Tag: Hassanbe temple

ಈ ವರ್ಷದ ಹಾಸನಾಂಬೆ ದೇವಿ ದರ್ಶನಕ್ಕೆ ತೆರೆ
ಹಾಸನ

ಈ ವರ್ಷದ ಹಾಸನಾಂಬೆ ದೇವಿ ದರ್ಶನಕ್ಕೆ ತೆರೆ

November 10, 2018

ಹಾಸನ: ಈ ವರ್ಷದ ಹಾಸನಾಂಬೆ ದೇವಿ ದರ್ಶನಕ್ಕೆ ಶುಕ್ರವಾರ ಮದ್ಯಾಹ್ನ 1-17 ಕ್ಕೆ ಜಿಲ್ಲಾಡಳಿತದ ಸಮ್ಮುಖದಲ್ಲಿ ದೇವಾಲಯಕ್ಕೆ ಬೀಗ ಹಾಕುವ ಮೂಲಕ ವಿದ್ಯುಕ್ತವಾಗಿ ತೆರೆ ಎಳೆಯಲಾಯಿತು. ಕಳೆದ ವರ್ಷದಷ್ಟು ಈ ಬಾರಿ ಹೆಚ್ಚಿನ ಭಕ್ತರ ಸಂಖ್ಯೆ ಬಾರದಿದ್ದರೂ ದಿನದ 22 ಗಂಟೆಗಳ ಕಾಲ ಭಕ್ತಾಧಿ ಗಳಿಗೆ ದೇವಿ ದರ್ಶನದ ಭಾಗ್ಯ ನೀಡಲಾಗಿತ್ತು. ಕೊನೆಯ ದಿವಸ ಸಂಪ್ರ ದಾಯದಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ಉಪ ವಿಭಾಗಾ ಧಿಕಾರಿ ಹೆಚ್.ಎಲ್. ನಾಗರಾಜು, ತಹಸೀಲ್ದಾರ್…

ಹಾಸನಾಂಬೆ ಜಾತ್ರಾ ಮಹೋತ್ಸವ: ಹಾಸನದಲ್ಲಿ ಜಾನಪದ ಕಲಾ ತಂಡಗಳ ಉತ್ಸವಕ್ಕೆ ಚಾಲನೆ
ಹಾಸನ

ಹಾಸನಾಂಬೆ ಜಾತ್ರಾ ಮಹೋತ್ಸವ: ಹಾಸನದಲ್ಲಿ ಜಾನಪದ ಕಲಾ ತಂಡಗಳ ಉತ್ಸವಕ್ಕೆ ಚಾಲನೆ

November 10, 2018

ಹಾಸನ:  ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವ 2018 ರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಜಾನಪದ ಕಲಾ ತಂಡಗಳ ಉತ್ಸವಕ್ಕೆ ದೇವಾಲಯದ ಆವರಣದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಡೋಲು ಭಾರಿಸುವ ಮೂಲಕ ಚಾಲನೆ ಕೊಟ್ಟರು. ಇದೇ ಮೊದಲ ಬಾರಿಗೆ ಹಾಸನಾಂಬ ಜಾತ್ರೆ ಮುಕ್ತಾಯದ ನಂತರ ಜಾನಪದ ಕಲಾ ತಂಡಗಳ ಪ್ರದರ್ಶನ ಏರ್ಪಡಿಸ ಲಾಗಿದೆ. ಉತ್ಸವದಲ್ಲಿ ಚಿಟ್ಟಿ ಮೇಳ, ಪೂಜಾ ಕುಣಿತ, ಡೊಳ್ಳು ಕುಣಿತ, ಕೀಲು ಕುದುರೆ, ಭಾಗವಂತಿಕೆ ಮೇಳ, ಕರಗ, ಗಾರುಡಿ ಕುಣಿತ, ಗುಡ್ಡರ ಕುಣಿತ,…

