ವಿರಾಜಪೇಟೆಯಲ್ಲಿ ಎಂಟೇ ನಿಮಿಷದಲ್ಲಿ ಮುಗಿದ ಟಿಪ್ಪು ಜಯಂತಿ
ಕೊಡಗು

ವಿರಾಜಪೇಟೆಯಲ್ಲಿ ಎಂಟೇ ನಿಮಿಷದಲ್ಲಿ ಮುಗಿದ ಟಿಪ್ಪು ಜಯಂತಿ

November 11, 2018
  • ಶಾಸಕ ಬೋಪಯ್ಯರಿಂದ ಟಿಪ್ಪು ವಿರುದ್ಧ ಭಾಷಣ
  • ಶಾಸಕರು ಸೇರಿ ಹಲವರ ಬಂಧನ-ಬಿಡುಗಡೆ

ವಿರಾಜಪೇಟೆ: ವಿರಾಜಪೇಟೆಯಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್‍ನಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ, ಸಭೆಯಲ್ಲಿಯೇ ಸ್ಥಳೀಯ ಶಾಸಕರು ಹಾಗೂ ಇತರ ರಿಂದ ದಿಕ್ಕಾರದ ಘೋಷಣೆ, ಟಿಪ್ಪು ಜಯಂತಿ ಆಚರಣೆಗೆ ಅಡ್ಡಿಪಡಿಸದಂತೆ ಮುಂಜಾಗ್ರ ತವಾಗಿ ಶಾಸಕರು ಸೇರಿ 21 ಮಂದಿ ಬಂಧನ, ನಂತರ ಅಧಿಕಾರಿಗಳಿಂದ ಟಿಪ್ಪು ಜಯಂತಿ ಆಚರಣೆ 8 ನಿಮಿಷದಲ್ಲಿ ಮುಕ್ತಾಯ, ಅಂಗಡಿ ಮುಂಗಟ್ಟು ಮುಚ್ಚಿ ಪಟ್ಟಣ ಸಂಪೂರ್ಣ ಬಂದ್, ಖಾಸಗಿ ಬಸ್‍ಗಳಿಲ್ಲದೆ ಪ್ರಯಾಣಿಕರ ಪರದಾಟ, ಸರಕಾರಿ ಬಸ್‍ಗಳಿದ್ದರು ಪ್ರಯಾಣಿಕರಿಲ್ಲ.

ವಿರಾಜಪೇಟೆ ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಮಾರಂಭಕ್ಕೆ ಅಧ್ಯಕ್ಷತೆ ವಹಿಸುವಂತೆ ಸ್ಥಳೀಯ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಅಹ್ವಾನಿಸಲಾಗಿತ್ತು.

ಸಮಯಕ್ಕೆ ಸರಿಯಾಗಿ ಆಗಮಿಸಿದ್ದ ಬೋಪಯ್ಯ ಅವರು ನಾಡಗೀತೆಯ ನಂತರ ಸಭೆಯನ್ನುದ್ದೇಶಿಸಿ ಕಾನೂನಿಗೆ ನಾವು ತಲೆಬಾಗುತ್ತೇವೆ. ಆದರೆ ಸಮ್ಮಿಶ್ರ ಸರಕಾರ ನಡೆಸುತ್ತಿರುವ ಟಿಪ್ಪು ಜಯಂತಿಗೆ ನಮ್ಮ ವಿರೋಧವಿದ್ದು ಇನ್ನು ಮುಂದೆಯು ಕೊಡಗಿ ನಲ್ಲಿ ಯಾರೂ ಟಿಪ್ಪು ಜಯಂತಿಯನ್ನು ಆಚರಿಸಬಾರದು. ಕೊಡಗಿನ ಸಂಸ್ಕøತಿ ಧಾರ್ಮಿಕ ಭಾವನೆಗಳಿಗೆ ಟಿಪ್ಪು ಧಕ್ಕೆ ತಂದಿರುವುದಲ್ಲದೆ ಟಿಪ್ಪು ಓರ್ವ ಮತಾಂಧನಾಗಿದ್ದು ಕೊಡ ಗಿನ ಸಾಹಸ್ರಾರು ಜನರನ್ನು ಹತ್ಯೆ ಮಾಡಿದಂತಹ ಕ್ರೂರಿ. ಕೊಡಗಿನ ಜನರ ಭಾವನೆಗಳಿಗೆ ನೋವುಂಟು ಮಾಡಿದಂತೆ ಟಿಪ್ಪು ಜಯಂತಿಯನ್ನು ಯಾರು ಆಚರಿಸಬಾರದು ಎಂದ ಬೋಪಯ್ಯ ಟಿಪ್ಪು ಮತ್ತು ಈ ಸರಕಾರಕ್ಕೆ ದಿಕ್ಕಾರ ಕೂಗಿದಾಗ ಅವರ ಬೆಂಬಲಿಗರು ಸಹ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಸ್ಥಳದಲ್ಲಿದ್ದ ಪೊಲೀಸರು ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಿ.ರಘು ನಾಣಯ್ಯ, ಜಿಲ್ಲಾ ಪಂಚಾ ಯಿತಿ ಸದಸ್ಯರಾದ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್, ಭವ್ಯ ಚಿಟ್ಟಿಯಪ್ಪ, ಸಿ.ಕೆ.ಬೋಪಣ್ಣ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲಾನ್ ಕುಮಾರ್, ಸದ್ಯರಾದ ಬಿ.ಎಂ.ಗಣೇಶ್, ಅಜೀತ್ ಕರುಂಬಯ್ಯ, ಸೀತಮ್ಮ ಹಾಗೂ ಪ್ರಕಾಶ್ ಸೇರಿದಂತೆ 21 ಮಂದಿಯನ್ನು ಬಂಧಿಸಿದರು. ನಂತರ ಬಿಡುಗಡೆ ಮಾಡಿದರು.

ನಂತರ ನಡೆದ ಟಿಪ್ಪು ಜಯಂತಿ ಆಚರಣೆಯನ್ನು ತಹಶೀಲ್ದಾರ್ ಆರ್.ಗೋವಿಂದ ರಾಜು ಅವರು ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಹೂ ಮಾಲೆಹಾಕಿ ಸ್ವಾಗತ ಮತ್ತು ವಂದನಾರ್ಪಣೆಯಲ್ಲಿ ಆಚರಣೆ 8 ನಿಮಿಷದಲ್ಲಿ ಮುಗಿಯಿತು. ಸಭೆಯಲ್ಲಿ ಪಟ್ಣಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀದರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಿ.ವಿ.ಜಯಣ್ಣ, ಪ್ರಭಾರ ಶಿಕ್ಷಣಾಧಿಕಾರಿ ಅಂಬುಜ, ಪೊಲೀಸ್ ಇಲಾಖೆಯ ಮೈಸೂರು ನಾಗರಿಕಹಕ್ಕುಜಾರಿ ನಿರ್ಧೆಶನಲಾಯದ ಮಹಮದ್ ಇರ್ಷಾದ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯಿಂದ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕರೆದಿದ್ದ ಬಂದ್‍ಗೆ ವಿರಾಜಪೇಟೆಯಲ್ಲಿ ಬೆಳಿಗ್ಗೆಯಿಂದಲೇ ಅಂಗಡಿ, ಹೋಟೆಲ್‍ಗಳ ಮುಂಗಟ್ಟುಗಳನ್ನು ಮುಚ್ಚಿದ್ದವು. ಖಾಸಗಿ ಬಸ್‍ಗಳು ಒಡಾಡುತ್ತಿರಲಿಲ್ಲ, ಬ್ಯಾಂಕ್‍ಗಳು ಮುಚ್ಚಿದ್ದವು, ಕೆಎಸ್‍ಆರ್‍ಟಿಸಿಯ ಕೆಲವೊಂದು ಬಸ್‍ಗಳು ಓಡಾಡು ತ್ತಿದ್ದರೂ ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಹೊರ ಜಿಲ್ಲೆಯಿಂದ ಬಂದವರಿಗೆ ಅಂಗಡಿ ಹೋಟೆಲ್‍ಗಳಿಲ್ಲದೆ ಪರದಾಡುವಂತಿತ್ತು.

Translate »