ಸರಕಾರ ಇರು ವುದರಲ್ಲಿ ಹುದ್ದೆಯನ್ನು ಭರ್ತಿ ಮಾಡು ವುದಾಗಿ ಭರವಸೆ ನೀಡಿದರು.

ಇದರಿಂದ ಹೆಣ್ಣನ್ನು ಮತ್ತೆ ಮತ್ತೆ ಮುಜುಗರಕ್ಕೆ ತಳ್ಳಲಾಗಬೇಕಾಗುತ್ತದೆ. ಇದು ಹೆಣ್ಣಿಗೆ ಮಾತ್ರವಲ್ಲ, ಗಂಡಿಗೆ ಕೂಡ ಅನ್ವಯಿಸುತ್ತದೆ ಎಂದು ಹೇಳಿದ ಅವರು ಇದನ್ನು ಅವರವರೆ ತೀರ್ಮಾನ ಮಾಡಿಕೊಳ್ಳ ಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಇದೆ ವೇಳೆ ವಾರ್ತಾ ಮತ್ತು ಪ್ರಚಾರ ಇಲಾಖೆ ನಿರ್ದೇಶಕ ವಿಷಕುಮಾರ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಇತರರು ಇದ್ದರು.

ಅದಿ ದೇವತೆ ಹಾಸನಾಂಬೆ ದೇವಿ ದರ್ಶನವನ್ನು ಕುಟುಂಬ ಸಮೇತ ಇದೆ ಮೊದಲಬಾರಿಗೆ ಕಣ್ಣು ತುಂಬಿಕೊಂಡು ದರ್ಶನ ಮಾಡಿದ್ದು, ಮನಸ್ಸಿಗೆ ಖುಷಿ ಕೊಟ್ಟಿದೆ ಎಂದು ಕನ್ನಡ ಚಲನಚಿತ್ರ ನಟ ರಾಘವೇಂದ್ರ ರಾಜಕುಮಾರ್ ತಿಳಿಸಿದರು.

ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಹಾಸನಾಂಬೆ ದರ್ಶನ ಮಾಡಲು ಬರುತ್ತಿ ರುವುದು. ತಾಯಿ ಇಂದು ನಮ್ಮನ್ನು ಆಶೀ ರ್ವಾದ ಮಾಡಿ ಕರೆಸಿಕೊಂಡಿದ್ದಾಳೆ. ದೇವಿ ದರ್ಶನದ ನಂತರ ನನ್ನ ಮನಸ್ಸಿಗೆ ತುಂಬ ಸಂತೋಷವಾಯಿತು ಎಂದರು. ಹಿಂದೆ ನಾನು ಹಾಸನಾಂಬೆ ಬಗ್ಗೆ ಕೇಳಿದ್ದೆನು. ಆದರೇ ಯಾವತ್ತೂ ಬಂದಿರಲಿಲ್ಲ. ನಮಗೆ ತಾಯಿ ಎಲ್ಲಾ ಕೊಟ್ಟಿದ್ದಾಳೆ. ನಮ್ಮ ತಂದೆ ಹೇಳಿಕೊಟ್ಟಿರುವಂತೆ ಸರ್ವರಿಗೂ ಆಯಸ್ಸು, ಆಶೀರ್ವಾದ, ಐಶ್ವರ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಬೇಡಿಕೊಂಡಿದ್ದೇನೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯವನ್ನು ಇದೆ ವೇಳೆ ಹಾರೈಸಿದರು. ಈ ಸಂದರ್ಭದಲ್ಲಿ ಚಲನಚಿತ್ರ ನಾಯಕ ನಟ ರಾಘವೇಂಧ್ರ ರಾಜಕುಮಾರ್ ಪತ್ನಿ ಕೂಡ ಉಪಸ್ಥಿತರಿದ್ದರು. ಇದೆ ವೇಳೆ ಜಿಲ್ಲಾ ಡಾ. ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಪ್ರಶಾಂತ್, ಮನುಕುಮಾರ್ ಇತರರು ಉಪಸ್ಥಿತರಿದ್ದರು.

ಹಿರಿಯ ಪೊಲೀಸ್ ಅಧಿಕಾರಿ (ಐಜಿ) ರಾಮಚಂದ್ರ ರಾವ್ ಅವರು ತಮ್ಮ ಕುಟುಂಬ ಸಮೇತ ಭಾನುವಾರ ಮಧ್ಯಾಹ್ನ ಹಾಸ ನಾಂಬೆ ದೇವಾಲಯಕ್ಕೆ ಆಗಮಿಸಿ ದೇವಿ ದರ್ಶನ ಪಡೆದರು. ಇದೆ ವೇಳೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕಾರಿ ಇತರರು ಉಪಸ್ಥಿತರಿದ್ದರು.

Translate »