ಮೈಸೂರು ಜಿಲ್ಲಾ ಬಿಸಿಎಂ ಅಧಿಕಾರಿಯಾಗಿ ಜಿ.ಎಸ್.ಸೋಮಶೇಖರ್ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ಜಿಲ್ಲಾ ಬಿಸಿಎಂ ಅಧಿಕಾರಿಯಾಗಿ ಜಿ.ಎಸ್.ಸೋಮಶೇಖರ್ ಅಧಿಕಾರ ಸ್ವೀಕಾರ

June 12, 2018

ಮೈಸೂರು: ಮೈಸೂರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿ ಜಿ.ಎಸ್.ಸೋಮಶೇಖರ್ ಸೋಮ ವಾರ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಮೈಸೂರಿನ ಬಿಸಿಎಂ ಅಧಿಕಾರಿಯಾಗಿದ್ದ ಅವರನ್ನು ಕಳೆದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಗೆ ವರ್ಗಾವಣೆಗೊಳಿ ಸಲಾಗಿತ್ತು. ಮೈಸೂರು ಬಿಸಿಎಂ ಅಧಿಕಾರಿಯಾಗಿದ್ದ ಸಂದರ್ಭ ದಲ್ಲಿ ಅವರು ಮೈಸೂರು ಯುವ ದಸರಾ, ಯುವ ಸಂಭ್ರ ಮದ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿ ಸಮಿತಿ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ಸೇವಾರತ್ನ ಪ್ರಶಸ್ತಿಯನ್ನು ಪಡೆದಿದ್ದರು. ಇದೀಗ ಮತ್ತೇ ಅವರು ಮೈಸೂರು ಜಿಲ್ಲಾ ಬಿಸಿಎಂ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೈಸೂರು ಜಿಲ್ಲಾ ಬಿಸಿಎಂ ಅಧಿಕಾರಿಯಾಗಿದ್ದ ರೇಣುಕಾಂಬ ಮಂಡ್ಯ ಜಿಲ್ಲಾ ಬಿಸಿಎಂ ಅಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ.

Translate »