ಇಂದು ಮೈಸೂರಲ್ಲಿ ಟಿಪ್ಪು ಜಯಂತ್ಯುತ್ಸವ
ಮೈಸೂರು

ಇಂದು ಮೈಸೂರಲ್ಲಿ ಟಿಪ್ಪು ಜಯಂತ್ಯುತ್ಸವ

November 10, 2018

ಮೈಸೂರು: ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಹಜûರತ್ ಟಿಪ್ಪು ಸುಲ್ತಾನ್ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಾಳೆ (ಶನಿವಾರ) ಟಿಪ್ಪು ಸುಲ್ತಾನ್ ಜಯಂತ್ಯುತ್ಸವ ಬೆಳಿಗ್ಗೆ 11.30 ಗಂಟೆಗೆ ಕಲಾಮಂದಿರದಲ್ಲಿ ನಡೆಯಲಿದೆ.

ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮ ಉದ್ಘಾಟಿ ಸುವರು. ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್ ಉಪಸ್ಥಿತಿಯಲ್ಲಿ ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಹೆಚ್.ಡಿ.ಉಮಾಶಂಕರ್ ಮುಖ್ಯ ಭಾಷಣಕಾರರು. ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಕಲಾಮಂದಿರದಲ್ಲಿ ಮೈಸೂರಿನ ಡಾ.ಸ್ನೇಹಶ್ರೀ ಮತ್ತು ದೇವಾನಂದ ವರಪ್ರಸಾದ್ ಟಿಪ್ಪು ಕುರಿತು ಲಾವಣಿ ಗೀತೆ ಹಾಡುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ ನಜಿûೀರ್ ಅಹಮದ್, ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ತನ್ವೀರ್ ಸೇಠ್, ಅಡಗೂರು ಹೆಚ್.ವಿಶ್ವನಾಥ್, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಸಂದೇಶ್ ನಾಗರಾಜು, ಕೆ.ವಿ.ನಾರಾಯಣಸ್ವಾಮಿ, ಕೆ.ಮಹದೇವ, ಆರ್.ಧರ್ಮಸೇನ, ಡಾ.ಯತೀಂದ್ರ, ಹರ್ಷವರ್ಧನ್, ಅನಿಲ ಚಿಕ್ಕಮಾದು, ಅಶ್ವಿನ್‍ಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜಿ.ನಟರಾಜು, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಯುತಾನಂದ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್.ಬಿ. ಮಂಜು ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಮೈಸೂರಲ್ಲೂ ಕಟ್ಟೆಚ್ಚರ
ಮೈಸೂರು:  ಬಿಜೆಪಿಯಿಂದ ತೀವ್ರ ವಿರೋಧವಿರುವ ಹಿನ್ನೆಲೆಯಲ್ಲಿ ನಾಳೆ (ನ.10) ನಡೆಯಲಿ ರುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಮೈಸೂರು ನಗರ ಕಾನೂನು -ಸುವ್ಯವಸ್ಥೆ ಡಿಸಿಪಿ ಎನ್.ವಿಷ್ಣುವರ್ಧನ ತಿಳಿಸಿದ್ದಾರೆ. ಜಿಲ್ಲಾ ಡಳಿತದಿಂದ ಕಲಾ ಮಂದಿರದಲ್ಲಿ ಏರ್ಪಡಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮ ಹೊರತಾಗಿ ಬೇರೆಲ್ಲೂ ಸಮಾರಂಭ, ಮೆರವಣಿಗೆ, ಸಭೆ ನಡೆಸಲು ಪೊಲೀಸ್ ಇಲಾಖೆ ಯಿಂದ ಅನುಮತಿ ನೀಡಿಲ್ಲ. ಹಾಗೊಂದು ವೇಳೆ ಬೇರೆ ಕಡೆ ಮೆರವಣಿಗೆ ಇತ್ಯಾದಿ ನಡೆಸಿದರೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗು ವುದು ಎಂದು ಅವರು ತಿಳಿಸಿದ್ದಾರೆ. ಮೈಸೂರು ನಗರದಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಚಲನ-ವಲನಗಳ ಮೇಲೆ ನಿಗಾ ವಹಿಸಿರುವುದಲ್ಲದೇ, ಟಿಪ್ಪು ಜಯಂತಿಗೆ ಪೊಲೀಸ್ ಕಮಾಂಡ್ ಸೆಂಟರ್ ವಾಹನ ಬಳಸಲಾಗುತ್ತಿದೆ. ಕಲಾಮಂದಿರದ ಬಳಿ ಎನ್‍ಆರ್ ಉಪ ವಿಭಾಗದ ಎಸಿಪಿ ಸಿ.ಗೋಪಾಲ್ ನೇತೃತ್ವ ದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಭಾರೀ ಭದ್ರತೆ ಒದಗಿಸಿದ್ದು, ತಾವು ಬಂದೋಬಸ್ತ್ ಮೇಲ್ವಿ ಚಾರಣೆ ನಡೆಸುವುದಾಗಿಯೂ ವಿಷ್ಣು ವರ್ಧನ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »