ಮೈದುಂಬಿರುವ ತೊಣ್ಣೂರು ಕೆರೆಗೆ ಬಾಗಿನ ಸಲ್ಲಿಕೆ ತೊಣ್ಣೂರು ಕೆರೆ ಸಮಗ್ರ ಅಭಿವೃದ್ಧಿಗೆ ಕ್ರಮ
ಮಂಡ್ಯ

ಮೈದುಂಬಿರುವ ತೊಣ್ಣೂರು ಕೆರೆಗೆ ಬಾಗಿನ ಸಲ್ಲಿಕೆ ತೊಣ್ಣೂರು ಕೆರೆ ಸಮಗ್ರ ಅಭಿವೃದ್ಧಿಗೆ ಕ್ರಮ

December 16, 2019

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ
ಚಿನಕುರಳಿ,ಡಿ.15 (ಸಿ.ಎ.ಲೋಕೇಶ್)- ತೊಣ್ಣೂರು ಕೆರೆಯಲ್ಲಿ 24.12ರಷ್ಟು ನೀರು ಸಂಗ್ರಹ ವಾಗಿದ್ದು, ಸುಮಾರು 850 ಎಕರೆ ಪ್ರದೇಶಕ್ಕೆ ನೀರು ಪೂರೈಕೆ ಮಾಡುತ್ತಿದೆ. ಸುಮಾರು 11ನೇ ಶತಮಾನದಲ್ಲಿ ನಿರ್ಮಾಣ ಗೊಂಡಿರುವ ಕೆರೆಯನ್ನು ಸಂಪೂರ್ಣ ವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ.ಎಸ್. ಪುಟ್ಟರಾಜು ಭರವಸೆ ನೀಡಿದರು.ಪಾಂಡವಪುರ ತಾಲೂಕಿನ ಕೆರೆ ತೊಣ್ಣೂರು ಗ್ರಾಮದಲ್ಲಿ ಭಾನುವಾರ ಮೈದುಂಬಿರುವ ತೊಣ್ಣೂರು ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಕಳೆದ ತೊಣ್ಣೂರು ಉತ್ಸವದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭಾಗಿ ಯಾಗಿ ಐತಿಹಾಸಿಕ ತೊಣ್ಣೂರು ಕೆರೆಯನ್ನು ಸುಂದರ ಪ್ರವಾಸಿ ತಾಣವನ್ನಾಗಿ ರೂಪಿಸ ಬೇಕು ಎಂಬ ಕಾರಣದಿಂದ 10 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ರಾಮಾನುಜಾ ಚಾರ್ಯರು ಈ ಕ್ಷೇತ್ರದಲ್ಲಿ ನೆಲಸಿ ಕ್ಷೇತ್ರ ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ಕೆರೆ ಏರಿ ಮೇಲಿರುವ ಎರಡೂ ಬೆಟ್ಟಕ್ಕೂ ತೂಗು ಯ್ಯಾಲೆ ನಿರ್ಮಿಸಲಾಗುವುದು. ಕೆರೆ ಕೆಳಭಾಗದ ಲ್ಲಿರುವ ಕೆರೆಗೆ ಕೆಆರ್‍ಎಸ್ ಮಾದರಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ರಾಮಾನುಜಾಚಾರ್ಯರ ಪ್ರತಿಮೆ ಸುತ್ತಲು ನೀರು ಸಂಗ್ರಹವಾಗುವಂತೆ ಮಾಡಿ ಕ್ಷೇತ್ರ ಅಭಿವೃದ್ಧಿಪಡಿಸಲಾಗುವುದು ಎಂದರು.

ಈ ವೇಳೆ ಲಕ್ಷ್ಮಿಸಾಗರ ಗ್ರಾಮದ ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಯಾ.ಕೃಷ್ಣೇ ಗೌಡರನ್ನು ಶಾಸಕ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಸಿ.ಅಶೋಕ್, ಶಾಂತಲ, ಮಾಜಿ ಸದಸ್ಯೆ ನಾಗಮ್ಮಪುಟ್ಟರಾಜು, ತಾಪಂ ಅಧ್ಯಕ್ಷೆ ಗಾಯಿತ್ರಿ, ಮಾಜಿ ಅಧ್ಯಕ್ಷರಾದ ರಾಧಮ್ಮ, ಪೂರ್ಣಿಮಾ, ಸದಸ್ಯರಾದ ವಿ.ಎಸ್.ನಿಂಗೇ ಗೌಡ, ಗೋವಿಂದಯ್ಯ, ಶಿವಣ್ಣ, ಗ್ರಾಪಂ ಅಧ್ಯಕ್ಷೆ ಶೃತಿ, ಉಪಾಧ್ಯಕ್ಷ ವೇಣು ಗೋಪಾಲ್, ವೀರ ಶೈವ ಮುಖಂಡ ಎಸ್.ಎ.ಮಲ್ಲೇಶ್, ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಜೆಡಿಎಸ್ ಅಧ್ಯಕ್ಷ ಧರ್ಮರಾಜು, ಪುರ ಸಭೆ ಸದಸ್ಯರಾದ ಸರಸ್ವತಿ, ಸುನೀತ, ಗೀತಾ, ಖಮರುನ್ನೀಸಾ, ಡಿಎಸ್‍ಎಸ್ ಮುಖಂಡ ಎಂ.ಬಿ.ಶ್ರೀನಿವಾಸ್, ರಾಮಕೃಷ್ಣೇಗೌಡ, ಗುರುಸ್ವಾಮಿ, ಸಿ.ಪ್ರಕಾಶ್, ಪ್ರಭಾಕರ್, ಪ್ರಕಾಶ್, ರಾಜೇಶ್, ಜಗದೀಶ್, ಇಇ ನಾರಾಯಣಸ್ವಾಮಿ, ಎಇಇ ಶ್ರೀನಿವಾಸ್, ಎಇ ಪುಟ್ಟಮಾದೇಗೌಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

