ಕುಶಾಲನಗರದಲ್ಲಿ ಮಾಂಗಲ್ಯ ಸರ ಕಳವು
ಕೊಡಗು

ಕುಶಾಲನಗರದಲ್ಲಿ ಮಾಂಗಲ್ಯ ಸರ ಕಳವು

November 10, 2018

ಕುಶಾಲನಗರ: ಇಲ್ಲಿನ ರಾಧಾಕೃಷ್ಣ ಬಡಾವಣೆಯ ಗೌಡ ಸಮಾಜ ರಸ್ತೆಯಲ್ಲಿರುವ ಶ್ರೀ ಕೋಣಮಾರಿ ಯಮ್ಮ ದೇವಿಯ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಅಪಹರಣ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ದೇವಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದ ಗುಮ್ಮನಕೊಲ್ಲಿ ಗ್ರಾಮದ ಮಹಿಳೆ ಪೂವಮ್ಮ ಮಾಂಗಲ್ಯ ಸರ ಕಳೆದುಕೊಂಡವರು. 25 ಗ್ರಾಂ ತೂಕವುಳ್ಳ ಈ ಸರದ ಬೆಲೆ ರೂ.85 ಸಾವಿರ ಮೌಲ್ಯದ್ದಾಗಿದೆ. ಪೊಲೀಸ್ ಭದ್ರತೆಯ ನಡುವೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಂದ ರ್ಭದಲ್ಲಿ ಮಹಿಳೆಯ ಬೆನ್ನು ಮುಟ್ಟಿಕೊಂಡು ಒಳನುಗ್ಗುವ ಸಂದರ್ಭ ದುಷ್ಕರ್ಮಿಗಳು ಸರ ಅಪರಹಣ ಮಾಡಿದ್ದಾರೆ. ಈ ಕುರಿತು ಕುಶಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಕಳ್ಳರ ಸೆರೆಗೆ ಕ್ರಮ ಕೈಗೊಂಡಿದ್ದಾರೆ.

Translate »