Tag: Mysore Zoo

ಲಾಕ್ ಡೌನ್ ನಡುವೆಯೂ ಪ್ರಾಣಿಗಳ ಹಿತಕಾಯುತ್ತಿರುವ ಮೃಗಾಲಯದ ಸಿಬ್ಬಂದಿ
ಮೈಸೂರು

ಲಾಕ್ ಡೌನ್ ನಡುವೆಯೂ ಪ್ರಾಣಿಗಳ ಹಿತಕಾಯುತ್ತಿರುವ ಮೃಗಾಲಯದ ಸಿಬ್ಬಂದಿ

March 30, 2020

*ಮಾಸ್ಕ್ ಧರಿಸಿ, ಸ್ಯಾನಿಟೈಸರ್ ನಿಂದ ಕೈ ತೊಳೆದರೆ ಮಾತ್ರ ಪ್ರವೇಶ * ಪ್ರತಿದಿನ 200ಕ್ಕೂ ಹೆಚ್ಚು ಸಿಬ್ಬಂದಿಯಿಂದ ಪ್ರಾಣಿ-ಪಕ್ಷಿಗಳ ಪಾಲನೆ ಮೈಸೂರು,ಮಾ.30( MTY) – ನೊವೆಲ್ ಕೊರೊನಾ ಸೋಂಕು ಹರಡುವಿಕೆ ತಡೆಯಲು ಏ.14ರವರೆಗೂ ಇಡೀ ದೇಶವೇ ಲಾಕ್ ಡೌನ್ ಆಗಿ ಸ್ತಬ್ದವಾಗಿದ್ದರೂ, ಮೈಸೂರು ಮೃಗಾಲಯದಲ್ಲಿ ಅಗತ್ಯ ಮುನ್ನಚ್ಚರಿಕೆಯೊಂದಿಗೆ ಪ್ರಾಣಿ-ಪಕ್ಷಿಗಳ ಹಿತಕಾಯುವ ಸೇವೆಯನ್ನು 200ಕ್ಕೂ ಹೆಚ್ಚು ಸಿಬ್ಬಂದಿ ಮಾಡುತ್ತಿದ್ದಾರೆ. ಕೊರೊನಾ ವೈರಸ್ ವ್ಯಾಪಿಸಿದ ಪರಿಣಾಮ ಮೊದಲ ಹಂತದಲ್ಲಿ ಮಾ.15ರಿಂದ 23ರವರೆಗೆ ಮೈಸೂರು ಮೃಗಾಲಯವನ್ನು ಬಂದ್ ಮಾಡಲಾಗಿತ್ತು. ಅದರೂ ಎಲ್ಲೆಡೆ…

ಫೆ.15ರವರೆಗೂ ಶಾಲಿವಾಹನ ರಸ್ತೆ ಸಂಚಾರ ನಿರ್ಬಂಧ
ಮೈಸೂರು

ಫೆ.15ರವರೆಗೂ ಶಾಲಿವಾಹನ ರಸ್ತೆ ಸಂಚಾರ ನಿರ್ಬಂಧ

January 3, 2020

ಮೈಸೂರು,ಜ.2(ಎಂಕೆ)-ಮೈಸೂರು ಮೃಗಾಲಯದ ಮುಂಭಾಗದಲ್ಲಿ ಅಂಡರ್ ಪಾಸ್ ನಿರ್ಮಿಸುತ್ತಿರುವ ಹಿನ್ನೆಲೆ ಜ.2 ರಿಂದ ಫೆ.15ರವರೆಗೆ ಶಾಲಿವಾಹನ ರಸ್ತೆ ಸಂಚಾರ ನಿರ್ಬಂಧಿಸಿ, ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಮೃಗಾಲಯದ ಎದುರಿನ ಶಾಲಿವಾಹನ ರಸ್ತೆಯ ಪಶ್ಚಿಮ ಭಾಗದಲ್ಲಿರುವ ವಾಹನಗಳ ನಿಲುಗಡೆ ಸ್ಥಳದಿಂದ ರಸ್ತೆಯ ಪೂರ್ವ ಭಾಗದಲ್ಲಿರುವ ಮೃಗಾಲಯದ ಆವರಣಕ್ಕೆ ಸಾರ್ವಜನಿಕರ ಸುರಕ್ಷಿತವಾಗಿ ಪ್ರವೇಶಿಸಲು ಅಂಡರ್‍ಪಾಸ್ ನಿರ್ಮಿ ಸಲು ಉದ್ದೇಶಿಸಿರುವುದರಿಂದ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸಂಚಾರದ ನಿರ್ಬಂಧ: ಶಾಲಿವಾಹನದ ರಸ್ತೆಯಲ್ಲಿ ಅರುಣಾಚಲಂ ಸ್ಟ್ರೀಟ್ ಜಂಕ್ಷನ್‍ನಿಂದ ದಕ್ಷಿಣಕ್ಕೆ ಹೊಸಬೀದಿ 5ನೇ ತಿರುವು…

