ಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳಿಂದ ಸ್ವಯಂ ಪ್ರೇರಿತ ರಕ್ತದಾನ
ಚಾಮರಾಜನಗರ

ಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳಿಂದ ಸ್ವಯಂ ಪ್ರೇರಿತ ರಕ್ತದಾನ

November 9, 2018

ಕೊಳ್ಳೇಗಾಲ: ತಾಲೂಕಿನ ಮಲೈಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಪ್ರಥಮ ಬಾರಿಗೆ ಹನೂರು ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ಉದ್ಭವ್ ಸಂಸ್ಥೆ ಹಾಗೂ ಚಾ.ನಗರ ವೈದ್ಯ ಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಅಯೋಜಿಸಲಾಗಿತ್ತು. ಶಿಬಿರದಲ್ಲಿ ಮಾದಪ್ಪನ ದರ್ಶನಕ್ಕೆ ಆಗ ಮಿಸಿದ 34ಮಂದಿಗೂ ಅಧಿಕ ಭಕ್ತರು ರಕ್ತ ದಾನದಲ್ಲಿ ಪಾಲ್ಗೊಂಡು 34ಯೂನಿಟ್ ರಕ್ತ ಸಂಗ್ರಹಕ್ಕೆ ಕಾರಣರಾದರು.

ಶಿಬಿರದಲ್ಲಿ ಹನೂರು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ್ ಮೊದಲಿಗೆ ರಕ್ತ ದಾನದಲ್ಲಿ ಪಾಲ್ಗೊಂಡರು. ಅಂಚೆ ಇಲಾ ಖೆಯ ಮಹದೇಶ್ವರ ಬೆಟ್ಟದ ನೌಕರ ರವಿ ಕುಮಾರ್ ಸಾಥ್ ನೀಡಿದರು. ಶಿಬಿರ ವನ್ನು ಚಾ.ನಗರ ಜಿಲ್ಲಾ ಅರವಳಿಕೆ ತಜ್ಞರೂ, ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳೂ ಆದ ಡಾ.ಮಹೇಶ್ ಚಾಲನೆ ನೀಡಿ ಮಾತನಾಡಿ, ಇದೇ ಮೊದಲ ಬಾರಿಗೆ ರೆಡ್ ಕ್ರಾಸ್ ಸಂಸ್ಥೆ ಇಂತಹ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದೆ. ದೀಪಾ ವಳಿ ಹಬ್ಬಕ್ಕೆ ಮ.ಬೆಟ್ಟದಲ್ಲಿ ಭಕ್ತರ ಸಂಖ್ಯೆ ಹೆಚ್ಚ ಳವಾಗಲಿದೆ. ಹಾಗಾಗಿ ಅಲ್ಲಿ ಸ್ವಚ್ಛತೆ ಹಾಗೂ ರಕ್ತಧಾನದ ಬಗ್ಗೆ ಅರಿವ ಮೂಡಿಸುವ ಹಿನ್ನೆಲೆ ಸ್ವಯಂಪ್ರೇರಿತ ರಕ್ತದಾನಕ್ಕೆ ಕ್ರಮವಹಿಸಲಾ ಗಿತ್ತು. ಶಿಬಿರದಲ್ಲಿ 34 ಯೂನಿಟ್ ರಕ್ತ ಸಂಗ್ರ ಹವಾಗಿದೆ. ಸ್ವಯಂ ಪ್ರೇರಿತ ರಕ್ತದಾನದಲ್ಲಿ ಪಾಲ್ಗೊಂಡ ಭಕ್ತರು ರಕ್ತದಾನ ಮಾಡು ವುದೇ ಒಂದು ಸೇವೆ ಎಂಬುದನ್ನು ನಿರೂಪಿ ಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನ.21ರಂದು ಹನೂರು ತಾಲೂಕಿನ ಮಂಗ ಲದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಮಹಿಳೆಯರಿಗೆ ಸ್ತನ ಕ್ಯಾನ್ಯರ್ ತಪಾಸಣಾ ಶಿಬಿರವನ್ನು ಕೊಯ ಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಹಾಗೂ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಅಯೋಜಿಸ ಲಾಗಿದ್ದು, ಶಿಬಿರದಲ್ಲಿ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಡಾ.ಮಹೇಶ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚಾ.ನಗರ ಜಿಲ್ಲಾ ಸ್ಪತ್ರೆಯ ಹೆರಿಗೆ ಮತ್ತು ಪ್ರಸೂತಿ ತಜ್ಞರಾದ ಡಾ.ಭಾರತಿ ಮಹೇಶ್. ರಕ್ತನಿಧಿ ಅಧಿ ಕಾರಿ ಸುಜಾತ.ಉದ್ಭವ್ ಸಂಸ್ಥೆಯ ವ್ಯವ ಸ್ಥಾಪಕಿ ಕೋಮಲ, ಮ.ಬೆಟ್ಟ ವೈದ್ಯಾಧಿ ಕಾರಿ ಡಾ.ಚೇತನ್, ಶಿಕ್ಷಕ ನಾಗೇಂದ್ರ, ಪ್ರದೀಪ್ ಕುಮಾರ್, ವಿಶ್ವ ಇನ್ನಿತರರು ಇದ್ದರು.

Translate »