ನೀರು ಕುದುರೆ, ಜಿರಾಫೆ ಮರಿ ಜನನ
ಮೈಸೂರು

ನೀರು ಕುದುರೆ, ಜಿರಾಫೆ ಮರಿ ಜನನ

May 30, 2018

ಮೈಸೂರು: ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾ ಲಯದಲ್ಲಿ ನೀರು ಕುದುರೆ ಹಾಗೂ ಜಿರಾಫೆ ಮರಿಗಳಿಗೆ ಜನ್ಮ ನೀಡಿವೆ. ಮೇ 16ರಂದು ಕೃಷ್ಣ ಮತ್ತು ಜಲೇಶಿ ನೀರು ಕುದುರೆಗೆ ಮರಿ ಜನಿಸಿದರೆ, ಮೇ 26ರಂದು ಕೃಷ್ಣರಾಜ ಮತ್ತು ಖುಷಿ ಜಿರಾಫೆಗಳಿಗೆ ಹೆಣ್ಣು ಮರಿ ಜನಿಸಿದೆ. ಜಲೇಶಿ ನೀರು ಕುದುರೆ ಹಾಗೂ ಖುಷಿ ಜಿರಾಫೆ, ತಮ್ಮ ಮರಿಗಳಿಗೆ ಹಾಲುಣ ಸಿ, ಆರೈಕೆ ಮಾಡುತ್ತಿವೆ. ಮರಿಗಳು ಹಾಗೂ ತಾಯಂದಿರ ಸುರಕ್ಷತೆಯ ದೃಷ್ಟಿಯಿಂದ ಮೃಗಾಲಯದ ಪಶುವೈದ್ಯರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮೃಗಾಲಯ ನಿರ್ದೇಶಕ ಸಿ.ರವಿಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »