ಮಲೈಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯ ರಥೋತ್ಸವ
ಚಾಮರಾಜನಗರ

ಮಲೈಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯ ರಥೋತ್ಸವ

November 9, 2018

ಹನೂರು: ತಾಲೂಕಿನ ಮಲೈ ಮಲೇಮಹದೇಶ್ವರ ಬೆಟ್ಟದಲ್ಲಿ ದೀಪಾ ವಳಿ ಹಬ್ಬದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾರಥೋತ್ಸವ ವಿಧಿ ವಿದಾನಗಳ ಪೂಜಾ ಕಾರ್ಯಗಳು ಜರುಗಿದವು. ಲಕ್ಷಾಂತರ ಭಕ್ತರು ವಿಜೃಂಭಣೆಯಿಂಧ ನಡೆದ ಮಹಾರಥೋತ್ಸವಕ್ಕೆ ಸಾಕ್ಷಿಯಾದರು.

ಬೆಳಿಗ್ಗೆ 4 ಗಂಟೆಯಿಂದ ಮಹದೇಶ್ವರ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ, ಪೂಜಾ ಕಾರ್ಯಗಳು ಜರುಗಿದವು. ಬೇಡಗಂಪಣ ಜನಾಂಗದ 101 ಹೆಣ್ಣು ಮಕ್ಕಳು ಕಳಸ ಹಿಡಿದು ಆರತಿ ಎತ್ತಿ ತೇರಿಗೆ ಸ್ವಾಗತಿಸಿ ದರು. ಬಳಿಕ ರಥೋತ್ಸವದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಸಾಲೂರು ಮಠಾಧೀಶರಾದ ಗುರುಸ್ವಾಮಿಗಳು ಚಾಲನೆ ನೀಡಿದರು. ಈ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ.ಗಾಯತ್ರಿ, ಉಪ ಕಾರ್ಯದರ್ಶಿ ರಾಜಶೇಖರ ಮೂರ್ತಿ ಮತ್ತು ಅಧೀಕ್ಷಕ ಬಸವರಾಜು ಹಾಗೂ ಪ್ರಾಧಿಕಾರದ ಎಲ್ಲಾ ನೌಕರ ವರ್ಗದವರು ಮತ್ತು ಅರ್ಚಕ ವೃಂದದವರು ಉಪಸ್ಥಿತರಿದ್ದರು.

ಮಹಾರಥೋತ್ಸವ: ಬೆಳಿಗ್ಗೆ 8 ಗಂಟೆಗೆ ಆರಂಭವಾದ ರಥೋತ್ಸವ ಬೆಳಿಗ್ಗೆ 9 ಗಂಟೆಯವರೆಗೆ ಮಹಾರಥೋತ್ಸವ ದೇಗುಲದ ಸುತ್ತ ಮೂರು ಸುತ್ತು ಪ್ರದಕ್ಷಿಣಿಯನ್ನು ಹಾಕುವ ಮೂಲಕ ವಿಜೃಂಭಣಿಯಿಂದ ಸಾಗಿತು. ಈ ಸಂದರ್ಭದಲ್ಲಿ ಹರ್ಷೋದ್ಗಾರ ದಿಂದ ಮಾದಪ್ಪನ ಭಕ್ತ ಸಮೂಹ ಉಘೇ ಉಘೇ ಎಂದರು. ನಂತರ ಹರಕೆ ಹೊತ್ತ ಮಾದಪ್ಪನ ಭಕ್ತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಧವಸ ಧಾನ್ಯಗಳಾದ ಅವರೆ ರಾಗಿ ಮೆಣಸು ನವಣೆ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಮೀಸಲು ಮಾಡದೆ ತೆಗೆದಿಟ್ಟು ಈ ರಥೋತ್ಸವದಲ್ಲಿ ತೇರಿಗೆ ಎಸೆದು ಹರಕೆ ಸಮರ್ಪಿಸಿದ್ದು ವಿಶೇಷ ವಾಗಿ ಕಂಡು ಬಂದಿತು.

ಭಕ್ತರ ದಂಡು: ದೀಪಾವಳಿ ರಥೋ ತ್ಸವದ ಹಿನ್ನಲೆಯಲ್ಲಿ ರಾಜ್ಯದ ನಾನಾ ಭಾಗ ಗಳಿಂದ ಬಂದಿದ್ದ ಲಕ್ಷಾಂತರ ಭಕ್ತಾಧಿ ಗಳು ಮಾದಪ್ಪನಿಗೆ ಉಘೇ ಉಘೇ ಜೈಕಾ ರಗಳನ್ನು ಕೂಗುವ ಮೂಲಕ ಹಾಗೂ ತೇರನ್ನು ಹಗ್ಗವಿಡಿದು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ಈ ಬಾರಿ ರಥೋತ್ಸವದ ವೇಳೆ ಸಾಗಾ ರೋಪಾದಿಯಲ್ಲಿ ಜನ ಸಾಗರವೇ ಕಂಡು ಬಂದಿದ್ದು ವಿಶೇಷವಾಗಿತ್ತು.

Translate »