ಕೂಡಿಗೆಯಲ್ಲಿ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು
ಹಾಸನ

ಕೂಡಿಗೆಯಲ್ಲಿ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

November 3, 2018

ಕುಶಾಲನಗರ: ಕೂಡಿಗೆ ಸರ್ಕಲ್ ಬಳಿ ಬೈಕ್‍ಗಳ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಕೂಡಿಗೆ ಸರ್ಕಲ್‍ನಿಂದ ತೆರಳುತ್ತಿದ್ದ ಕೂಡಿಗೆಕೊಪ್ಪಲು ಗ್ರಾಮ ನಿವಾಸಿ ವೀರಭದ್ರಪ್ಪ (ತಮ್ಮಣಿ-70) ನವರು ಸೋಮವಾರಪೇಟೆ ಕಡೆಗೆ ಆಕ್ಟಿವಾದಲ್ಲಿ ಹೋಗುತ್ತಿದ್ದ ವೇಳೆ ಕೂಡಿಗೆ ಮಸೀದಿ ಕಡೆಯಿಂದ ಬರುತ್ತಿದ್ದ ಅಬ್ದುಲ್ ರಜಾಕ್, ಸೊಫಿಯನ್ ಎಂಬುವರ ಬೈಕ್ ಡಿಕ್ಕಿಯಾಯಿತೆನ್ನಲಾಗಿದೆ. ಘಟನೆಯಿಂದ ವೀರಭದ್ರಪ್ಪನವರಿಗೆ ತೀವ್ರ ಪೆಟ್ಟಾದ ಕಾರಣ ಪ್ರಥಮ ಚಿಕಿತ್ಸೆಯನ್ನು ಕೂಡಿಗೆಯಲ್ಲಿ ನೀಡಿ ನಂತರ ಮೈಸೂರು ಅಪೆÇೀಲೊ ಆಸ್ಪತ್ರೆಗೆ ಸಾಗಿಸಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೆÀ ಅವರು ಮೃತಪಟ್ಟರೆನ್ನಲಾಗಿದೆ.

Translate »