ಜಾಗತೀಕರಣದಿಂದ ಕನ್ನಡ ನಾಡು-ನುಡಿಗೆ ಸಮಸ್ಯೆ
ಕೊಡಗು

ಜಾಗತೀಕರಣದಿಂದ ಕನ್ನಡ ನಾಡು-ನುಡಿಗೆ ಸಮಸ್ಯೆ

November 3, 2018

ಮಡಿಕೇರಿ: ಕನ್ನಡಾಭಿಮಾನ ಎನ್ನುವುದು ಸ್ವಾಭಿಮಾನವಾಗಿ ಪರಿವರ್ತನೆ ಯಾಗುವವರೆಗೆ ಕನ್ನಡ ಹಾಗೂ ಕನ್ನಡಿ ಗರ ಸಮಸ್ಯೆಗಳು ಹಾಗೆಯೇ ಉಳಿದು ಬಿಡುವ ಆತಂಕವಿದೆ ಎಂದು ಪ್ರವಾಸೋದ್ಯಮ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತದ ವತಿಯಿಂದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನದ ಪರಿವೀ ಕ್ಷಣೆ ನಡೆಸಿ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದ ಅವರು, ನವೆಂಬರ್ ತಿಂಗಳಿಗೆ ಮಾತ್ರ ನಾವು ಕನ್ನಡಿಗರೆನಿಸಿಕೊಳ್ಳದೆ, ಪ್ರತಿಕ್ಷಣವು ನಾವು ಕನ್ನಡಿಗರಾದರೆ ಮಾತ್ರ ನಾಡು ಸಮೃದ್ಧಿಯನ್ನು ಕಾಣಲು ಸಾಧ್ಯ ವೆಂದು ಸಚಿವರು ಹೇಳಿದರು.

ಇಂಗ್ಲೀಷ್ ಭಾಷೆಯ ಪ್ರಾಬಲ್ಯದಿಂದ ಕರ್ನಾಟಕದಲ್ಲಿ ಕನ್ನಡ ಬಲ್ಲವರ ಸಂಖ್ಯೆ ಕುಸಿಯುತ್ತಿದೆಯಾದರೆ, ಕನ್ನಡ ಮಾತ್ರ ಬಲ್ಲ ವನು ಕೀಳರಿಮೆಯಿಂದ ತಲೆ ತಗ್ಗಿ ಸುವ ಸ್ಥಿತಿ ನಿರ್ಮಾಣವಾಗಿದೆಯೆಂದು ಬೆÉೀಸರಿಸಿ, ಕನ್ನಡ ಭಾಷೆಯ ಬಳಕೆ ಸಂಪೂರ್ಣವಾಗಿ ನಡೆಯಬೇಕೆನ್ನುವುದು ನಿರಂತರ ಪ್ರಕ್ರಿಯೆ ಯೆಂದು ತಿಳಿಸಿದರು.

ಗಾಂಧೀಜಿ ಹೇಳಿದಂತೆ ‘ಬೇರೆ ಸಂಸ್ಕøತಿ ಯನ್ನು ಪ್ರೀತಿಸು, ನಮ್ಮ ಸಂಸ್ಕøತಿಯಲ್ಲಿ ಜೀವಿಸು’ ಎನ್ನುವಂತೆ ಕನ್ನಡ ಭಾಷೆಯೊಂ ದಿಗೆ ಇತರ ಭಾಷೆಗಳನ್ನು ಕಲಿಯಬೇ ಕೆಂದು ಕರೆ ನೀಡಿದ ಸಚಿವರು, ಕನ್ನಡ ನಾಡು, ನುಡಿಗೆ ತನ್ನದೇ ಆದ ಸೌಂದರ್ಯವಿದ್ದು, ಇಂತಹ ಕನ್ನಡದ ಸಂಸ್ಕøತಿಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಾವು ಮಾಡ ಬೇಕಾಗಿದೆ ಎಂದರು.

