ನನಗೆ ಶಾಸಕ ಸ್ಥಾನ ಹೆಚ್ಚಿನ ಮೌಲ್ಯ ತಂದು ಕೊಟ್ಟಿದೆ
ಮೈಸೂರು

ನನಗೆ ಶಾಸಕ ಸ್ಥಾನ ಹೆಚ್ಚಿನ ಮೌಲ್ಯ ತಂದು ಕೊಟ್ಟಿದೆ

June 5, 2018

ಮಂಡ್ಯ: ಪ್ರಸ್ತುತ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದು, ಶಾಸಕನಾಗಿ ಆಯ್ಕೆಯಾಗಿರುವುದು ನನಗೆ ಹೆಚ್ಚಿನ ಮೌಲ್ಯ ತಂದು ಕೊಟ್ಟಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಬಿಎಸ್‍ಪಿ ಶಾಸಕ ಮಹೇಶ್ ಅಭಿಪ್ರಾಯಪಟ್ಟರು.

ಶಾಸಕನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಈ ನನ್ನ ವಿಜಯ ಇಡೀ ಕರ್ನಾಟಕದ ಬಿಎಸ್‍ಪಿ ಪಕ್ಷದ ಕಾರ್ಯ ಕರ್ತರಿಗೆ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಪಕ್ಷ ಮುನ್ನಡೆಸಲು ಈ ಅಧಿಕಾರ ಮುನ್ನುಡಿಯಾಗಲಿದೆ. ಹೀಗಾಗಿ ಈ ಸ್ಥಾನ ನನಗೆ ಮೌಲ್ಯಯುತವೆನಿಸುತ್ತದೆ ಎಂದು ಹೇಳಿದರು.

ನಾನು ಆದಿಚುಂಚನಗಿರಿಗೆ ಭೇಟಿ ನೀಡುತ್ತಿರುವುದು ಕೇವಲ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಮಾತ್ರ. ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ನಾನು ಇಲ್ಲಿಗೆ ಮಂತ್ರಿ ಸ್ಥಾನಕ್ಕೆ ಲಾಬಿ ಮಾಡಲು ಬಂದಿಲ್ಲವೆಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಅದರಲ್ಲಿ ಬಹುಜನ ಸಮಾಜವಾದಿ ಪಕ್ಷವೂ ಪಾಲುದಾರ ಪಕ್ಷವಾಗಿದೆ. ನಮ್ಮ ಪಕ್ಷದಿಂದ ನಾನೊಬ್ಬನೇ ಆಯ್ಕೆಯಾಗಿರು ವುದರಿಂದ ನನಗೂ ಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿರುವುದು ಜೊತೆಗೆ ನಾನು ಸಮಾಜ ಕಲ್ಯಾಣ ಖಾತೆ ಪಡೆಯುವ ಭರವಸೆಯಿತ್ತು. ಇದು ಮಾಧ್ಯಮದಲ್ಲೂ ಸಹ ಪ್ರಕಟವಾಗಿತ್ತು. ಆದರೆ ಆ ಖಾತೆ ಕಾಂಗ್ರೆಸ್ ಪಾಲಾಗಿರು ವುದರಿಂದ ಇನ್ನುಳಿದಂತಹವುಗಳಲ್ಲಿ ಶಿಕ್ಷಣ ಖಾತೆ ನೀಡಿದರೆ ಉತ್ತಮವಾಗಿ ನಿಭಾಯಿಸುತ್ತೇನೆಂಬ ವಿಶ್ವಾಸವಿದೆ ಎಂದರು.

ರೈತರಿಗೆ ಅನುಕೂಲ ಮಾಡಿಕೊಡ ಬಹುದಾದಂತಹ ಸಣ್ಣ ನೀರಾವರಿ ಖಾತೆ ನೀಡಿದಲ್ಲಿ ಎಷ್ಟೋ ಕೆರೆಗಳು ಇಂದು ನೀರಿ ಲ್ಲದೇ ಒಣಗುತ್ತಿದ್ದು, ಅಂತರ್ಜಲ ಹೆಚ್ಚಿಸು ವುದರ ಜೊತೆಗೆ ನೀರನ್ನು ಸಂಗ್ರಹಿಸಿ ಬೇಸಿಗೆ ಕಾಲದಲ್ಲಿ ನೀರಿಲ್ಲದಿದ್ದರೂ ರೈತರು ಬೆಳೆ ಬೆಳೆಯುವಂತಹ ಕಾರ್ಯಕ್ರಮವನ್ನು ಆ ಖಾತೆಯ ಮೂಲಕ ಮಾಡಿಕೊಡುವ ಅಭಿಲಾಷೆ ಇದೆ. ನನಗೊಂದು ಮಹತ್ವದ ಖಾತೆ ನೀಡುತ್ತಾರೆಂಬ ನಂಬಿಕೆಯಿದೆ ಎಂದು ಶಾಸಕ ಮಹೇಶ್ ಹೇಳಿದರು.

ಪಟ್ಟಣಕ್ಕೆ ಆಗಮಿಸಿದ ಮಹೇಶ್ ಅವರನ್ನು ಬಿಎಸ್‍ಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ಈ ಸಂದರ್ಭ ಜಿಲ್ಲಾ ಬಿಎಸ್ಪಿ ಅಧ್ಯಕ್ಷ ನರಸಿಂಹಮೂರ್ತಿ, ಮಾಜಿ ತಾಪಂ ಸದಸ್ಯ ಶಿವರಾಮಯ್ಯ, ತಾಲೂಕು ಅಧ್ಯಕ್ಷ ದಸಂಸ ಮುಖಂಡರಾದ ಕಂಚಿನಕೋಟೆ ಮೂರ್ತಿ, ಬೆಳ್ಳೂರು ಶಿವಣ್ಣ, ಬೆಟ್ಟದ ಮಲ್ಲೇನಹಳ್ಳಿ ರಮೇಶ್, ವರದರಾಜು ಮುಂತಾದವರಿದ್ದರು.

Translate »