ಕುಶಾಲನಗರ, ಪೊನ್ನಂಪೇಟೆ, ಸಾಲಿಗ್ರಾಮ, ಶಾಂತಿಗ್ರಾಮ ನೂತನ ತಾಲೂಕು
ಕೊಡಗು

ಕುಶಾಲನಗರ, ಪೊನ್ನಂಪೇಟೆ, ಸಾಲಿಗ್ರಾಮ, ಶಾಂತಿಗ್ರಾಮ ನೂತನ ತಾಲೂಕು

March 1, 2019

ಕುಶಾಲನಗರ: ಕುಶಾಲನಗರ ಮತ್ತು ಪೊನ್ನಂಪೇಟೆಯನ್ನು ತಾಲೂಕು ಕೇಂದ್ರ ಮಾಡ ಬೇಕೆಂಬ ಜಿಲ್ಲೆಯ ಜನತೆಯ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಿದೆ. ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧಿಕೃತವಾಗಿ ಘೋಷಣೆ ಮಾಡಿ ದರು. ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ 62 ತಾಲೂಕುಗಳಿಗೆ ಮೂಲಭೂತ ಸೌಕರ್ಯ ಗಳನ್ನು ಒದಗಿಸುವ ನಿಟ್ಟಿನಲ್ಲಿ ತಲಾ ರೂ.50 ಲಕ್ಷ ವಿಶೇಷ ಅನುದಾನವನ್ನು ಬಿಡುಗಡೆ ಮಾಡು ವುದಾಗಿ ಭರವಸೆ ನೀಡಿದರು.

ಕೊಡಗು ಜಿಲ್ಲಾಡಳಿತದ ವತಿಯಿಂದ ಬಸವನ ಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ದಿಡ್ಡಳ್ಳಿ ಗಿರಿಜನರ ನಿರಾಶ್ರಿ ತರಿಗೆ ಮನೆಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು. ಹಿಂದಿನ ಸರ್ಕಾರ ರಚಿಸಿದ್ದ 50 ತಾಲೂಕು ಹಾಗೂ ಸರ್ಕಾರ ರಚಿಸಿದ 12 ತಾಲೂಕು ಸೇರಿ ಒಟ್ಟು 62ಕ್ಕೂ ಯಾವುದೇ ಹಣ ಬಿಡುಗಡೆಯಾಗಿಲ್ಲ. ಈ ತಾಲೂಕು ಕೇಂದ್ರ ಗಳಲ್ಲಿ ಜನರ ಸೇವೆಗೆ ಅಗತ್ಯವಾಗಿ ಬೇಕಾಗಿರುವ ಮೂಲಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲ ತಾಲೂಕುಗಳಿಗೂ 25 ರಿಂದ 50 ಲಕ್ಷ ಅನುದಾನ ವನ್ನು ಒದಗಿಸಲಾಗುವುದು ಎಂದು ಹೇಳಿದರು.

ಆಡಳಿತಾತ್ಮಕ ಅನುಮೋದನೆ: ಈ ಮಧ್ಯೆ ಕೊಡಗಿನ ಕುಶಾಲನಗರ, ಪೊನ್ನಂಪೇಟೆ, ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ಸಾಲಿಗ್ರಾಮ, ಹಾಸನ ಜಿಲ್ಲೆ ಶಾಂತಿಗ್ರಾಮ, ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರದ ಚೇಳೂರು, ಬಾಗಲಕೋಟೆಯ ತೇರದಾಳ, ವಿಜಯಪುರದ ಅಲಮೇಲ, ಬೆಳಗಾವಿಯ ಯರಗಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹಾಗೂ ಉಲ್ಲಾಳವನ್ನು ಹೊಸ ತಾಲೂಕುಗಳಾಗಿ ರಚಿಸಲು ತಾತ್ಕಾಲಿಕ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿರುವ ಸರ್ಕಾರ, ಹೊಸ ತಾಲೂಕು ಕಚೇರಿ ಸೇರಿದಂತೆ ಇತರೆ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ಆರ್ಥಿಕ ಇಲಾಖೆ ಸಹಮತದೊಂದಿಗೆ ಹಂತ ಹಂತವಾಗಿ ತೆರೆಯುವುದಕ್ಕೆ ಅನುಮತಿ ನೀಡಿದೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಜನ್ಮಸ್ಥಳವೂ ಆದ ಸಾಲಿಗ್ರಾಮವನ್ನು ತಾಲೂಕು ಕೇಂದ್ರ ಮಾಡಬೇಕೆಂಬ ಅವರ ಹೆಬ್ಬಯಕೆ ಕೊನೆಗೂ ಈಡೇರಿದಂತಾಗಿದೆ.

Translate »