ಜಾಗತೀಕರಣದ ಪ್ರಭಾವದಿಂದಾಗಿ 21ನೇ ಶತಮಾನದಲ್ಲಿ ಕನ್ನಡ ನಾಡು-ನುಡಿ ಸಾಕಷ್ಟು ಸಮಸ್ಯೆಗಳಿಗೆ ತುತ್ತಾಗುತ್ತಿದೆ. ಜ್ಞಾನ ಹಾಗೂ ತಂತ್ರಜ್ಞಾನ ಸಂಬಂಧಿ ಮಾಹಿತಿಗಳು ಕನ್ನಡಿ ಗರಿಗೆ ಕನ್ನಡದಲ್ಲೆ ಅವಶ್ಯಕವಾಗಿ ದೊರೆ ಯುವಂತೆ ಮಾಡಬೇಕು. ಆರ್ಥಿಕವಾಗಿ ಕನ್ನಡಿಗರು ಮತ್ತಷ್ಟು ಬಲಿಷ್ಠರಾಗಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದಕ್ಕೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಉಂಟಾದ ಸಂದರ್ಭ ದಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಹರಿದು ಬಂದ ನೆರವಿನ ಮಹಾಪೂರವೇ ಉತ್ಕøಷ್ಟ ಉದಾಹರಣೆಯಾಗಿದೆ. ಎಲ್ಲಿಯವ ರೆಗೆ ಕನ್ನಡಾಭಿಮಾನ ಜನಜೀವನ ವನ್ನು ತುಂಬಿಕೊಳ್ಳುವುದಿಲ್ಲವೋ, ಅದು ಸ್ವಾಭಿಮಾನ ವಾಗಿ ಪರಿವರ್ತನೆಯಾಗು ವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಹಾಗೂ ಕನ್ನಡಿಗರ ಸಮಸ್ಯೆಗಳು ಹಾಗೆಯೇ ಉಳಿದುಕೊಳ್ಳು ತ್ತದೆ ಎಂದರು.

ಮುಂಗಾರಿನ ಪ್ರಾಕೃತಿಕ ವಿಕೋಪದಿಂದ ಕೊಡಗಿನಲ್ಲಿ ಪ್ರವಾಹ ಮತ್ತು ಗುಡ್ಡ ಕುಸಿ ತಗಳಿಂದ ಮನೆ ಮಠಗಳನ್ನು ಕಳೆದುಕೊಂಡ ಸಂತ್ರಸ್ತರ ನೆರವಿಗೆ ಕರ್ನಾಟಕ ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ. ಕೊಡಗು ಜಿಲ್ಲೆಯ ಪುನರ್ ನಿರ್ಮಾಣ ರಾಜ್ಯ ಸರ್ಕಾರದ ಧ್ಯೇಯವಾಗಿದೆಯೆಂದು ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಶಾಸಕರುಗಳಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಎಂ.ಪಿ.ಸುನೀಲ್ ಸುಬ್ರ ಮಣಿ, ವೀಣಾ ಅಚ್ಚಯ್ಯ, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಸುಮನ್ ಡಿ.ಪೆನ್ನೇಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್, ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗ ದೀಶ್, ಉಪ ವಿಭಾಗಾಧಿಕಾರಿ ಟಿ.ಜವರೇ ಗೌಡ, ಡಿವೈಎಸ್‍ಪಿ ಸುಂದರರಾಜ್ ಮತ್ತಿ ತರರು ಹಾಜರಿದ್ದರು. ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಪ್ರದರ್ಶನ ಮಾಡಿದ ಸಾಂಸ್ಕøತಿಕ ಕಾರ್ಯಕ್ರಮ ವಿಶೇಷವಾಗಿತ್ತು, ನಗರಸಭೆ ವತಿಯಿಂದ ನಿರ್ಮಾಣ ಮಾಡಲಾ ಗಿದ್ದ ಸ್ತಬ್ದಚಿತ್ರ ಆಕರ್ಷಣಿಯವಾಗಿತ್ತು.

