ನದಿಗೆ ಹಾರಿ, ತಾಯಿ ಮಗಳು ಆತ್ಮಹತ್ಯೆ
ಚಾಮರಾಜನಗರ

ನದಿಗೆ ಹಾರಿ, ತಾಯಿ ಮಗಳು ಆತ್ಮಹತ್ಯೆ

November 3, 2018

ಕೊಳ್ಳೇಗಾಲ: ಕಾವೇರಿ ನದಿಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಶಿವನಸಮುದ್ರದಿಂದ ವರದಿಯಾಗಿದೆ.ತಾಲೂಕಿನ ಶಿವನಸಮುದ್ರದ ಮಾರಮ್ಮ ದೇಗುಲದ ಬಳಿ ಯರಿಯೂರು ಗ್ರಾಮದ ಮಹದೇವಸ್ವಾಮಿ ಅವರ ಪತ್ನಿ ಮಮತ (35) ಹಾಗೂ ಮಗಳು ದರ್ಶಿನಿ(16) ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಿವನಸಮುದ್ರ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುವುದಾಗಿ ತೆರಳಿದ್ದ ನನ್ನ ಪತ್ನಿ ಹಾಗೂ ಮಗಳು ಕಾಲು ಜಾರಿ ನದಿಗೆÉ ಬಿದ್ದು ಸಾವಿಗೀಡಾಗಿರಬಹುದು. ಇವರ ಸಾವಿನ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೆÇಲೀಸರು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಮಹದೇವಸ್ವಾಮಿ ದೂರು ನೀಡಿದ್ದಾರೆ.

ತಾಯಿ-ಮಗಳ ಶವ ಪತ್ತೆಯಾಗುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಜಿಪಂ ಉಪಾಧ್ಯಕ್ಷ ಯೋಗೀಶ್, ಸಿಪಿಐ ರಾಜಣ್ಣ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಪರಿಶೀಲಿಸಿದರಲ್ಲದೆ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

Translate »