ಜಾಗತೀಕರಣದಿಂದ ಕನ್ನಡ ಪ್ರಜ್ಞೆ ಮಾಯ
ಮೈಸೂರು

ಜಾಗತೀಕರಣದಿಂದ ಕನ್ನಡ ಪ್ರಜ್ಞೆ ಮಾಯ

November 3, 2018

ಮೈಸೂರು: ಜಾಗತೀಕರಣವು ವೈವಿಧ್ಯತೆಯನ್ನು ನಾಶಪಡಿಸುತ್ತಿರುವಂತೆ ಕನ್ನಡ ಪ್ರಜ್ಞೆಯನ್ನು ನಾಶಪಡಿಸುತ್ತಿದೆ ಎಂದು ಮಹಾರಾಣಿ ಕಾಲೇಜು ಪ್ರಾಧ್ಯಾಪಕ ಪ್ರೊ. ಎಂ.ಕೃಷ್ಣಮೂರ್ತಿ ವಿಷಾದಿಸಿದರು. ನಗರದ ಬಿ.ಎನ್.ರಸ್ತೆಯ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಸೇರಿದಂತೆ ಇಂದು ಅನೇಕ ಆಚರಣೆಗಳು ತಾಂತ್ರಿಕವಾಗಿ ಹೋಗಿವೆ. ಚರ್ಚಿಸುವ ಅವಕಾಶವೇ ಇಲ್ಲವಾಗು ತ್ತಿದೆ. ಹಾಗಾಗಿ ನಮ್ಮತನವನ್ನು ನಾವೇ ಉಳಿಸಿಕೊಳ್ಳಬೇಕಾಗಿದ್ದು, ಭಾಷಾವಾರು ಪ್ರಾಂತ್ಯ ರಚನೆಯು ವೈವಿಧ್ಯತೆಗೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಅಂತಹ ವೈವಿಧ್ಯತೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಉಳಿಸಿಕೊಳ್ಳುವ ಮೂಲಕ ಕನ್ನಡ ಅಸ್ಮಿತೆಗಾಗಿ ನಾವು ಶ್ರಮಿಸಬೇಕು ಎಂದು ಸಲಹೆ ನೀಡಿದರು. ಕಾಲೇಜು ಸಮುಚ್ಛಯ ಮುಖ್ಯ ಕಾರ್ಯ ನಿರ್ವಾಹಕ ಪ್ರೊ. ಬಿ.ವಿ.ಸಾಂಬಶಿವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಎಂ.ಮಹ ದೇವಪ್ಪ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಸೋಮಶೇಖರ್ ಇತರರಿದ್ದರು

Translate »