ಹಾಸನದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
ಹಾಸನ

ಹಾಸನದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

November 3, 2018

ಹಾಸನ: ನಗರದ ಜಿಲ್ಲಾ ಕ್ರೀಡಾಂ ಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಧ್ವಜಾರೋಹಣ ನೆರವೇರಿಸಿದರು.

ಶಸಸ್ತ್ರ ಪಡೆಗಳ ಗೌರವ ವಂದನೆ ಸ್ವೀಕರಿಸಿ ರಾಜೋತ್ಸವ ಸಂದೇಶ ನೀಡಿದ ಸಚಿವರು, ಕನ್ನಡ ಭಾಷೆ ಇಲ್ಲಿನ ಸಂಸ್ಕ್ರತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನೂರಾರು ಮಹಾನಾಯಕರು ಈ ನಾಡನ್ನು ಸರ್ವತೋಮುಖವಾಗಿ ಕಟ್ಟಲು ಶ್ರಮಿಸಿ ದ್ದಾರೆ. ಅವರೆಲ್ಲರನ್ನು ಸ್ಮರಿಸಿ ಗೌರವ ನಮನ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.

ಕರ್ನಾಟಕ ಸರ್ಕಾರ ಕೃಷಿ, ಶಿಕ್ಷಣ, ಮೂಲಭೂತ ಸೌಕರ್ಯ ಅಭಿವೃದ್ದಿಗೆ ಹೆಚ್ಚಿನ ಅದ್ಯತೆ ನೀಡಿದೆ. ಎಲ್ಲಾ ಜನ ಸಮು ದಾಯಗಳ ಅಭಿವೃದ್ದಿಗಾಗಿ ಶ್ರಮಿಸಲಾಗುತ್ತಿದೆ ಎಂದು ಸಚಿವ ರೇವಣ್ಣ ಹೇಳಿದರು. ಹಾಸನದಲ್ಲಿ 1600 ರೂ ಕೋಟಿಗಳಿಗೂ ಅಧಿಕ ಮೊತ್ತದ ಅನುದಾನದಲ್ಲಿ ಹತ್ತಾರು ಕಾಮಾಗಾರಿಗಳಿಗೆ ಚಾಲನೆ ನೀಡಲಾಗಿದೆ. ಸಮಗ್ರ ಹಾಸನ ಅಭಿವೃದ್ದಿ ತಮ್ಮ ಕನಸಾಗಿದೆ ಅದರ ಈಡೇರಿಕೆಗೆ ಶ್ರಮಿಸಲಾಗುತ್ತದೆ ಎಂದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ವಿವರ: ಸಾಹಿತ್ಯ ಕ್ಷೇತ್ರದಲ್ಲಿ ಆಲೂರಿನ ಕೊಟ್ರೇಶ್ ಎಸ್, ಉಪ್ಪಾರ್, ಕಲೆ ಮತ್ತು ಸಂಸ್ಕøತಿ ಸಂಗೀತ/ನೃತ್ಯ/ನಾಟಕ ಕ್ಷೇತ್ರದಲ್ಲಿ ಸಿ.ಯಶೋಧರ್ ನಾಯಕ್ ಬಿನ್ ಛತ್ರಾ ನಾಯಕ್ ಮತ್ತು ಬೆಳಗುಂಬ ಬಿ.ಎಸ್. ಜಯಶಂಕರ್, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕನ್ನಡಪ್ರಭ ವರದಿಗಾರ ದಯಾ ಶಂಕರ್ ಮೈಲಿ, ಕ್ರೀಡಾ ಕ್ಷೇತ್ರದಲ್ಲಿ ಚನ್ನರಾಯ ಪಟ್ಟಣ ತಾಲೂಕಿನ ಬರಾಳು ಗ್ರಾಮದ ಹಿರಿಯ ಅಂತರರಾಷ್ಟ್ರೀಯ ಕ್ರೀಡಾಪಟು ಬರಾಳು ಪ್ರಕಾಶ್ ಮತ್ತು ಅಂತರರಾಷ್ಟ್ರೀಯ ಕರಾಟೆ ಕ್ರೀಡಾಪಟು ಮೊಹಮದ್ ಆರೀಫ್ ಬಿನ್ ಅಬ್ದುಲ್ ಮುಜೀಬ್, ಜಾನಪದ ಕ್ಷೇತ್ರದಲ್ಲಿ ಚನ್ನರಾಯಪಟ್ಟಣ ತಾಲೂಕಿನ ನಾಟಕ ರಚನಕಾರರಾದ ಡಾ. ಚಂದ್ರು ಕಾಳೇನ ಹಳ್ಳಿ ಹಾಗೂ ಶಿವನಂಜೇಗೌಡ, ಸಮಾಜ ಸೇವೆ ಕ್ಷೇತ್ರದಲ್ಲಿ ಜಿ.ಓ.ಮಹಂತಪ್ಪ ಮತ್ತು ಭಾರತಿ ನರ್ಸಿಂಗ್ ಹೋಂ ಡಾ.ಭಾರತಿ ರಾಜಶೇಖರ್, ಚಿತ್ರಕಲಾ ಕ್ಷೇತ್ರದಲ್ಲಿ ಚನ್ನರಾಯಪಟ್ಟಣ ಗಿರಿಕ್ಷೇತ್ರದ ಚಿತ್ರಕಲಾ ಶಿಕ್ಷಕರಾದ ಜಿ.ಎಸ್. ಶಿವಶಂಕರಪ್ಪ ಮತ್ತು ಶಾಂತಲಾ ಚಿತ್ರಕಲಾ ವಿದ್ಯಾಲಯದ ಉಪನ್ಯಾಸಕರಾದ ವಸಂತ್ ಕುಮಾರ್, ಸಫಾಯಿ ಕರ್ಮಚಾರಿ ಮಂಜುಳ ಕೋಂ ಮುರುಳಿ ಅವರುಗಳನ್ನು ಸನ್ಮಾನಿಸಲಾಯಿತು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಯಿಂದ ವಿವಿಧ ಜಾನಪದ ಕಲಾ ತಂಡಗಳು ಮತ್ತು ವಿವಿಧ ಇಲಾಖೆಗಳ ಸ್ತಬ್ದ ಚಿತ್ರಗಳ ಆಕರ್ಷಕ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿತು.ಶಾಸಕ ಪ್ರೀತಂ ಜೆ.ಗೌಡ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಡಿಸಿ ರೋಹಿಣಿ ಸಿಂಧೂರಿ, ಜಿಪಂ ಸಿಇಓ ಪುಟ್ಟಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್. ಪ್ರಕಾಶ್‍ಗೌಡ ಮತ್ತಿತರರು ಹಾಜರಿದ್ದರು.

Translate »