ಕೂಡಿಗೆ ಬಳಿ ಯುವಕನಿಗೆ ಚೂರಿ ಇರಿತ
ಮೈಸೂರು

ಕೂಡಿಗೆ ಬಳಿ ಯುವಕನಿಗೆ ಚೂರಿ ಇರಿತ

November 11, 2018

ಕುಶಾಲನಗರ:  ಸಮೀಪದ ಕೂಡಿಗೆ ಗ್ರಾ.ಪಂ.ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕೇವಲ ಶನಿವಾರ ಸಂಜೆ ಯುವಕನೋರ್ವನಿಗೆ ಚೂರಿಯಿಂದ ಇರಿದ ಪ್ರಕರಣ ವರದಿಯಾಗಿದೆ.

ಹುದುಗೂರು ಗ್ರಾಮದ ನಿವಾಸಿ ಕಿರಣ್ (26 ವರ್ಷ)ಹಲ್ಲೆಗೆ ಒಳಗಾದ ಯುವಕ. ಈತ ಸಿದ್ದಾಪುರ ಬಳಿಯ ರೇಸಾರ್ಟ್‍ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ರಜೆ ಮೇಲೆ ತವರೂರಿಗೆ ಬಂದಿದ್ದ. ಶನಿವಾರ ಸಂಜೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲೆಗೆ ಹೆಲ್ಮೆಟ್ ಹಾಕಿಕೊಂಡಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಿರಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭ ಕಿರಣ್ ಹೊಟ್ಟೆ ಭಾಗಕ್ಕೆ ಪೆಟ್ಟು ಬಿದ್ದಿದೆ.ಗಾಯಾಳು ಕಿರಣ್ ಅವರನ್ನು ತಕ್ಷಣ ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಹಲ್ಲೆ ನಡೆಸಿದರು ಯಾರು, ಯಾವ ಕಾರಣಕ್ಕೆ ಹಲ್ಲೆ ನಡೆಸಿ ದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.ಕುಶಾಲನಗರ ಪೆÇಲೀಸ್ ಠಾಣಾಧಿಕಾರಿ ಜಗದೀಶ್ ಸಿಬ್ಬಂದಿಗಳು ತನಿಖೆ ಕೈಗೊಂಡಿದ್ದಾರೆ. ಇದುವರೆಗೂ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಹಲ್ಲೆಗೆ ಒಳಗಾದ ಕಿರಣ್ ಅಥವಾ ಸಂಬಂಧಿಕರು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವೃತ್ತ ನಿರೀಕ್ಷಕ ಕ್ಯಾತೇಗೌಡ ಹೇಳಿದರು.

Translate »