ಮೈಸೂರು ಮೃಗಾಲಯದಲ್ಲಿ ಅಸ್ಸಾಂ ಅತಿಥಿಗಳ ದರ್ಶನ!
ಮೈಸೂರು

ಮೈಸೂರು ಮೃಗಾಲಯದಲ್ಲಿ ಅಸ್ಸಾಂ ಅತಿಥಿಗಳ ದರ್ಶನ!

January 2, 2020

ಮೈಸೂರು,ಜ.1(ಎಂಟಿವೈ)-ಅಸ್ಸಾಂ ಮೃಗಾಲಯದಿಂದ ಮೈಸೂರು ಮೃಗಾ ಲಯಕ್ಕೆ ತಂದಿರುವ ಹೂಲಾಕ್ ಗಿಬ್ಬನ್ ಪ್ರಾಣಿಯನ್ನು ಪ್ರವಾಸಿಗರ ವೀಕ್ಷಣೆಗಾಗಿ ಬುಧವಾರ ಅರಣ್ಯ ಸಚಿವ ಸಿ.ಸಿ. ಪಾಟೀಲ್ ಬಿಡುಗಡೆ ಮಾಡಿದರು. ಪ್ರಾಣಿ ವಿನಿಮಯ ಯೋಜನೆಯಡಿ ಅಸ್ಸಾಂ ಮೃಗಾಲಯಕ್ಕೆ ಜಿರಾಫೆ ನೀಡಿ, ಒಂದು ಜೋಡಿ ಹೂಲಾಕ್ ಗಿಬ್ಬನ್ ದೀಪು(ಗಂಡು), ಮುನ್ನಿ(ಹೆಣ್ಣು), ಒಂದು ಕಪ್ಪು ಹೆಣ್ಣು ಚಿರತೆ, ಒಂದು ಘೇಂಡಾ ಮೃಗವನ್ನು ಡಿ.13ರಂದು ತರಲಾಗಿತ್ತು. ಅಂದಿನಿಂದ ಬೋನ್‍ನಲ್ಲಿಟ್ಟು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಹೊಸ ವರ್ಷದ ಕೊಡುಗೆ ನೀಡುವ…

ಅಸ್ಸಾಂನಿಂದ ಮೈಸೂರು ಮೃಗಾಲಯಕ್ಕೆ ಕಪ್ಪು ಚಿರತೆ, ಹೆಣ್ಣು ಘೇಂಡಾಮೃಗ, ಹೂಲಾಕ್ ಗಿಬ್ಬನ್ ಆಗಮನ
ಮೈಸೂರು

ಅಸ್ಸಾಂನಿಂದ ಮೈಸೂರು ಮೃಗಾಲಯಕ್ಕೆ ಕಪ್ಪು ಚಿರತೆ, ಹೆಣ್ಣು ಘೇಂಡಾಮೃಗ, ಹೂಲಾಕ್ ಗಿಬ್ಬನ್ ಆಗಮನ

December 16, 2019

ಮೈಸೂರು,ಡಿ.15(ಎಂಟಿವೈ)-ಅಸ್ಸಾಂನ ಗುವಾಹಟಿಗೆ ಜಿರಾಫೆ ಯೊಂದನ್ನು ಕೊಂಡೊಯ್ದು ದಾಖಲೆ ನಿರ್ಮಿಸಿದ್ದ ಮೈಸೂರು ಮೃಗಾಲಯಕ್ಕೆ ಇಂದು ಗುವಾಹಟಿ ಮೃಗಾಲಯದಿಂದ ಒಂದು ಹೆಣ್ಣು ಘೇಂಡಾಮೃಗ, ಹೂಲಾಕ್ ಗಿಬ್ಬನ್ ಜೋಡಿ ಹಾಗೂ ಒಂದು ಕಪ್ಪು ಹೆಣ್ಣು ಚಿರತೆಯನ್ನು ತರಲಾಗಿದೆ. ಪ್ರಾಣಿ ವಿನಿಮಯ ಯೋಜನೆಯಡಿ 14 ತಿಂಗಳ ಚಾಮರಾಜೇಂದ್ರ ಹೆಸರಿನ ಜಿರಾಫೆಯನ್ನು 3200 ಕಿ.ಮೀ. ರಸ್ತೆ ಮಾರ್ಗ ದಲ್ಲಿ ಟ್ರಕ್‍ನಲ್ಲಿ ಕೊಂಡೊಯ್ದು ದಾಖಲೆ ಬರೆದಿದ್ದ ಮೃಗಾಲಯಕ್ಕೆ ಪರ್ಯಾಯ ವಾಗಿ ಗುವಾಹಟಿ ಮೃಗಾಲಯ ನಾಲ್ಕು ಪ್ರಾಣಿಗಳನ್ನು ನೀಡಿದೆ. 8 ವರ್ಷದ ದೀಪು (ಗಂಡು ಗಿಬ್ಬನ್), ಮುನ್ನಿ…

ಈ ಬಾರಿ ಮೈಸೂರು ಮೃಗಾಲಯಕ್ಕೆ ಅತೀ ಹೆಚ್ಚು ಪ್ರವಾಸಿಗರ ಭೇಟಿ
ಮೈಸೂರು

ಈ ಬಾರಿ ಮೈಸೂರು ಮೃಗಾಲಯಕ್ಕೆ ಅತೀ ಹೆಚ್ಚು ಪ್ರವಾಸಿಗರ ಭೇಟಿ

October 10, 2019

ಮೈಸೂರು, ಅ.9(ಪಿಎಂ)- ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದಸರಾ ಮಹೋತ್ಸವದ 10 ದಿನಗಳ ಅವಧಿಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದು, ಆ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಪ್ರಸಕ್ತ ವರ್ಷದ ದಸರಾ ಅವಧಿಯಲ್ಲಿ 1.65 ಲಕ್ಷ ವೀಕ್ಷಕರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಇದರಿಂದ 1.59 ಕೋಟಿ ರೂ. (159.76 ಲಕ್ಷ ರೂ.) ಆದಾಯ ಸಂಗ್ರಹ ಗೊಂಡಿದೆ. 2016ರ ಇದೇ ಅವಧಿಯಲ್ಲಿ 1.24 ಲಕ್ಷ ವೀಕ್ಷಕರು ಭೇಟಿ ನೀಡಿ, 70.53 ಲಕ್ಷ…

ಮೈಸೂರು ಮೃಗಾಲಯದಲ್ಲಿ ವಿಶ್ವ ಘೇಂಡಾಮೃಗ ದಿನಾಚರಣೆ
ಮೈಸೂರು

ಮೈಸೂರು ಮೃಗಾಲಯದಲ್ಲಿ ವಿಶ್ವ ಘೇಂಡಾಮೃಗ ದಿನಾಚರಣೆ

September 24, 2019

ಮೈಸೂರು, ಸೆ.23(ಎಂಟಿವೈ)- `ವಿಶ್ವ ಘೇಂಡಾಮೃಗ’ ದಿನದ ಹಿನ್ನೆಲೆಯಲ್ಲಿ ಮೈಸೂ ರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರಿಗೆ ಫೇಂಡಾಮೃಗಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಅವುಗಳ ಸಂತತಿ ರಕ್ಷಣೆಗೆ ಜಾಗೃತಿ ಮೂಡಿಸಲಾಯಿತು. ಮೃಗಾಲಯದಲ್ಲಿನ ಘೇಂಡಾಮೃಗಗಳ ಕೇಜ್ ಬಳಿ ಮೃಗಾಲಯದ ವತಿ ಯಿಂದ `ವಿಶ್ವ ಘೇಂಡಾ ಮೃಗ’ಗಳ ದಿನದ ಶುಭಾ ಶಯ ಕೋರುವ ಬ್ಯಾನರ್ ಹಾಕಿ, ಘೇಂಡಾ ಮೃಗ ಗಳ ಜೀವನ ಕ್ರಮ ವಿವರಣೆ ನೀಡಲು ಓರ್ವ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಭಾನುವಾರವಾಗಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಅಲ್ಲದೆ ಯೂತ್ ಕ್ಲಬ್…

