ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಅದಿ ದೇವತೆ ಹಾಸನಾಂಬೆ ದರ್ಶನ ಈ ವರ್ಷ ಮುಗಿದಿದ್ದು, ಭಕ್ತರಿಂದ ಸಂಗ್ರಹವಾದ ಮತ್ತು 1 ಸಾವಿರ ರೂ ಮತ್ತು 300 ರೂಗಳ ವಿಶೇಷ ದರ್ಶನದ ಟಿಕೆಟ್‍ನಿಂದ ಸಂಗ್ರಹವಾದ ಹಣವನ್ನು ದೇವಾಲಯದ ಆವರಣದಲ್ಲಿ ಸ್ಕೌಟ್ ಅಂಡ್ ಗೈಡ್ಸ್, ಕಂದಾಯ ಅಧಿಕಾರಿಗಳು ಸೇರಿದಂತೆ ಇತರರು ಶುಕ್ರವಾರ ಬೆಳಗಿನಿಂದಲೇ ಏಣಿಕೆ ಕಾರ್ಯ ನಡೆಸಿದ್ದು, ಹುಂಡಿಯಲ್ಲಿ 89,67,331 ರೂ. ಸಂಗ್ರಹವಾಗಿದೆ.
ಹುಂಡಿ ಹಣದ ಜೊತೆಗೆ ಟಿಕೆಟ್ ಲಾಡು, ಸೀರೆ ಮಾರಾಟದಿಂದ 1,58,61,440 ರೂ. ಸೇರಿದಂತೆ ದೇವಾ ಲಯಕ್ಕೆ ಒಟ್ಟು 2,48,28,771 ರೂ. ಆದಾಯ ಬಂದಿದೆ. ಹುಂಡಿ ಹಣ ಏಣಿಕೆಯ ಸಮಯದಲ್ಲಿ ಅನೇಕ ಭಕ್ತರು ತಮ್ಮ ಸಮಸ್ಯೆಗಳನ್ನು ಕೈಬರಹದ ಮೂಲಕ ಹಾಕಿದ್ದಾರೆ. ಕುಟುಂಬದ ಸಮಸ್ಯೆಗಳು, ವಿವಾಹ, ಪ್ರೇಮ ವಿವಾಹ ಬೇಡ, ಮನೆಯವರು ನೋಡಿದವರನ್ನೆ ಮದುವೆಯಾಗಲಿ, ಆರೋಗ್ಯ ಸುಧಾರಿಸು ಸೇರಿದಂತೆ ವಿವಿಧ ರೀತಿಯ ಪರಿಹಾರ ವನ್ನು ಭಕ್ತರು ಕೇಳಿದ್ದಾರೆ. ಈ ವೇಳೆ ಹಳೆಯ 1 ಸಾವಿರ ಮುಖ ಬೆಲೆಯ ನೋಟುಗಳು ಪತ್ತೆಯಾಗಿದೆ. ವಿದೇಶಿ ಕರೆನ್ಸಿ ಕೂಡ ಹಾಕಲಾಗಿದೆ.
ದೇವಿ ಒಡವೆ: ಅದಿ ದೇವತೆ ಹಾಸನಾಂಬೆ ದೇವಿ ದರ್ಶನಕ್ಕೆ ಶುಕ್ರವಾರ ತೆರೆ ಎಳೆದ ಬಳಿಕ ದೇವಿ ಒಡವೆಯನ್ನು ವಿಧಿವಿಧಾನದೊಂದಿಗೆ ಸಾಗಿಸ ಲಾಯಿತು. ಈ ವೇಳೆ ಭಕ್ತಾದಿಗಳು ಕರಿ ಮೆಣಸನ್ನು ದಾರಿ ಉದ್ದಕ್ಕೂ ಎಸೆಯುತ್ತಿದ್ದರು. ಮತ್ತು ಜೈಕಾರ ಹಾಕುತ್ತಿದ್ದರು. ಈ ವೇಳೆ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು.