ಬನ್ನಿ ವಿದ್ಯಾರ್ಥಿಗಳೇ, ಕಳೆಯಿತು ಆ ಬೇಸಿಗೆ ರಜೆ: ಮೆರವಣಿಗೆ ಮೂಲಕ ಸಿಹಿ ನೀಡಿ ಶಾಲೆಗೆ ಸ್ವಾಗತ
ಚಾಮರಾಜನಗರ

ಬನ್ನಿ ವಿದ್ಯಾರ್ಥಿಗಳೇ, ಕಳೆಯಿತು ಆ ಬೇಸಿಗೆ ರಜೆ: ಮೆರವಣಿಗೆ ಮೂಲಕ ಸಿಹಿ ನೀಡಿ ಶಾಲೆಗೆ ಸ್ವಾಗತ

May 30, 2018

ಚಾಮರಾಜನಗರ:  ಕಳೆದ 45 ದಿನಗಳಿಂದ ಬೇಸಿಗೆ ರಜೆಯ ಮೂಡ್‍ನಲ್ಲಿದ್ದು, ಎಂಜಾಯ್ ಮಾಡುತ್ತಿದ್ದ ವಿದ್ಯಾರ್ಥಿಗಳು, ಮಂಗಳವಾರದ ಒಲ್ಲದ ಮನಸ್ಸಿನಿಂದಲೇ ಶಾಲೆಗೆ ತೆರಳಿದರು.

ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಸಿಹಿ ಊಟ ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಹೃತ್ಪೂ ರ್ವಕವಾಗಿ ಸ್ವಾಗತಿಸಲಾಯಿತು. ಆದರೆ ಚಾಮರಾಜನಗರದಲ್ಲಿ ಸರ್ಕಾರಿ ಶಾಲೆ ಯೊಂದರಲ್ಲಿ ವಿದ್ಯಾರ್ಥಿಗಳನ್ನು ಗೊರವರ ಕುಣ ತದೊಂದಿಗೆ ಹೂ ನೀಡಿ, ಸಿಹಿ ವಿತ ರಿಸಿ ಬರಮಾಡಿಕೊಳ್ಳಲಾಯಿತು.

ಹಳೇ ವಿದ್ಯಾರ್ಥಿನಿಯರು ಕಳಸ ಹೊತ್ತು ಪೂರ್ಣಕುಂಬ ಸ್ವಾಗತದೊಂದಿಗೆ ನೂತನ ವಿದ್ಯಾರ್ಥಿಗಳನ್ನು ಬರಮಾಡಿ ಕೊಂಡಿದ್ದು ವಿಶೇಷವಾಗಿತ್ತು.

ಚಾಮರಾಜನಗರ ಚೆನ್ನಿಪುರದಮೋಳೆ ಬಡಾವಣೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಈ ಶಾಲೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ಶಾಲೆ ಆರಂಭದ ದಿನ ದಂದು ವಿಶೇಷ ರೀತಿಯಲ್ಲಿ ವಿದ್ಯಾರ್ಥಿ ಗಳನ್ನು ಶಾಲೆಗೆ ಬರಮಾಡಿಕೊಳ್ಳಲಾಗು ತ್ತದೆ. ಅದರಂತೆ ಈ ವರ್ಷವೂ ಸಹ ಶಾಲೆಯ ಹಳೆ ಹಾಗೂ ಹೊಸ ವಿದ್ಯಾ ರ್ಥಿಗಳನ್ನು ವಿಶೇಷ ರೀತಿಯಲ್ಲಿ ಬರ ಮಾಡಿಕೊಳ್ಳಲಾಯಿತು.

ನಡೆದಿದ್ದು ಏನು?: ಶಾಲೆಯ ಮುಖ್ಯ ಗೇಟ್‍ನಲ್ಲಿ ‘ಶಾಲೆ ಆರಂಭವಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಸ್ವಾಗತ’ ಎಂದು ಬ್ಯಾನರ್ ಹಾಕಲಾಗಿತ್ತು. ಶಾಲೆಗೆ ಆಗಮಿಸಿದ ಎಲ್ಲಾ ಹಳೆಯ ವಿದ್ಯಾರ್ಥಿಗಳಿಗೆ ಮೊದಲು ಬಾದಾಮಿ ಹಾಲು ವಿತರಿಸಿ ಅವರನ್ನು ಸ್ವಾಗತಿಸಲಾಯಿತು. ನಂತರ ಶಾಲೆಯಿಂದ ಬ್ಯಾಂಡ್‍ಸೆಟ್ ಹಾಗೂ ಗೊರವರ ಕುಣ ತ ದೊಂದಿಗೆ ಶಾಲೆಯ ಹಳೆ ವಿದ್ಯಾರ್ಥಿ ನಿಯರು ಕಳಸ ಹೊತ್ತುಕೊಂಡು ಗ್ರಾಮದ ಬೀದಿಗಳಿಗೆ ಮೆರವಣಿಗೆ ಹೊರಟರು. ಶಾಲೆಗೆ ಆಗಮಿಸಿದ ಹಳೆ ವಿದ್ಯಾರ್ಥಿಗಳು ಹಾಗೂ ನೂತನವಾಗಿ ಸೇರ್ಪಡೆಗೊಂಡಿದ್ದ ಮಕ್ಕಳನ್ನು ಮೆರವಣಿಗೆ ಗೆ ಸೇರಿಸಿಕೊಂಡರು. ಶಾಲೆಗೆ ಸೇರ್ಪಡಿಗೊಂಡಿದ್ದ ಹೊಸ ಮಕ್ಕಳ ಪೋಷಕರು ಸಹ ಮೆರವಣಿಗೆ ಯಲ್ಲಿ ಪಾಲ್ಗೊಂಡು ಸಾಥ್ ನೀಡಿದರು.

ಬನ್ನಿ ಬನ್ನಿ ಮಕ್ಕಳೇ, ಶಾಲೆಗೆ ಬನ್ನಿ, ಶಾಲೆಗೆ ಆಗಮಿಸದ ವಿದ್ಯಾರ್ಥಿಗಳೇ ಶಾಲೆಗೆ ಬನ್ನಿ, ಕಲಿಯಿರಿ, ಕಲಿಯಿರಿ, ಶಿಕ್ಷಣ ಕಲಿಯಿರಿ ಎಂದು ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗುವ ಮೂಲಕ ಗ್ರಾಮಸ್ಥರ ಗಮನ ಸೆಳೆದರು.

ಮೆರವಣಿಗೆ ಮುಗಿದು ಶಾಲೆಗೆ ಆಗಮಿ ಸಿದ ನೂರಾರು ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು, ಎಸ್‍ಡಿಎಂಸಿ ಪದಾಧಿಕಾರಿಗಳು, ಹೂ ನೀಡಿ, ಸಿಹಿ ವಿತರಿಸಿ, ಪುಸ್ತಕಗಳನ್ನು ನೀಡಿ ಆತ್ಮೀಯವಾಗಿ ಬರಮಾಡಿ ಕೊಂಡರು. ಶಿಕ್ಷಕಿಯರು ಶಾಲೆಗೆ ಸೇರ್ಪ ಡೆಯಾದ ಹೊಸ ವಿದ್ಯಾರ್ಥಿಗಳಿಗೆ ಬೆಲ್ಲದ ಆರತಿ ಮಾಡಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

ತಮ್ಮೂರಿನ ಸರ್ಕಾರಿ ಶಾಲೆಗೆ ನೂತನ ವಾಗಿ ಸೇರ್ಪಡೆಯಾದ ಮಕ್ಕಳನ್ನು ತಾಯಿ ತೊಡೆಯ ಮೇಲೆ ಕೂರಿಸಿ ಅಕ್ಕಿ ತುಂಬಿದ್ದ ತಟ್ಟೆಯಲ್ಲಿ ಅ..ಆ..ಇ..ಈ ಹಾಗೂ ಅಮ್ಮ ಎಂದು ಬರೆಸುವ ಮೂಲಕ ಮೊದಲ ದಿನ ಅಕ್ಷರಾಭ್ಯಾಸ ನಡೆಸಲಾ ಯಿತು. ಇದಲ್ಲದೇ ಸಿಹಿ ತಿನ್ನಿಸಿ ಮಕ್ಕಳಿಗೆ ಶಿಕ್ಷಣದ ಬಗ್ಗೆ ಹಾಗೂ ಶಾಲೆಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡುವಲ್ಲಿ ಶಿಕ್ಷಕರು ಯಶಸ್ವಿಯಾದರು.

