ಅಸ್ಸಾಂನಿಂದ ಮೈಸೂರು ಮೃಗಾಲಯಕ್ಕೆ ಕಪ್ಪು ಚಿರತೆ, ಹೆಣ್ಣು ಘೇಂಡಾಮೃಗ, ಹೂಲಾಕ್ ಗಿಬ್ಬನ್ ಆಗಮನ
ಮೈಸೂರು

ಅಸ್ಸಾಂನಿಂದ ಮೈಸೂರು ಮೃಗಾಲಯಕ್ಕೆ ಕಪ್ಪು ಚಿರತೆ, ಹೆಣ್ಣು ಘೇಂಡಾಮೃಗ, ಹೂಲಾಕ್ ಗಿಬ್ಬನ್ ಆಗಮನ

December 16, 2019

ಮೈಸೂರು,ಡಿ.15(ಎಂಟಿವೈ)-ಅಸ್ಸಾಂನ ಗುವಾಹಟಿಗೆ ಜಿರಾಫೆ ಯೊಂದನ್ನು ಕೊಂಡೊಯ್ದು ದಾಖಲೆ ನಿರ್ಮಿಸಿದ್ದ ಮೈಸೂರು ಮೃಗಾಲಯಕ್ಕೆ ಇಂದು ಗುವಾಹಟಿ ಮೃಗಾಲಯದಿಂದ ಒಂದು ಹೆಣ್ಣು ಘೇಂಡಾಮೃಗ, ಹೂಲಾಕ್ ಗಿಬ್ಬನ್ ಜೋಡಿ ಹಾಗೂ ಒಂದು ಕಪ್ಪು ಹೆಣ್ಣು ಚಿರತೆಯನ್ನು ತರಲಾಗಿದೆ.

ಪ್ರಾಣಿ ವಿನಿಮಯ ಯೋಜನೆಯಡಿ 14 ತಿಂಗಳ ಚಾಮರಾಜೇಂದ್ರ ಹೆಸರಿನ ಜಿರಾಫೆಯನ್ನು 3200 ಕಿ.ಮೀ. ರಸ್ತೆ ಮಾರ್ಗ ದಲ್ಲಿ ಟ್ರಕ್‍ನಲ್ಲಿ ಕೊಂಡೊಯ್ದು ದಾಖಲೆ ಬರೆದಿದ್ದ ಮೃಗಾಲಯಕ್ಕೆ ಪರ್ಯಾಯ ವಾಗಿ ಗುವಾಹಟಿ ಮೃಗಾಲಯ ನಾಲ್ಕು ಪ್ರಾಣಿಗಳನ್ನು ನೀಡಿದೆ. 8 ವರ್ಷದ ದೀಪು (ಗಂಡು ಗಿಬ್ಬನ್), ಮುನ್ನಿ (ಹೆಣ್ಣು ಗಿಬ್ಬನ್), 2.5 ವರ್ಷದ ಮೀನಾ (ಕಪ್ಪು ಚಿರತೆ), 5 ವರ್ಷದ ಬಾಗೋರಿ(ಹೆಣ್ಣು ಘೇಂಡಾ ಮೃಗ) ಈ ಪ್ರಾಣಿಗಳು ಅಳಿವಿ ನಂಚಿನಲ್ಲಿದ್ದು, ಮೃಗಾಲಯದಲ್ಲಿ ಅವುಗಳ ಸಂತತಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಹೂಲಾಕ್ ಗಿಬ್ಬನ್ ಪ್ರಾಣಿಯು ಚಿಂಪಾಂಜಿಯಂತೆ ಕಾಣ ಲಿದ್ದು, ಆಕರ್ಷಕವಾಗಿದೆ. ನಾಲ್ಕೂ ಪ್ರಾಣಿಗಳು ಆರೋಗ್ಯದಿಂದ ಕೂಡಿದ್ದು, ಅವುಗಳ ಆರೋಗ್ಯದ ಸ್ಥಿತಿಗತಿ ಪರಿ ಶೀಲಿಸಲು ಹೆಚ್ಚಿನ ಗಮನ ನೀಡಲಾಗು ತ್ತಿದೆ. ಒಂದು ವಾರದ ಬಳಿಕ ಸಾರ್ವ ಜನಿಕರ ವೀಕ್ಷಣೆಗೆ ಈ ಪ್ರಾಣಿ ಗಳನ್ನು ಬಿಡಲಾಗುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ.

Translate »