ಹಾಸನಾಂಬೆ ಜಾತ್ರಾ ಮಹೋತ್ಸವ: ಹಾಸನದಲ್ಲಿ ಜಾನಪದ ಕಲಾ ತಂಡಗಳ ಉತ್ಸವಕ್ಕೆ ಚಾಲನೆ
ಹಾಸನ

ಹಾಸನಾಂಬೆ ಜಾತ್ರಾ ಮಹೋತ್ಸವ: ಹಾಸನದಲ್ಲಿ ಜಾನಪದ ಕಲಾ ತಂಡಗಳ ಉತ್ಸವಕ್ಕೆ ಚಾಲನೆ

November 10, 2018

ಹಾಸನ:  ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವ 2018 ರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಜಾನಪದ ಕಲಾ ತಂಡಗಳ ಉತ್ಸವಕ್ಕೆ ದೇವಾಲಯದ ಆವರಣದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಡೋಲು ಭಾರಿಸುವ ಮೂಲಕ ಚಾಲನೆ ಕೊಟ್ಟರು.

ಇದೇ ಮೊದಲ ಬಾರಿಗೆ ಹಾಸನಾಂಬ ಜಾತ್ರೆ ಮುಕ್ತಾಯದ ನಂತರ ಜಾನಪದ ಕಲಾ ತಂಡಗಳ ಪ್ರದರ್ಶನ ಏರ್ಪಡಿಸ ಲಾಗಿದೆ. ಉತ್ಸವದಲ್ಲಿ ಚಿಟ್ಟಿ ಮೇಳ, ಪೂಜಾ ಕುಣಿತ, ಡೊಳ್ಳು ಕುಣಿತ, ಕೀಲು ಕುದುರೆ, ಭಾಗವಂತಿಕೆ ಮೇಳ, ಕರಗ, ಗಾರುಡಿ ಕುಣಿತ, ಗುಡ್ಡರ ಕುಣಿತ, ತೊಂಡಲ ದೇವರ ಕುಣಿತ, ಮಲ್ಲುಬಿಲ್ಲು ಕುಣಿತ, ಚೋಮನ ಕುಣಿತ, ಕಂಸಾಳೆ, ಕೋಲಾಟ, ವೀರಗಾಸೆ, ಮಲ್ನಾಡ್ ಸುಗ್ಗಿ ಕುಣಿತ ಮತ್ತು ತಮಟೆ, ಕಹಳೆ, ನಂದಿ ಧ್ವಜ, ವೀರಭದ್ರ ಕುಣಿತವನ್ನು ಏರ್ಪಡಿಸಲಾ ಗಿತ್ತು. ಹಾಸನಾಂಬ ದೇವಿಯ ದರ್ಶನದ ಬಾಗಿಲು ಮುಚ್ಚಿದ ನಂತರ ಹಾಸನಾಂಬ ದೇವಾಲಯದಿಂದ ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆಗೊಂಡು ಶ್ರೀ ಕನ್ನಿಕಾಪರಮೇಶ್ವರಿ ರಸ್ತೆಯಿಂದ ಹೊರಟು ಗಾಂಧಿಬಜಾರ್, ಎನ್.ಆರ್.ಸರ್ಕಲ್, ಜಿಲ್ಲಾಧಿಕಾರಿಗಳ ಕಚೇರಿ, ಶಂಕರಮಠದ ರಸ್ತೆ, ಗಾಂಧಿಚೌಕಿ, ಬಸೆಟ್ಟಿಕೊಪ್ಪಲು, ಮಹಾ ರಾಜ ಪಾರ್ಕ್ ರಸ್ತೆ, ಸಹ್ಯಾದ್ರಿ ಸರ್ಕಲ್ ಮಾರ್ಗವಾಗಿ ಕಲಾಭವನ ತಲುಪಿ ಕೊನೆಗೊಂಡಿತು.

ಈ ವೇಳೆ ಜಿಲ್ಲಾ ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ಪ್ರಕಾಶ್ ಗೌಡ, ಉಪವಿಭಾಗಾ ಧಿಕಾರಿ ಹೆಚ್.ಎಲ್. ನಾಗರಾಜು, ಜಿಲ್ಲಾ ಕಸಾಪ ಅಧ್ಯಕ್ಷ ನಾಯಕರ ಹಳ್ಳಿ ಮಂಜೇ ಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್. ಉದಯಕುಮಾರ್, ಜಾನಪದ ತಜ್ಞರಾದ ಮೇಟಿಕೇರೆ ಹಿರಿಯಣ್ಣ, ಹಂಪನಹಳ್ಳಿ ತಿಮ್ಮೇಗೌಡ, ಚಂದ್ರು ಕಾಳೇನ ಹಳ್ಳಿ, ಕಲಾವಿದ ರಾದ ಲೋಕೇಶ್, ಸಾಹಿತಿ ಚನ್ನೇಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ ಮತ್ತಿತರರು ಹಾಜರಿದ್ದರು.

Translate »