ಸರ್ಕಾರಿ ಶಾಲೆಗಳು ಎಂದರೆ ಅಲ್ಲಿ ಸೌಲಭ್ಯಗಳು ಇರುವುದಿಲ್ಲ. ವಾತಾವರಣ ಚೆನ್ನಾಗಿರುವುದಿಲ್ಲ ಎಂದು ಮೂಗು ಮುರಿಯುವವರೇ ಹೆಚ್ಚು. ಇಂತಹ ಈ ದಿನಗಳಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಹೊಸ ವಿದ್ಯಾರ್ಥಿಗಳನ್ನು ವಿಶಿಷ್ಟ ರೀತಿಯಲ್ಲಿ ಶಾಲೆಗೆ ಬರಮಾಡಿಕೊಂಡಿದ್ದು, ನೋಡಿ ಇಡೀ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದದ್ದು ಕಂಡು ಬಂತು.

ಎತ್ತಿನ ಗಾಡಿಯಲ್ಲಿ ಮಕ್ಕಳ ಮೆರವಣಿಗೆ

ಗುಂಡ್ಲುಪೇಟೆ:  ಬೇಸಿಗೆ ರಜೆ ಮುಗಿದು ಶಾಲೆಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ತಾಲೂಕಿನ ಹೊನ್ನೇಗೌಡನಹಳ್ಳಿಯಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ಎತ್ತಿನಗಾಡಿ ಕುಳ್ಳಿರಿಸಿ ಮೆರವಣಿಗೆ ಮಾಡಿ ಕರೆದು ತರುವ ಮುಖಾಂತರ ವಿಭಿನ್ನವಾಗಿ ಶಾಲೆಯ ತರಗತಿಯನ್ನು ಆರಂಭಿಸಲಾಯಿತು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಪ್ರಾರಂಭೋತ್ಸವ ವನ್ನು ಸಾಂಪ್ರದಾಯಿಕವಾಗಿ ಎತ್ತಿನಗಾಡಿಯನ್ನು ಹಸಿರು ತೋರಣಗಳಿಂದ ಸಿಂಗ ರಿಸಿ ಮಕ್ಕಳನ್ನು ಸಮವಸ್ತ್ರದೊಂದಿಗೆ ಬ್ಯಾಂಡ್ ವಾದನದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವುದರೊಂದಿಗೆ ಶಾಲಾ ಆವರಣಕ್ಕೆ ಕರೆತಂದು ಸಿಹಿ ವಿತರಿಸಿ ಸ್ವಾಗತಿಸಲಾಯಿತು.

ಇದೇ ಸಂದರ್ಭದಲ್ಲಿ ನೂತನವಾಗಿ ಶಾಲೆಗೆ ಸೇರುವ ಮಕ್ಕಳ ದಾಖಲಾತಿಗಾಗಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ದಾಖಲಾತಿ ಆಂದೋಲನ ಹಾಗೂ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯ ಕ್ರಮದಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುಮ, ಪಟೇಲ್ ಚನ್ನಬಸಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಮಾದಪ್ಪ, ಉಪಾಧ್ಯಕ್ಷೆ ತೊಳಸಮ್ಮ, ಮುಖ್ಯೋಪಾಧ್ಯಾಯ ಶ್ರೀನಿವಾಸಮೂರ್ತಿ, ಶಿಕ್ಷಕ ಮಹೇಶಪ್ಪ, ಮುಖಂಡರಾದ ಶಿವಮಲ್ಲಪ್ಪ, ಶಿವಕುಮಾರ್, ಬಸವರಾಜಪ್ಪ, ರಾಜಪ್ಪ, ಮಹೇಶಪ್ಪ, ನಟರಾಜು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Translate »