ಬಂಡೀಪುರ `ಕಿಡಿ’ಗೇಡಿ ಬಂಧನ
ಮೈಸೂರು

ಬಂಡೀಪುರ `ಕಿಡಿ’ಗೇಡಿ ಬಂಧನ

March 1, 2019

ಮೈಸೂರು: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬೆಂಕಿ ಇಟ್ಟಿದ್ದ ಪ್ರಮುಖ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಕಳ್ಳೀಪುರ ನಿವಾಸಿ ನಾಗಲಿಂಗೇಗೌಡ ಅವರ ಪುತ್ರ ಅರುಣ್ ಕುಮಾರ್‍ನನ್ನು ಬಂಧಿಸಿ, ನ್ಯಾಯಾ ಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಫೆ.22ರಂದು ರಾತ್ರಿ ಬೆಂಕಿ ಇಟ್ಟು ತಲೆಮರೆಸಿಕೊಂಡಿದ್ದ ಈತ, ಸಮೀಪದ ಗ್ರಾಮವೊಂದರ ಸಂಬಂಧಿಕರ ಮನೆಯಲ್ಲಿದ್ದ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಿದ್ದಾರೆ.

ಈತ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿ ನಲ್ಲಿರುವ ತಮ್ಮ ಜಮೀನಿನಲ್ಲಿ ರಾತ್ರಿ ವೇಳೆ ಮಲಗುತ್ತಿದ್ದ. ಫೆ.22ರಂದು ರಾತ್ರಿ 9.30ರಲ್ಲಿ 4 ಕಡೆ ಬೆಂಕಿ ಇಟ್ಟಿದ್ದನು. ಬೆಂಕಿ ಯನ್ನು ಕಂಡ ನಾಲ್ವರು ವಾಚರ್‍ಗಳು ಬೆಂಕಿ ನಂದಿಸಲು ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಆರೋಪಿ ಅರುಣ್‍ಕುಮಾರ್, ಕಾಡಿನಿಂದ ಓಡಿ ಬಂದು ತನ್ನ ಜಮೀನಿನಲ್ಲಿ ನಿರ್ಮಿಸಿಕೊಂಡಿದ್ದ ಶೆಡ್‍ನೊಳಗೆ ಹೋಗುತ್ತಿದ್ದುದ್ದನ್ನು ನೋಡಿ ದ್ದರು. ಈ ವೇಳೆ ಗಾರ್ಡ್‍ವೊಬ್ಬರು ಶೆಡ್ ಬಳಿ ತೆರಳಿದಾಗ ಅಲ್ಲಿಂದ ನಾಪತ್ತೆಯಾಗಿದ್ದ. ಆರೋಪಿ ಬಂಧನ ಕಾರ್ಯಾಚರಣೆಯಲ್ಲಿ ಗೋಪಾಲ ಸ್ವಾಮಿಬೆಟ್ಟ ವಲಯದ ಆರ್‍ಎಫ್‍ಓ ಹೆಚ್.ಪುಟ್ಟಸ್ವಾಮಿ, ಮತ್ತಿತರರಿದ್ದರು.

Translate »