ಹೆಚ್.ಡಿ.ಕುಮಾರಸ್ವಾಮಿ ಕೇವಲ  ಮೂರ್ನಾಲ್ಕು ಜಿಲ್ಲೆಗೆ ಮುಖ್ಯಮಂತ್ರಿ
ಮೈಸೂರು

ಹೆಚ್.ಡಿ.ಕುಮಾರಸ್ವಾಮಿ ಕೇವಲ ಮೂರ್ನಾಲ್ಕು ಜಿಲ್ಲೆಗೆ ಮುಖ್ಯಮಂತ್ರಿ

March 1, 2019

ಮೈಸೂರು: ರಾಜ್ಯ ದಲ್ಲಿ ಸಮ್ಮಿಶ್ರ ಸರ್ಕಾರ ಇದ್ದು ಇಲ್ಲದಂ ತಿದ್ದು, ಹೆಚ್.ಡಿ.ಕುಮಾರಸ್ವಾಮಿ ಕೇವಲ ಮೂರ್ನಾಲ್ಕು ಜಿಲ್ಲೆಗೆ ಮಾತ್ರ ಮುಖ್ಯ ಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಶಾಸಕ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಮೈಸೂರಿನ ಜೆ.ಕೆ.ಮೈದಾನದ ಮೈಸೂರು ಮೆಡಿಕಲ್ ಕಾಲೇಜು ಅಮೃತೋತ್ಸವ ಭವನದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಸಂವಾದ `ಮೇರಾ ಬೂತ್ ಸಬ್ ಸೇ ಮಜಬೂತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಸಾಧÀ್ಯವಿಲ್ಲ. ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಜನತೆಗೆ ತಿಳಿಯದಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಇಡೀ ನಾಡಿಗೆ ಸಿಎಂ ಆಗಿರದೆ, ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಸಿಎಂ ಆಗಿದ್ದಾರೆ. ಉತ್ತರ ಕರ್ನಾ ಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸುವ ಸದಾ ವಕಾಶ ಬಂದಿದೆ ಎಂದರು.

ಅತೀ ಹೆಚ್ಚು ಅನುದಾನ ತಂದ ಸಂಸದ ರಲ್ಲಿ ನಾನೇ ನಂ.1: ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕೇಂದ್ರ ಸರ್ಕಾರದಿಂದ ಅತಿ ಹೆಚ್ಚು ಅನುದಾನ ತಂದ ರಾಜ್ಯದ ಸಂಸದರಲ್ಲಿ ನಾನು ಮುಂಚೂಣಿ ಯಲ್ಲಿದ್ದೇನೆ. ರೈಲ್ವೆ ಸೇವೆ ಮತ್ತು ವಿಮಾನ ಸೇವೆ ಸುಧಾರಣೆ ಮಾಡಿz್ದÉೀನೆ. ಇನ್ನು ಒಂದು ವಾರದಲ್ಲಿ ಮೈಸೂರು- ಹೈದ್ರಾಬಾದ್ ನಡುವೆ ನೇರ ರೈಲು ಸೇವೆ ಆರಂಭವಾಗ ಲಿದೆ. ಮತ್ತೊಮ್ಮೆ ನಾನು ಗೆದ್ದರೆ ಮೈಸೂರು -ಮುಂಬೈ, ಮೈಸೂರು-ಕ್ಯಾಲಿಕಟ್ ನಡುವೆ ನೇರ ರೈಲು ಸೇವೆ ಕಲ್ಪಿಸುತ್ತೇನೆ. ದೇಶದ 2ನೇ ಹಂತದ ನಗರದೊಂದಿಗೆ ಸಂಪರ್ಕ ಸೇವೆ ಒದಗಿಸಿಕೊಡುತ್ತೇನೆ ಎಂದರು.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿವಾರ ಮತ್ತು ತಳವಾರ ಪಂಗಡ ಗಳನ್ನು ಪರಿಶಿಷ್ಟ ಪಂಗಡ(ಎಸ್ಟಿ)ದ ಪಟ್ಟಿಗೆ ಸೇರಿಸುವ ಕೆಲಸವನ್ನು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ರಾಗಿದ್ದ ಶ್ರೀರಾಮುಲು ಅವರ ಸೂಚನೆ ಮೇರೆಗೆ ಸುಮಾರು 12 ಇಲಾಖೆಗಳ ಸಚಿ ವಾಲಯಕ್ಕೆ ಅಲೆದು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೆಲಸ ಮಾಡಿದ್ದೇನೆ. ಈ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಶೇ.5ರಷ್ಟು ಮಾತ್ರ ಬಾಕಿ ಉಳಿದಿದೆ. ಇದಕ್ಕೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಒಪ್ಪಿಗೆ ಸಿಗಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಲ್. ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಡಾ. ಬಿ.ಹೆಚ್.ಮಂಜುನಾಥ್, ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ರಾಜ್ಯ ಕಾರ್ಯ ದರ್ಶಿ ಎಂ.ರಾಜೇಂದ್ರ, ಮುಖಂಡರಾದ ಹೆಚ್.ವಿ.ರಾಜೀವ್, ಫÀಣೀಶ್, ಸು.ಮುರುಳಿ, ಪಾಲಿಕೆ ಸದಸ್ಯ ಸತೀಶ್, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅರುಣ್‍ಕುಮಾರ್ ಗೌಡ, ಗಿರಿಧರ್ ಇತರರು ಉಪಸ್ಥಿತರಿದ್ದರು.

Translate »