ಈ ವರ್ಷದ ಹಾಸನಾಂಬೆ ದೇವಿ ದರ್ಶನಕ್ಕೆ ತೆರೆ
ಹಾಸನ

ಈ ವರ್ಷದ ಹಾಸನಾಂಬೆ ದೇವಿ ದರ್ಶನಕ್ಕೆ ತೆರೆ

November 10, 2018

ಹಾಸನ: ಈ ವರ್ಷದ ಹಾಸನಾಂಬೆ ದೇವಿ ದರ್ಶನಕ್ಕೆ ಶುಕ್ರವಾರ ಮದ್ಯಾಹ್ನ 1-17 ಕ್ಕೆ ಜಿಲ್ಲಾಡಳಿತದ ಸಮ್ಮುಖದಲ್ಲಿ ದೇವಾಲಯಕ್ಕೆ ಬೀಗ ಹಾಕುವ ಮೂಲಕ ವಿದ್ಯುಕ್ತವಾಗಿ ತೆರೆ ಎಳೆಯಲಾಯಿತು.

ಕಳೆದ ವರ್ಷದಷ್ಟು ಈ ಬಾರಿ ಹೆಚ್ಚಿನ ಭಕ್ತರ ಸಂಖ್ಯೆ ಬಾರದಿದ್ದರೂ ದಿನದ 22 ಗಂಟೆಗಳ ಕಾಲ ಭಕ್ತಾಧಿ ಗಳಿಗೆ ದೇವಿ ದರ್ಶನದ ಭಾಗ್ಯ ನೀಡಲಾಗಿತ್ತು. ಕೊನೆಯ ದಿವಸ ಸಂಪ್ರ ದಾಯದಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ಉಪ ವಿಭಾಗಾ ಧಿಕಾರಿ ಹೆಚ್.ಎಲ್. ನಾಗರಾಜು, ತಹಸೀಲ್ದಾರ್ ಶಿವಶಂಕರಪ್ಪ, ಸೇರಿದಂತೆ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ವಿಧಿ ವಿಧಾನವನ್ನು ನೆರವೇರಿಸಿ ಸರಿಯಾಗಿ 1-17ಕ್ಕೆ ದೇವಿ ಗರ್ಭ ಗುಡಿಗೆ ಬೀಗ ಹಾಕುವುದರ ಮೂಲಕ 2018ರ ದೇವಿ ದರ್ಶನಕ್ಕೆ ಅಂತ್ಯಹಾಡಿದರು.

ಕೊನೆಯ ದರ್ಶನ ಪಡೆಯಲು ದೇವಾ ಲಯದ ಒಳಗೆ ಕೆಲವರು ಬಿಟ್ಟರೇ ಹೊರಗಡೆ ಭಕ್ತರ ಸಂಖ್ಯೆ ಕಂಡು ಬರಲಿಲ್ಲ. ಬೆಳಗಿನಿಂದಲೇ ಸರದಿ ಸಾಲಿನಲ್ಲಿ ನಿಲ್ಲುವ ಕಂಬಿಗಳ ತೆರವು ಕಾರ್ಯಚರಣೆ ನಡೆಸಿದರು. ಬಾಗಿಲು ಮುಚ್ಚುವ ಕೊನೆಗಳಿಗೆಯಲ್ಲಿ ಭಕ್ತಾಧಿಗಳಿಗೆ ದೇವಿ ದರ್ಶನ ನೀಡಿದರೂ ಸಮಯಕ್ಕೆ ಸರಿಯಾಗಿ ಬೀಗ ಹಾಕಬೇಕು ಎನ್ನುವ ಸೂಚನೆ ಮೇರೆಗೆ ಬೀಗ ಹಾಕಲಾಯಿತು. ಈ ಸಮಯದಲ್ಲಿ ಶಾಸಕ ಪ್ರೀತಮ್ ಜೆ. ಗೌಡ ಅವರು ಈ ವರ್ಷದ ದೇವಿಯ ಕೊನೆಯ ದರ್ಶನ ಪಡೆದು ಪುನೀತರಾದರು. ಸಂಪ್ರದಾಯದಂತೆ ದೇವಿಯ ಒಡವೆಯನ್ನು ಕೊಂಡೊಯ್ಯಲಾಯಿತು. ನಂತರ ಇಷ್ಟು ದಿವಸ ದೇವಾಲಯದಲ್ಲಿ ಸೇವೆ ಸಲ್ಲಿಸಿದ ಅಧಿಕಾರಿ ವೃಂದದ ವರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.