ಸಚಿವೆ ಜಯಮಾಲಾ, ಚಿತ್ರನಟ ರಾಘವೇಂದ್ರ ರಾಜ್‌ಕುಮಾರ್‌ರಿಂದ ಹಾಸನಾಂಬೆ ದರ್ಶನ
ಹಾಸನ

ಸಚಿವೆ ಜಯಮಾಲಾ, ಚಿತ್ರನಟ ರಾಘವೇಂದ್ರ ರಾಜ್‌ಕುಮಾರ್‌ರಿಂದ ಹಾಸನಾಂಬೆ ದರ್ಶನ

November 5, 2018

ಹಾಸನ: ಹಾಸನಾಂಬೆ ದೇವಿಯನ್ನು ನೋಡಬೇಕು ಎಂಬುದು ನನ್ನ ಬಹು ದಿನದ ಕನಸು, ವರ್ಷಕ್ಕೊಮ್ಮೆ ಬಾಗಿಲು ತೆರೆಯುತ್ತದೆ ಎಂದು ಕೇಳಲಾಗಿತ್ತು. ಈಗ ಮೊಟ್ಟ ಮೊದಲ ಬಾರಿಗೆ ಹಾಸನಾಂಬೆ ದೇವಿ ದರ್ಶನ ಮಾಡಿದ್ದೇನೆ. ತಾಯಿಯನ್ನು ತುಂಬಾ ಹತ್ತಿರದಲ್ಲಿ ನೋಡುವ ಭಾಗ್ಯ ದೊರಕಿರುವುದು ನನ್ನ ಪುಣ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ತಿಳಿಸಿದರು. ಹಾಸನಾಂಬೆ ದರ್ಶನ ಪಡೆದ ನಂತರ ದೇವಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪು ಜಯಂತಿ ಮಾಡಲು ಸರಕಾರದ ಆದೇಶವಿದ್ದಾಗ…

ಹಾಸನಾಂಬೆ ದೇವಾಲಯ ಪ್ರವೇಶಕ್ಕೆ ನಿರಾಕರಣೆ ಜಿಲ್ಲಾಡಳಿತದ ವಿರುದ್ಧ ಪತ್ರಕರ್ತರ ಆಕ್ರೋಶ
ಹಾಸನ

ಹಾಸನಾಂಬೆ ದೇವಾಲಯ ಪ್ರವೇಶಕ್ಕೆ ನಿರಾಕರಣೆ ಜಿಲ್ಲಾಡಳಿತದ ವಿರುದ್ಧ ಪತ್ರಕರ್ತರ ಆಕ್ರೋಶ

November 3, 2018

ಹಾಸನ: ಇಂದು ಹಾಸನಾಂಬೆ ಬಾಗಿಲು ತೆರೆಯುವ ಹಿನ್ನಲೆಯಲ್ಲಿ ಪತ್ರಕರ್ತರು ಮತ್ತು ಟಿವಿ ಮಾಧ್ಯಮದವರು ದೇವಾಲಯಕ್ಕೆ ತೆರಳಿದಾಗ ಪ್ರವೇಶ ಮಾಡಲು ನಿರ್ಬಂಧ ಹೇರಿದ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಬಹುತೇಕ ಎಲ್ಲಾ ಪತ್ರಿಕೆಯ ಸಂಪಾ ದಕರು ಮತ್ತು ವರದಿಗಾರರು, ಟಿವಿ ಮಾಧ್ಯಮದವರು ಸಭೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತದ ಧೋರಣೆಯನ್ನು ಖಂಡಿಸಿ ದರು. ಪತ್ರಕರ್ತರನ್ನು ಜಿಲ್ಲಾಡಳಿತ ಅತ್ಯಂತ ಅಗೌರವದಿಂದ ನಡೆಸಿಕೊಂಡಿದೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಹಾಸನಾಂಬೆ ದೇವಾಲಯದ ಬಗ್ಗೆ…

Translate »