ಹಾಸನಾಂಬೆ ದೇವಾಲಯ ಪ್ರವೇಶಕ್ಕೆ ನಿರಾಕರಣೆ ಜಿಲ್ಲಾಡಳಿತದ ವಿರುದ್ಧ ಪತ್ರಕರ್ತರ ಆಕ್ರೋಶ
ಹಾಸನ

ಹಾಸನಾಂಬೆ ದೇವಾಲಯ ಪ್ರವೇಶಕ್ಕೆ ನಿರಾಕರಣೆ ಜಿಲ್ಲಾಡಳಿತದ ವಿರುದ್ಧ ಪತ್ರಕರ್ತರ ಆಕ್ರೋಶ

November 3, 2018

ಹಾಸನ: ಇಂದು ಹಾಸನಾಂಬೆ ಬಾಗಿಲು ತೆರೆಯುವ ಹಿನ್ನಲೆಯಲ್ಲಿ ಪತ್ರಕರ್ತರು ಮತ್ತು ಟಿವಿ ಮಾಧ್ಯಮದವರು ದೇವಾಲಯಕ್ಕೆ ತೆರಳಿದಾಗ ಪ್ರವೇಶ ಮಾಡಲು ನಿರ್ಬಂಧ ಹೇರಿದ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಬಹುತೇಕ ಎಲ್ಲಾ ಪತ್ರಿಕೆಯ ಸಂಪಾ ದಕರು ಮತ್ತು ವರದಿಗಾರರು, ಟಿವಿ ಮಾಧ್ಯಮದವರು ಸಭೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತದ ಧೋರಣೆಯನ್ನು ಖಂಡಿಸಿ ದರು. ಪತ್ರಕರ್ತರನ್ನು ಜಿಲ್ಲಾಡಳಿತ ಅತ್ಯಂತ ಅಗೌರವದಿಂದ ನಡೆಸಿಕೊಂಡಿದೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಹಾಸನಾಂಬೆ ದೇವಾಲಯದ ಬಗ್ಗೆ ಸುದ್ದಿ ಮಾಡದಂತೆಯೂ, ಜಿಲ್ಲಾಡಳಿತ ಈ ಬಗ್ಗೆ ಕ್ಷಮೆ ಯಾಚಿಸುವಂತೆ ನಿರ್ಣಯ ಕೈಗೊಳ್ಳ ಲಾಯಿತು. ಬಹುತೇಕ ಎಲ್ಲ ಪತ್ರಕರ್ತರೂ ಜಿಲ್ಲಾಡಳಿತದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಊರ ದೇವತೆ ದರ್ಶನ ನೀಡುವ ಬಗ್ಗೆ ಮುದ್ರಿಸಲಾಗಿರುವ ಆಹ್ವಾನ ಪತ್ರಿಕೆಯನ್ನು ಈ ಬಾರಿ ಯಾವ ಪತ್ರಕರ್ತ ರಿಗೂ ನೀಡಿರುವುದಿಲ್ಲ, ಸಚಿವ ಹೆಚ್.ಡಿ. ರೇವಣ್ಣ ಹೇಳಿದಂತೆ ಜಿಲ್ಲಾಡಳಿತವು ಪತ್ರಕರ್ತರನ್ನು ನಿಷ್ಕ್ರಿಯವಾಗಿ ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೆ ದೇವಾಲಯಕ್ಕೆ ಕಮಿಟಿ ಇದ್ದು, ಹಿರಿಯರು ಚರ್ಚೆ ಮಾಡುತ್ತಿದ್ದರು. ಆದರೇ ಇಂದು ಇವರ ಯಾವ ಸಲಹೆ ಪಡೆಯದೇ ಜೊತೆಗೆ ಪತ್ರಕರ್ತರನ್ನೂ ದೂರ ಇಟ್ಟಿದ್ದಾರೆ. ಇಲ್ಲಿ ಸರಕಾರ ಎಂದರೇ ಅಧಿಕಾರಿ ಶಾಹಿಗಳ ಧರ್ಪ ಎದ್ದು ಕಾಣುತ್ತಿದೆ ಎಂದು ಸಿಡಿ ಮಿಡಿಗೊಂಡರು.

ಹಾಸನಾಂಬೆ ಉತ್ಸವ ಎಂದರೇ ಜನರ ನಡುವೆ ನಡೆಯುವ ಉತ್ಸವ. ಇಲ್ಲಿ ಹಣ ಹೊಡೆಯುವುದಕ್ಕೆ ಮೊದಲು ಕಡಿವಾಣ ಹಾಕಬೇಕು. ಪತ್ರಕರ್ತರು ಒಳ ಹೋಗಿ ಸುದ್ದಿ ಮಾಡಲು ಪಾಸ್ ನೀಡಿದ್ದರೂ ಕೂಡ ಅದಕ್ಕೆ ಗೌರವ ಇಲ್ಲದಂತೆ ಮಾಡಿದ್ದಾರೆ.

ದೇವಾಲಯ ಇಂದು ಕೆಲವರದು ಸ್ವತ್ತಾಗಿದೆ. ಮೊದಲು ವಾಣಿಜ್ಯ ಹಿತಾಸಕ್ತಿಯಿಂದ ದೇವಾಲಯವನ್ನು ರಕ್ಷಿಸಲು ಮುಂದಾಗಬೇಕು. ಒಂದು ಸಾವಿರ ರೂ.ಟಿಕೆಟ್ ಪಡೆದರೇ ದೇವಿ ನೇರ ದರ್ಶನಕ್ಕೆ ಕಡಿವಾಣ ಹಾಕಿ ಸಾಮಾನ್ಯ ಭಕ್ತರು ದರ್ಶನ ಪಡೆಯಲು ಅವಕಾಶ ಕಲ್ಪಿಸುವಂತಾಗಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಧ್ಯಕ್ಷ ಉದಯ್‍ಕುಮಾರ್, ನಿಕಟಪೂರ್ವ ಅಧ್ಯಕ್ಷ ರವಿ ನಾಕಲಗೂಡು, ಹಿರಿಯ ಪತ್ರ ಕರ್ತರಾದ ಆರ್.ಪಿ. ವೆಂಕಟೇಶ ಮೂರ್ತಿ, ಸಂಘದ ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಕೆ.ಜಿ. ಸುರೇಶ್, ಖಜಾಂಚಿ ರಾಜೇಶ್, ಮಾಜಿ ಅಧ್ಯಕ್ಷ ಮಂಜುನಾಥ್, ಸಮೀರ್ ಅಹಮದ್, ಹರೀಶ್, ಬಾಳ್ಳು ಗೋಪಾಲ್, ಹರೀಶ್ ಕೋಟೆ, ಕೆಪಿಎಸ್ ಪ್ರಮೋದ್, ನಾಗರಾಜು, ಮಾಜಿ ಅಧ್ಯಕ್ಷೆ ಲೀಲಾವತಿ, ಬನವಾಸೆ ಮಂಜು, ಉದಯರವಿ, ವೇಣುಕುಮಾರ್, ಸೋಮೇಶ್, ಶಿವರಾಂ ಸೇರಿದಂತೆ ಪತ್ರಿಕೆಯ ಮತ್ತು ಟಿವಿ ಮಾಧ್ಯಮದ ಎಲ್ಲ ಸಂಪಾದಕರು, ಹಾಗೂ ಹಿರಿಯ ಪತ್ರಕರ್ತರು ಹಾಜರಿದ್ದು, ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

Translate »