ಮೃಗಾಲಯದ ಬೃಹತ್ ಅಕ್ವೇರಿಯಂಗೆ ಕಾಯಕಲ್ಪ ನೀಡಲು ನ್ಯೂಜಿಲೆಂಡ್ ಮೂಲದ ಕಂಪನಿ ಆಸಕ್ತಿ
ಮೈಸೂರು

ಮೃಗಾಲಯದ ಬೃಹತ್ ಅಕ್ವೇರಿಯಂಗೆ ಕಾಯಕಲ್ಪ ನೀಡಲು ನ್ಯೂಜಿಲೆಂಡ್ ಮೂಲದ ಕಂಪನಿ ಆಸಕ್ತಿ

June 26, 2019

ಮೈಸೂರು, ಜೂ.25- ಮೈಸೂರಿನ ಮೃಗಾಲಯದ ಆವರಣದಲ್ಲಿ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೃಹತ್ ಅಕ್ವೇರಿಯಂಗೆ ಕಾಯಕಲ್ಪ ನೀಡಲು ನ್ಯೂಜಿಲೆಂಡ್ ಮೂಲದ ಕಂಪನಿಯೊಂದು ಮುಂದೆ ಬಂದಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಮತ್ಸ್ಯಾಲಯ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಅನುಮೋದನೆಗಾಗಿ ಮೃಗಾಲಯ ಪ್ರಾಧಿಕಾರ ಪ್ರಸ್ತಾವನೆ ಕಳುಹಿಸಿದೆ. ಮೈಸೂರಿಗೆ ಬರುವ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಮೈಸೂರು ನಗರ ಪಾಲಿಕೆ 2010-11ನೇ ಸಾಲಿನಲ್ಲಿ ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಬೃಹತ್ ಮತ್ಸ್ಯಾಗಾರದ ಕಾಮಗಾರಿ ಆರಂಭಿಸಿತ್ತು. 4.26 ಕೋಟಿ ರೂ. ವೆಚ್ಚದಲ್ಲಿ ಆರು ಸಾವಿರ…

ಮೃಗಾಲಯ ವೀಕ್ಷಣೆಯ ಕಾಂಬೋ ಟಿಕೆಟ್‍ಗೆ ಡಿಮ್ಯಾಂಡ್
ಮೈಸೂರು

ಮೃಗಾಲಯ ವೀಕ್ಷಣೆಯ ಕಾಂಬೋ ಟಿಕೆಟ್‍ಗೆ ಡಿಮ್ಯಾಂಡ್

May 10, 2019

ಮೈಸೂರು: ಮೈಸೂರು ಮೃಗಾಲಯ ವೀಕ್ಷಿಸಿ ಕಾರಂಜಿ ಕೆರೆಗೆ ಭೇಟಿ ನೀಡುವ ಪ್ರವಾಸಿಗರ ಅನು ಕೂಲಕ್ಕಾಗಿ ಜಾರಿಗೆ ತಂದಿರುವ ಕಾಂಬೋ ಟಿಕೆಟ್‍ಗೆ ಬೇಡಿಕೆ ಹೆಚ್ಚಾಗುತ್ತಿದ್ದು, ದಿನಕ್ಕೆ ಸರಾಸರಿ 35 ಮಂದಿ ಪ್ರವಾಸಿಗರು ಕನೆ ಕ್ಟಿಂಗ್ ಪಾಥ್ ಮೂಲಕ ಮೃಗಾಲಯದಿಂದ ಕಾರಂಜಿಕೆರೆ ವೀಕ್ಷಣೆಗೆ ತೆರಳುತ್ತಿದ್ದಾರೆ. ಮೃಗಾಲಯದ ವ್ಯಾಪ್ತಿಗೆ ಕಾರಂಜಿಕೆರೆ ಬಂದರೂ ಎರಡೂ ಕಡೆಗೂ ಪ್ರತ್ಯೇಕ ಪ್ರವೇಶ ಟಿಕೆಟ್ ಪಡೆಯಬೇಕಾಗಿತ್ತು. ಈ ಹಿನ್ನೆಲೆ ಯಲ್ಲಿ ದಸರೆಯ ವೇಳೆ ಎರಡೂ ಸ್ಥಳಗಳಿಗೂ ಒಂದೇ ಟಿಕೆಟ್ ಪಡೆದು ಭೇಟಿ ನೀಡುವ ಅವಕಾಶವನ್ನು ಕಲ್ಪಿಸಲಾಗಿತ್ತು. ಅಲ್ಲದೆ…

