ಪ್ರತ್ಯೇಕ ಪ್ರಕರಣ: ನಾಲ್ವರ ಬಂಧನ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಗಿಡ ವಶ
ಚಾಮರಾಜನಗರ

ಪ್ರತ್ಯೇಕ ಪ್ರಕರಣ: ನಾಲ್ವರ ಬಂಧನ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಗಿಡ ವಶ

November 3, 2018

ಚಾಮರಾಜನಗರ:  ಪ್ರತ್ಯೇಕ ಪ್ರಕರಣಗಳಲ್ಲಿ ಜಿಲ್ಲೆಯ ವಿವಿಧೆಡೆ ಲಕ್ಷಾಂ ತರ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಾ.ನಗರ: ಜಮೀನಿನಲ್ಲಿ ರಾಗಿ ಬೆಳೆ ಜೊತೆ ಗಾಂಜಾ ಬೆಳೆದಿದ್ದ ವ್ಯಕ್ತಿಯೋರ್ವನನ್ನು ರಾಮ ಸಮುದ್ರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಪುಣಜನೂರು ಸಮೀಪದ ಶ್ರೀನಿವಾಸಪುರ ಕಾಲೋನಿಯ ಜಡೇಗೌಡ ಬಂಧಿತ ಆರೋಪಿ.

ಜಡೇಗೌಡ ತನ್ನ ಜಮೀನಿನಲ್ಲಿ ರಾಗಿ ಬೆಳೆ ಜೊತೆ ಗಾಂಜಾ ಗಿಡಗಳನ್ನು ಬೆಳೆದಿದ್ದ ಎನ್ನ ಲಾಗಿದೆ. ಈ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಜಯಕುಮಾರ್, ಸಿಪಿಐ ರಾಜೇಂದ್ರ, ಎಸ್‍ಐ ಬಿ.ಪುಟ್ಟಸ್ವಾಮಿ ಮತ್ತು ಸಿಬ್ಬಂದಿ ಶುಕ್ರ ವಾರ ಜಮೀನಿಗೆ ದಾಳಿ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಜಮೀನಿನ ಲ್ಲಿಯೇ ಇದ್ದ ಜಡೇಗೌಡನನ್ನು ಬಂಧಿಸಿ, ಸುಮಾರು 60 ಕೆಜಿಯಷ್ಟು ಹಸಿರು ಗಾಂಜಾ ಸೊಪ್ಪನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‍ಐ ಪುಟ್ಟಸ್ವಾಮಿ ತಿಳಿಸಿದ್ದಾರೆ. ಆರೋಪಿ ಜಡೇ ಗೌಡನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹನೂರು: ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆಣಸಿನ ಗಿಡಗಳ ಮಧ್ಯೆ ಬೆಳೆದಿದ್ದ 39 ಗಿಡಗಳ 25ಕೆಜಿ ಗಾಂಜಾ ಗಿಡಗ ಳನ್ನು ವಶಕ್ಕೆ ಪಡೆದು ಜೆಲ್ಲಿಪಾಳ್ಯ ಗ್ರಾಮದ ನಿವಾಸಿ ಲೋರ್ದ್‍ಸ್ವಾಮಿ ಅವರನ್ನು ಹಾಗೂ ಕಾಡಂಚಿನ ಜಮೀನಿನಲ್ಲಿ ಅರಿಶಿನ ತೋಟದಲ್ಲಿ ಅಕ್ರಮವಾಗಿ ಬೆಳೆದಿದ್ದ 129 ಗಿಡಗಳ 155 ಕೆಜಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಭಾಗ್ಯರಾಜ್ ಎಂಬಾ ತನನ್ನು ರಾಮಾಪುರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ಪುಟ್ಟ ಮಾದಯ್ಯ, ರಾಮಾಪುರ ಇನ್ಸ್‍ಪೆಕ್ಟರ್ ಮನೋ ಜ್‍ಕುಮಾರ್, ಎಎಸ್‍ಐ ಚೆಲುವರಾಜು, ಮುಖ್ಯ ಪೇದೆಗಳಾದ ನಾಗೇಂದ್ರ, ಶಿವರಾಜು, ಸುರೇಶ್, ನಾಗಪ್ಪ, ಪೇದೆಗಳಾದ ರಘು, ಬೊಮ್ಮೇಗೌಡ, ಶ್ರೀನಿವಾಸ್, ನವೀನ್‍ಕುಮಾರ್, ಗ್ರಾಮ ಲೆಕ್ಕಿಗ ಶರವಣಕುಮಾರ್ ಇದ್ದರು.

ಮತ್ತೊಂದು ಪ್ರಕರಣದಲ್ಲಿ ಜಮೀನನ್ನು ಗುತ್ತಿಗೆ ಪಡೆದು ಅರಿಶಿನ ಬೆಳೆಯ ಮಧ್ಯೆ ಗಾಂಜಾ ಗಿಡ ಗಳನ್ನು ಬೆಳೆದಿದ್ದ ಕೂತ್ತನೂರು ನಿವಾಸಿ ನಟೇಶ್ ನನ್ನು ಬಂಧಿಸಿ, 4 ಗಿಡಗಳ 16 ಕೆಜಿ 400 ಗ್ರಾಂ ಗಾಂಜಾವನ್ನು ಹನೂರು ಠಾಣಾ ಪೊಲೀಸರು ಚಿಕ್ಕಲ್ಲೂರು ಗ್ರಾಮದ ಬಾಣೂರು ಗೇಟ್ ಬಳಿಯ ಜಮೀನೊಂದರಲ್ಲಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಳಿಯಲ್ಲಿ ಎಸ್‍ಐ ನಾಗೇಶ್ ಮುಖ್ಯಪೇದೆ ಮಲ್ಲಿಕಾರ್ಜುಸ್ವಾಮಿ, ಸಿದ್ದೇಶ್ ಹೂವಯ್ಯ, ರಾಮದಾಸ್, ವಿಶ್ವನಾಥ್, ಪೇದೆಗಳಾದ ಚಂದ್ರು, ವೀರಭದ್ರ, ಚಾಲಕ ಶಂಕರ್ ಇತರರಿದ್ದರು.

Translate »