ಭಕ್ತರಿಗೆ ದರ್ಶನ ನೀಡಿದ ಹಾಸನಾಂಬೆ: ಕುಟುಂಬ ಸಮೇತ ದೇವಿ ದರ್ಶನ ಪಡೆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ಹಾಸನ

ಭಕ್ತರಿಗೆ ದರ್ಶನ ನೀಡಿದ ಹಾಸನಾಂಬೆ: ಕುಟುಂಬ ಸಮೇತ ದೇವಿ ದರ್ಶನ ಪಡೆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

November 3, 2018
  • ಹಾಸನಾಂಬೆಗೆ ವಿವಿಧ ಪುಷ್ಪ, ಹಣ್ಣಿನ ಅಲಂಕಾರ
  • ಸಾವಿರಾರು ಭಕ್ತರಿಂದ ದೇವಿ ದರ್ಶನ

ಹಾಸನ: ಹಾಸನದ ಅಧಿ ದೇವತೆ ಹಾಸನಾಂಬ ದೇವಸ್ಥಾನದ ಬಾಗಿಲನ್ನು ಒಂದು ವರ್ಷದ ನಂತರ ಗುರುವಾರ ಧರ್ಮಸ್ಥಳದ ಧರ್ಮಾ ಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಮ್ಮುಖ ದಲ್ಲಿ ವಿವಿಧ ಸಂಪ್ರದಾಯ ಬದ್ಧವಾದ ಪೂಜಾ ವಿಧಿ-ವಿಧಾನಗಳೊಂದಿಗೆ ತೆರೆಯಲಾಯಿತು.

ಗುರುವಾರದಂದು ದೇವಸ್ಥಾನವನ್ನು ಸ್ವಚ್ಛ ಗೊಳಿಸಿ, ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಈ ವೇಳೆ ಶಾಸಕ ಪ್ರೀತಂ ಜೆ.ಗೌಡ, ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ, ಅಪರ ಜಿಲ್ಲಾಧಿಕಾರಿ ವೈಶಾಲಿ, ಜಿಲ್ಲಾ ಎಸ್ಪಿ ಎ.ಎನ್. ಪ್ರಕಾಶ್‍ಗೌಡ, ಪ್ರೊಬೇಷನರಿ ಐಎಎಸ್ ಅಧಿಕಾರಿ ಎಂ.ಪ್ರಿಯಾಂಕ, ಉಪ ವಿಭಾಗಾ ಧಿಕಾರಿಗಳಾದ ಡಾ. ಹೆಚ್.ಎಲ್.ನಾಗರಾಜ್, ಲಕ್ಷ್ಮೀಕಾಂತ ರೆಡ್ಡಿ, ನಗರ ಸಭೆ ಆಯುಕ್ತ ಬಿ.ಎ.ಪರಮೇಶ್, ಪ್ರೊಬೇಷನರಿ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಮತ್ತಿತ ರರು ಉಪಸ್ಥಿತರಿದ್ದರು. ಗುರುವಾರ ದಂದು ಭಕ್ತರಿಗೆ ದೇವಸ್ಥಾನ ಪ್ರವೇಶವಿರಲಿಲ್ಲ.

ಎರಡನೇ ದಿನವಾದ ಇಂದು ಹಾಸನಾಂಬೆ ಯನ್ನು ವಿವಿಧ ಪುಷ್ಪ ಮತ್ತು ಹಣ್ಣುಗಳಿಂದ ಸಿಂಗರಿಸಲಾಗಿತ್ತು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು, ತಮ್ಮ ಪತ್ನಿ ಚೆನ್ನಮ್ಮ ಅವರೊಂದಿಗೆ ದೇವಿ ದರ್ಶನ ಪಡೆದರು. ಅಲ್ಲದೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾವಿರಾರು ಭಕ್ತರು ದೇವಿ ದರ್ಶನ ಪಡೆದರು.

ನ.9ರಂದು ದೇವಸ್ಥಾನ ಮುಚ್ಚಲಿದ್ದು, ನ.8ರವರೆಗೂ ಭಕ್ತಾದಿಗಳಿಗೆ ದೇವಿ ದರ್ಶನಕ್ಕೆ ಅವಕಾಶವಿದೆ. ಹಾಸನಾಂಬೆ ಜಾತ್ರೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಭಕ್ತಾದಿಗಳ ಅನುಕೂಲಕ್ಕಾಗಿ 300 ಮತ್ತು 1000 ರೂ. ಟಿಕೆಟ್‍ನ ವಿಶೇಷ ದರ್ಶನದ ವ್ಯವಸ್ಥೆ ಯನ್ನು ಕಲ್ಪಿಸಲಾಗಿತ್ತು. ಟಿಕೆಟ್ ಹೊಂದಿದ ಭಕ್ತರಿಗಾಗಿ ಪ್ರತ್ಯೇಕ ಪ್ರವೇಶ ದ್ವಾರ ಏರ್ಪಡಿಸಲಾಗಿತ್ತು.

ದೇವಸ್ಥಾನ ತೆರೆದ ದಿನ ಮತ್ತು ಇಂದು ಮಾಧ್ಯಮದವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸದೇ ಇದ್ದುದರಿಂದ ಜಿಲ್ಲಾಡಳಿ ತವು ಮಾಧ್ಯಮ ಪ್ರತಿನಿಧಿಗಳ ಆಕ್ರೋಶಕ್ಕೆ ಗುರಿಯಾಯಿತು. ಇಂದು ಪತ್ರಕರ್ತರ ಸಂಘದಲ್ಲಿ ಸಭೆ ಸೇರಿದ ಮಾಧ್ಯಮ ಪ್ರತಿನಿಧಿಗಳು ಜಿಲ್ಲಾಡಳಿತದ ಕ್ರಮದ ವಿರುದ್ಧ ಕಿಡಿಕಾರಿದರು.

ಜಾತ್ರೆ ಅಂಗವಾಗಿ ಹಾಸನಕ್ಕೆ ರಾಜ್ಯದ ವಿವಿಧೆಡೆಯಿಂದ ಕೆಎಸ್‍ಆರ್ ಟಿಸಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿತ್ತು. ನಗರ ಸಭೆ ಕಚೇರಿ ಸಮೀಪ ವಾಹನ ನಿಲು ಗಡೆಗೆ ಅವಕಾಶ ಕಲ್ಪಿಸಲಾಗಿತ್ತು.

Translate »