ಅನ್ನಭಾಗ್ಯ ಅಕ್ಕಿ ಸಾಗಣೆ: ಇಬ್ಬರ ಬಂಧನ, 160ಮೂಟೆ ಅಕ್ಕಿ ವಶ
ಚಾಮರಾಜನಗರ

ಅನ್ನಭಾಗ್ಯ ಅಕ್ಕಿ ಸಾಗಣೆ: ಇಬ್ಬರ ಬಂಧನ, 160ಮೂಟೆ ಅಕ್ಕಿ ವಶ

November 3, 2018

ಕೊಳ್ಳೇಗಾಲ: ಅಕ್ರಮವಾಗಿ ಹೊರ ರಾಜ್ಯಕ್ಕೆ ಸಾಗಿಸಲಾಗುತ್ತಿದ್ದ 160 ಮೂಟೆ ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯದ ಇಂದಿರಾ ನಗರ ನಿವಾಸಿ ನವೀದ್ ಪಾಷ ಹಾಗೂ ಟಿ.ನರಸೀಪುರ ತಾಲೂಕಿನ ಬನ್ನೂರು ಗ್ರಾಮದ ತೌಸಿಫ್ ಬಂಧಿತ ಆರೋಪಿಗಳು.

ಘಟನೆ ವಿವರ: ನವೀದ್ ಪಾಷ ಹಾಗೂ ತೌಸಿಫ್ ಟಾಟಾ ಎಸ್ 407 ಹಾಗೂ ಮಹೇಂದ್ರ ಜೀನೊ ವಾಹನದಲ್ಲಿ ಅಕ್ರಮವಾಗಿ ಬಡವರ ಪಾಲಿನ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಪಿಐ ರಾಜಣ್ಣ, ಎಸ್‍ಐ ಚೆಲುವರಾಜು ಮತ್ತು ಸಿಬ್ಬಂದಿಗಳಾದ ಗೋವಿಂದರಾಜು, ಶಂಕರ, ಸಕ್ರು ನಾಯಕ, ರಮೇಶ್ ಹಾಗೂ ರಘು ಸೇರಿದಂತೆ ಇನ್ನಿತರರು ಶುಕ್ರವಾರ ಬೆಳಿಗ್ಗೆ 5ರ ಸುಮಾರಿನಲ್ಲಿ ಕಾರ್ಯಾಚರಣೆ ನಡೆಸಿ ಚಿಲಕವಾಡಿಯ ಶಂಭುಲಿಂಗೇಶ್ವರ ಬಸ್ ನಿಲ್ದಾಣದ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಅಕ್ಕಿ ಸಾಗಣೆಗೆ ಬಳಸಲಾಗಿದ್ದ 2ವಾಹನ ಹಾಗೂ 160 ಚೀಲದಲ್ಲಿದ್ದ ಸುಮಾರು 8ಸಾವಿರ ಕೆಜಿ ಅಕ್ಕಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸಂಬಂಧ ಉಪವಿಭಾಗಾಧಿಕಾರಿಗಳಿಗೆ ಸಿಪಿಐ ರಾಜಣ್ಣ ವರದಿ ಸಲ್ಲಿಸಿದ್ದಾರೆ.

Translate »