ಮೈಸೂರು ಮೃಗಾಲಯದಲ್ಲಿ ಭಯಂಕರ ಕಾದಾಟ: ಜಾಗ್ವಾರ್-ನಾಗರಹಾವು ಸಾವು
ಮೈಸೂರು

ಮೈಸೂರು ಮೃಗಾಲಯದಲ್ಲಿ ಭಯಂಕರ ಕಾದಾಟ: ಜಾಗ್ವಾರ್-ನಾಗರಹಾವು ಸಾವು

October 30, 2018

ಮೈಸೂರು: ಅದೊಂದು ಅತೀ ಭಯಂಕರ ಕಾದಾಟ! ಹೆಸರೇಳಿದರೆ ಸಾಕು ಮನುಷ್ಯರು ಬೆಚ್ಚಿ ಬೀಳುವ ಕ್ರೂರ ಪ್ರಾಣಿಗಳು ಸೆಣಸಾಟದಲ್ಲಿ ಜೀವ ಬಿಟ್ಟಿವೆ. ಈ ಕಾಳಗವನ್ನು ಕಣ್ಣಾರೆ ಕಂಡ ನೂರಾರು ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ. ಮೈಸೂರು ಮೃಗಾಲಯದಲ್ಲಿ ಹಾಡಹಗಲೇ ಜಾಗ್ವಾರ್ (ಆಫ್ರಿಕನ್ ಚಿರತೆ) ಹಾಗೂ ನಾಗರಹಾವಿನ ನಡುವೆ ನಡೆದ ಭಾರೀ ಕದನದಲ್ಲಿ ಪಾಪ, ಎರಡೂ ಪ್ರಾಣ ಬಿಟ್ಟಿವೆ. ಜಾಗ್ವಾರ್ ಆವರಣ ಪ್ರವೇಶಿಸಿರುವ ನಾಗರ ಹಾವು, ತನಗೆ ಎದುರಾದ ರಾಜು ಹೆಸರಿನ 14 ವರ್ಷದ ಜಾಗ್ವರ್ ಕಂಡು ಹೆಡೆ ಎತ್ತಿ, ಬುಸುಗುಟ್ಟಿದೆ….

ಮೃಗಾಲಯಕ್ಕೆ ಶ್ರೀ ಸುತ್ತೂರು ಮಠದ ಕೊಡುಗೆ
ಮೈಸೂರು

ಮೃಗಾಲಯಕ್ಕೆ ಶ್ರೀ ಸುತ್ತೂರು ಮಠದ ಕೊಡುಗೆ

August 25, 2018

ಮೈಸೂರು:  ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 103ನೇ ಜಯಂತಿ ಮಹೋತ್ಸವದ ಅಂಗವಾಗಿ ಆ.29ರಂದು ಮೈಸೂರಿನ ಮೃಗಾಲಯದ ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸಲು ಶ್ರೀ ಸುತ್ತೂರು ಮಠದಿಂದ ನೀಡುವ 1 ಲಕ್ಷ ರೂ.ಗಳ ಚೆಕ್ಕನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಯವರಿಗೆ ನೀಡಿದರು. ಈ ವೇಳೆ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ, ಆರ್.ಎಸ್. ನಂಜುಂಡಸ್ವಾಮಿ, ಗಣೇಶ್ ಮತ್ತಿತರರಿದ್ದರು.

1 2
Translate »