ಟಿಪ್ಪು ಜಯಂತಿ ಕೈಬಿಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಹಾಸನ

ಟಿಪ್ಪು ಜಯಂತಿ ಕೈಬಿಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

November 10, 2018

ಹಾಸನ: ವಿವಾದಾತ್ಮಕ ವ್ಯಕ್ತಿತ್ವದ ಟಿಪ್ಪುವಿನ ಜಯಂತಿ ಆಚರಣೆಯನ್ನು ರಾಜ್ಯ ಸರಕಾರ ಕೂಡಲೇ ಕೈಬಿಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜಬಾಹಿರ ಶಕ್ತಿಗಳ ಮೇಲೆ ಮೃದುಧೋರಣೆ ತಳೆದಿರುವ ರಾಜ್ಯ ಸರ್ಕಾರ, ಹಿಂದು ವಿರೋಧಿ ಧೋರಣೆ ತೋರುತ್ತಿದೆ. ರಾಜ್ಯದ ಜನರ ಭಾವನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರತಿಷ್ಠೆಯ ವಿಷಯವನ್ನಾಗಿ ಮಾಡದೆ ವಿವಾದಾತ್ಮಕ ವ್ಯಕ್ತಿತ್ವದ ಟಿಪ್ಪುವಿನ ಜಯಂತಿ ಆಚರಣೆಯನ್ನು ರಾಜ್ಯ ಸರ್ಕಾರ ಕೂಡ ಕೈಬಿಡಬೇಕು ಎಂದರು.

ರಾಜ್ಯದಲ್ಲಿ ಜನರು ಶಾಂತಿಯುತವಾಗಿ ಮತ್ತು ಸೌರ್ಹಾದತೆಯಿಂದ ಬದುಕಬೇಕೆಂಬ ಉದ್ದೇಶ ಸರಕಾರಕ್ಕೆ ಇದ್ದರೆ ಇಂತಹ ಯಾವುದೇ ಆಚರಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ವಿವಾದದ ಸುಳಿಯಲ್ಲಿ ಸಿಲುಕಿರುವ ಒಬ್ಬ ವ್ಯಕ್ತಿಯ ಹುಟ್ಟುಹಬ್ಬವನ್ನು ಆಚರಿಸುವುದು ಪ್ರ್ರಜಾಪ್ರಭುತ್ವದ ಸರ್ಕಾರಕ್ಕೆ ಎಷ್ಟು ಸಮಂಜಸ? ಪ್ರಜಾಪ್ರಭುತ್ವದಲ್ಲಿ ಎಂದಿಗೂ ಬಹುಸಂಖ್ಯಾತರ ಭಾವನೆಗಳಿಗೆ ಮತ್ತು ಮಾತಿಗೆ ಬೆಲೆ ಕೊಡಬೇಕು ಇದನ್ನು ಬಿಟ್ಟು ಸರ್ಕಾರ ಜನರಿಗೆ ಹೆದರಿಸುವುದಾಗಲಿ ಅಥವ ಒತ್ತಡ ಹೇರಿ ಟಿಪ್ಪು ಜಯಂತಿ ಆಚರಿಸುವುದು ತರವಲ್ಲ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಯೋಗಾರಮೇಶ್, ಪ್ರಧಾನ ಕಾರ್ಯ ದರ್ಶಿ ವೇಣುಗೋಪಾಲ್, ನಗರಾಧ್ಯಕ್ಷ ಶೋಭನ್ ಬಾಬು, ಯುವ ಮೋರ್ಚಾ ಅಧ್ಯಕ್ಷ ಹೆಚ್.ಎನ್. ನಾಗೇಶ್, ಮುಖಂಡ ಸುರೇಶ್, ಪುನಿತ್ ಚಂದ್ರು, ದಯಾನಂದ್ ಇತರರಿದ್ದರು.

Translate »