ದೇವೇಗೌಡರಿಗೆ ಎಚ್ಚರಿಕೆ ಕೊಟ್ಟವರು ರಾಜಕೀಯ ದಿವಾಳಿ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬಕ್ಕೆ ಎಚ್ಚರಿಕೆ ಕೊಟ್ಟವರು ಪ್ರಸ್ತುತ ರಾಜಕೀಯವಾಗಿ ದಿವಾಳಿಯಾಗಿದ್ದಾರೆ. ಅವರ ಬಗ್ಗೆ ಮಾತನಾಡು ವವರು ಎಚ್ಚರಿಕೆಯಿಂದ ಮಾತನಾಡಿದರೆ ಒಳಿತು ಎಂದು ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕಾಶ ನೋಡಿಕೊಂಡು ಉಗುಳಿದರೆ ನಮ್ಮ ಮೇಲೆಯೇ ಬೀಳುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಶಾಸಕ ನಾರಾಯಣಗೌಡರ ವಿರುದ್ಧ ನಾನ್ಯಾಕೆ ಜಿದ್ದು ಸಾಧಿಸಲಿ, ಎರಡು ಬಾರಿ ಜೆಡಿಎಸ್‍ನಿಂದ ಬಿ.ಫಾರಂ ದೊರೆಯಲು ಕಾರಣ ಯಾರು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ಆದರೆ ನಮ್ಮ ಪಕ್ಷದಿಂದ 2 ಬಾರಿ ಶಾಸಕರಾದ ಅವರು ಇಂದು ನಮ್ಮ ವಿರುದ್ಧವೇ ಕ್ಷುಲ್ಲಕವಾಗಿ ಮಾತನಾಡುತ್ತಿದ್ದಾರೆ. ಅದಕ್ಕೆಲ್ಲಾ ಕಾಲವೇ ಉತ್ತರ ನೀಡಲಿದೆ ಎಂದು ವಾಗ್ದಾಳಿ ನಡೆಸಿದರು. ನಾರಾಯಣಗೌಡರು ಯಾವ ಖಾತೆ ತೆಗೆದುಕೊಂಡರೇನು? ಅವರು ಸಣ್ಣ ನೀರಾವರಿ ಖಾತೆ ಸಚಿವರಾದರೂ ಅಭ್ಯಂತರವಿಲ್ಲ. ನಾನು ಸಚಿವನಾಗಿದ್ದಾಗ ಅವರ ಕ್ಷೇತ್ರಕ್ಕೆ ಎಷ್ಟ್ಟು ಅನುದಾನ ಕೊಟ್ಟಿದ್ದೇನೋ ಅಷ್ಟು ಅನುದಾನವನ್ನು ನನ್ನ ಕ್ಷೇತ್ರಕ್ಕೆ ಕೊಟ್ಟರೆ ಸಾಕು ಎಂದು ಅವರು ತಿಳಿಸಿದರು.

ಜೆಡಿಎಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ನಾರಾಯಣಗೌಡರ ಮಾತಿಗೆ ಪ್ರತಿಕ್ರಿಯಿಸಿದ ಪುಟ್ಟರಾಜು, ನನಗೆ ತಿಳಿದ ಹಾಗೆ ಜೆಡಿಎಸ್‍ನ ಯಾವೊಬ್ಬ ಶಾಸಕರೂ ಬಿಜೆಪಿ ಸಂಪರ್ಕದಲ್ಲಿಲ್ಲ. ನಾರಾಯಣಗೌಡರೇ ನಮ್ಮ ಹಳೆ ಮೈಸೂರು ಪ್ರಾಂತ್ಯದ ಬಿಜೆಪಿ ನಾಯಕರು. ಅವರನ್ನೇ ಕೇಳಿದರೆ ನಿಮಗೆ ಉತ್ತರ ಸಿಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಜಿಲ್ಲೆ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ 8678 ಕೋಟಿ ಹಣವನ್ನು ಯಡಿಯೂರಪ್ಪ ಸರ್ಕಾರÀದಲ್ಲಿ ಅನುಷ್ಠಾನಗೊಳಿಸಿದರೆ ಸಾಕು. ನಾವು ಅವರ ಮುಂದೆ ಯಾವುದೇ ಪ್ರಸ್ತಾವ ಇಡಲ್ಲ ಎಂದರು.

Translate »