ಮಡಿಕೇರಿ: ನಗರದ ಹೃದಯ ಭಾಗದಲ್ಲಿ ಹಳೆಯ ಖಾಸಗಿ ಬಸ್ ನಿಲ್ದಾ ಣವನ್ನು ಕೆಡವಲಾ ಗಿದ್ದು, ಆ ಸ್ಥಳದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುವುದು ಸರಿ ಯಲ್ಲ ಎಂದು ಮಡಿಕೇರಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಮಡಿಕೇರಿ ಕೊಡವ ಸಮಾಜದ ಹಾಲಿ ಅಧ್ಯಕ್ಷ ಕೆ.ಎಸ್. ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.
ನವೆಂಬರ್ 1 ರಂದು ‘ಮೈಸೂರು ಮಿತ್ರ’ ಪತ್ರಿಕೆಯಲ್ಲಿ ಪ್ರಧಾನ ಸಂಪಾದಕ ಕಲ್ಯಾಟಂಡ ಗಣಪತಿ ಅವರ ‘ಛೂ ಮಂತ್ರ’ ಅಂಕಣ ದಲ್ಲಿ ಪ್ರಕಟವಾದ ಹಳೆ ‘ಖಾಸಗಿ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣ ಬೇಡ’ ಎಂಬ ಲೇಖನಕ್ಕೆ ಕೆ.ಎಸ್. ದೇವಯ್ಯ ಪ್ರತಿಕ್ರಿಯೆ ನೀಡಿದರು.
‘ಮೈಸೂರು ಮಿತ್ರ’ದ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮಡಿಕೇರಿ ನಗರ ವನ್ನು ಪ್ರವಾಸೋದ್ಯಮದ ಹೆಸರಲ್ಲಿ ಬೆಳೆಸ ಲಾಗುತ್ತಿದೆ. ಆದರೆ ನಗರದಲ್ಲಿರುವ ವಾಣಿಜ್ಯ ಮಳಿಗೆ ಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಾಗಿದೆ. ಹೀಗಾಗಿ ಪ್ರವಾಸಿ ಗರೊಂದಿಗೆ ನಗರ ನಿವಾಸಿಗಳು ಕೂಡ ಟ್ರಾಫಿಕ್ ಸಮಸ್ಯೆಯಿಂದ ಸಂಕಷ್ಟ ಅನು ಭವಿಸುತ್ತಿದ್ದಾರೆ ಎಂದು ಹೇಳಿದರು.
ಈ ಪ್ರದೇಶ ಮೊದಲಿನಿಂದಲೂ ಕಿಷ್ಕಿಂ ಧೆಯಿಂದ ಕೂಡಿದ ಸ್ಥಳವಾಗಿದ್ದು, ತೆರ ವಾದ ಪ್ರದೇಶವನ್ನು ಖಾಲಿ ಬಿಡುವುದೇ ಸೂಕ್ತ. ಇದರಿಂದಾಗಿ ಪಟ್ಟಣದ ಹೃದಯ ಭಾಗದಲ್ಲಿ ಒಂದಷ್ಟು ಉಸಿರಾಡುವ ವಾತಾ ವರಣ ನಿರ್ಮಾಣವಾಗುತ್ತದೆ ಎಂದು ಕೆ.ಎಸ್. ದೇವಯ್ಯ ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ. ಕಟ್ಟಡ ಕಟ್ಟುವುದು ಮಾತ್ರ ಅಭಿವೃದ್ದಿ ಯಲ್ಲ. ನಗರದ ಮೂಲಭೂತ ಸೌಕರ್ಯ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವುದು ಕೂಡ ಅಭಿವೃದ್ಧಿಯ ಸಂಕೇತ ವಾಗಿದೆ. ಮುಂದಾಲೋಚನೆ ಹಾಗೂ ದೂರ ದೃಷ್ಟಿಯ ಚಿಂತನೆಯೊಂದಿಗೆ ಸ್ಥಳೀಯ ಆಡ ಳಿತ ವ್ಯವಸ್ಥೆ ಕಾಮಗಾರಿಗಳನ್ನು ನಡೆಸಬೇಕಾ ಗುತ್ತದೆ. ಇಲ್ಲವಾದಲ್ಲಿ ಪಟ್ಟಣದ ಹೃದಯ ಭಾಗವೇ ಜಂಜಾಟಗಳ ಸಂಕೋಲೆ ಯಲ್ಲಿ ಸಿಲುಕಿಕೊಳ್ಳುತ್ತದೆ. ಭವಿಷ್ಯದಲ್ಲಿ ಈ ಸಮ ಸ್ಯೆಗೆ ಪರಿಹಾರವೂ ದೊರಕಲಾರದು ಎಂದು ಕೆ.ಎಸ್. ದೇವಯ್ಯ ಅಭಿಮತ ವ್ಯಕ್ತಪಡಿಸಿದರು.