ಸನ್ಮಾನ-ಬಹುಮಾನ: ದೆಹಲಿಯ ಗಣ ರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಂಡ ಮಡಿಕೇರಿಯ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್ ಗಳಾದ ಜೋವಿನ್ ಜೋಸೆಫ್ ಮತ್ತು ಕೃತೇಶ್ ಅವರನ್ನು ಗೌರವಿಸಲಾಯಿತು.
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾದ ಭಾಗಮಂಡಲ, ಪಾಲಿಬೆಟ್ಟ ಮತ್ತು ಹೆಬ್ಬಾಲೆ ಗ್ರಾಪಂಗಳ ಅಧ್ಯಕ್ಷರುಗಳಾದ ಸುಮಿತ್ರ, ಪುಲಿಯಂಡ ಬೋಪಣ್ಣ ಮತ್ತು ಲತಾ ಹಾಗೂ ಪಿಡಿಒಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕನ್ನಡ ರಾಜ್ಯೋ ತ್ಸವ ಪ್ರಯುಕ್ತ ಆಯೋಜಿತ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತ ರಿಸಲಾಯಿತು.

ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯಧಿಕ ಅಂಕ ಗಣಿಸಿದ ವರಿಷ್ಮಾ, ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ ಗ್ರೀಷ್ಮಾ ಮತ್ತು ವಾಣಿಜ್ಯ ವಿಭಾಗದಲ್ಲಿ ಅಧಿಕ ಅಂಕ ಪಡೆದ ರಂಜಿತಾ ಅವರಿಗೆ ವಿಶೇಷ ಬಹು ಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಆಕರ್ಷಕ ಪಥ ಸಂಚಲನ: ಕನ್ನಡ ರಾಜ್ಯೋ ತ್ಸವ ಸಮಾರಂಭದಲ್ಲಿ ನಡೆದ ಆಕರ್ಷಕ ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದ ಸಂತ ಮೈಕೆಲರ ಶಾಲೆಯ ಸೇವಾ ದಳ, ದ್ವಿತೀಯ ಸ್ಥಾನ ಪಡೆದ ಸಂತ ಜೋಸೆಫರ ಶಾಲೆಯ ಗೈಡ್ಸ್ ತಂಡ ಹಾಗೂ ತೃತೀಯ ಸ್ಥಾನ ಪಡೆದ ಸರಕಾರಿ ಪದವಿ ಪೂರ್ವ ಕಾಲೇಜಿನ ಸೇವಾದಳ ತಂಡಕ್ಕೆ ಬಹುಮಾನ ಗಳನ್ನು ವಿತರಿಸಲಾಯಿತು.
ಪಥ ಸಂಚಲನದಲ್ಲಿ ಪಾಲ್ಗೊಂಡ ಸ್ತಬ್ಧ ಚಿತ್ರಗಳ ಪೈಕಿ ಮಡಿಕೇರಿ ನಗರಸಭೆಯ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ ಕ್ರಮಗಳು ಸ್ತಬ್ಧ ಚಿತ್ರಕ್ಕೆ ಪ್ರಥಮ, ಮಡಿಕೆÉೀರಿ ತಾಲೂಕು ಪಂಚಾಯ್ತಿಯ ಗ್ರಾಮೀಣ ಉದ್ಯೋಗ ಖಾತರಿ ಕುರಿತ ಸ್ತಬ್ಧ ಚಿತ್ರಕ್ಕೆ ದ್ವಿತೀಯ ಹಾಗೂ ಜಿಲ್ಲಾ ಪಂಚಾಯ್ತಿಯ ಸ್ವಚ್ಛ ಭಾರತ್ ಮಿಷನ್ ಸ್ತಬ್ಧ ಚಿತ್ರಕ್ಕೆ ತೃತೀಯ ಬಹುಮಾನವನ್ನು ನೀಡಲಾಯಿತು.

Translate »