ಈ ವರ್ಷ 9 ದಿವಸಗಳಿಂದ ಭಕ್ತಾಧಿಗಳಿಗೆ ಹಾಸನಾಂಬೆಯ ದೇವಸ್ಥಾನ ತೆರೆಯ ಲಾಗಿತ್ತು. ಅದರಲ್ಲಿ ಪ್ರಾರಂಭದ ಮತ್ತು ಕೊನೆಯ ದಿವಸ ದೇವಿ ದರ್ಶನಕ್ಕೆ ಅವ ಕಾಶವಿರಲಿಲ್ಲ. ಕೇವಲ 7 ದಿವಸ ಮಾತ್ರ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸ ಲಾಗಿತ್ತು. ಇದುವರೆಗೂ ಅನೇಕ ರಾಜಕೀಯ ಪಕ್ಷದವರು, ವಿವಿಧ ಮಠದ ಸ್ವಾಮೀಜಿ ಗಳು ಹಾಗೂ ಹೊರ ಭಾಗಗಳಿಂದ ಲಕ್ಷಾಂತರ ಜನರು ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಸಾಕಷ್ಟು ಮಂದಿ ರಾಜ್ಯದ ನಾನಾ ಭಾಗಗಳಿಂದ ಅಂದಾಜು ಎರಡೂ ವರೆ ಲಕ್ಷ ಜನ ಭಕ್ತಾಧಿಗಳು ಅಮ್ಮನವರ ದರ್ಶನ ಪಡೆದಿದ್ದಾರೆ. 2019ರ ಮುಂದಿನ ವರ್ಷ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯುವುದು ಅಕ್ಟೋಬರ್ 17 ರಿಂದ 29ರವರೆಗೂ ಹಾಸನಾಂಬೆ ಬಾಗಿಲು ತೆರೆದು 13 ದಿನಗಳ ಕಾಲ ದೇವಿ ದರ್ಶನ ಸಿಗಲಿದೆ.

ಡಿಸಿ ರೋಹಿಣಿ ಸಿಂಧೂರಿ ಮಾತನಾಡಿ, 2018ರ 9 ದಿನಗಳ ಕಾಲ ಹಾಸನಾಂಬೆ ದೇವಿ ದರ್ಶನ ಜಾತ್ರ ಮಹೋತ್ಸವವು ಯಶಸ್ವಿಗೊಂಡಿದೆ. ಭಕ್ತಾಧಿಗಳಿಗೆ ಯಾವ ಸಮಸ್ಯೆ ಬಾರದಂತೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ದೇವಿದರ್ಶನಕ್ಕೆ ತೆರೆ ಎಳೆಯಲಾಗಿದ್ದು, ಮುಂದಿನ ವರ್ಷ ದಲ್ಲಿ ಭಕ್ತರಿಗೆ ಯಾವ ಸಮಸ್ಯೆ ಉದ್ಭವಿ ಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು. ಅವಶ್ಯಕವಾಗಿರುವ ಎಲ್ಲಾ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನುಡಿದರು.

ಎಸ್ಪಿ ಪ್ರಕಾಶ್ ಗೌಡ ಮಾತನಾಡಿ, ಅದಿ ದೇವತೆ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲು ಪ್ರತಿಯೊಬ್ಬರೂ ಸಹಕಾರ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋ ಬಸ್ತ್ ಮಾಡಲಾಗಿ ಶಾಂತಿ ಕಾಪಾಡಲಾಗಿದೆ ಎಂದು ಹೇಳಿದರು.

Translate »