ಮೇಲುಕೋಟೆಯಲ್ಲಿ ಇಂದಿನಿಂದ ಧನುರ್ಮಾಸ ಪೂಜೆ ಆರಂಭ ಸಂಭ್ರಮ ಸಡಗರದಿಂದ ನಡೆದ ವಿಷ್ಣು ದೀಪೋತ್ಸವ
ಮಂಡ್ಯ

ಮೇಲುಕೋಟೆಯಲ್ಲಿ ಇಂದಿನಿಂದ ಧನುರ್ಮಾಸ ಪೂಜೆ ಆರಂಭ ಸಂಭ್ರಮ ಸಡಗರದಿಂದ ನಡೆದ ವಿಷ್ಣು ದೀಪೋತ್ಸವ

December 16, 2019

ಮಂಡ್ಯ, ಡಿ.15 (ನಾಗಯ್ಯ)- ಮೇಲು ಕೋಟೆ ದೇವಾಲಯದಲ್ಲಿ ದೈವೀಕ ಭಕ್ತೆ ಗೋಧಾ ದೇವಿ ವ್ರತಾಚರಣೆ ನಿಮಿತ್ತ ಆರಂಭ ಗೊಂಡಿರುವ ಧನುರ್ಮಾಸ ಪೂಜಾ ಕಾರ್ಯಕ್ರಮ ಡಿ.16ರಿಂದ ಆರಂಭವಾಗಲಿದೆ.

ಧನುರ್ಮಾಸದ ಅವಧಿಯಲ್ಲಿ ಬೆಳಗಿನ ಜಾವ 4.30ರಿಂದ ಪೂಜಾ ಕೈಂಕರ್ಯ ಗಳು ಆರಂಭವಾಗಿ 7.30ರವರೆಗೆ ನಡೆಯ ಲಿದೆ. ಈ ವೇಳೆ ಶಾತ್ತುಮೊರೈ, ಸಹಸ್ರನಾಮ, ತಿರುಪ್ಪಾವೈ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಕೊಠಾರೋತ್ಸವ ಆರಂಭದವರೆಗೆ ಬೆಳಿಗ್ಗೆ ಧನುರ್ಮಾಸ ಪೂಜೆ ನಡೆದರೆ ನಂತರ ಸಂಕ್ರಾಂತಿವರೆಗೆ ಮಧ್ಯಾಹ್ನ ನಡೆಯಲಿದೆ. ಭಕ್ತರಿಗೆ ಹಾಗೂ ಶಾಲಾ ಮಕ್ಕಳಿಗೆ ದೇವರ ದರ್ಶನಕ್ಕೆ ಹೆಚ್ಚಿನ ಅವಕಾಶ ದೊರೆಯಲಿದೆ. ಇದರ ಜೊತೆಗೆ ಎಂದಿನಂತೆ ಬೆಳಿಗ್ಗೆ 9.30ರ ನಂತರವೂ ದೇವರ ದರ್ಶನ ಅವಕಾಶವಿದೆ ಎಂದು ದೇವಾಲಯದ ಇಓ ನಂಜೇಗೌಡ ಮಾಹಿತಿ ನೀಡಿದ್ದಾರೆ.

ವಿಷ್ಣು ದೀಪೋತ್ಸವ: ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯ ದಲ್ಲಿ ವಿಷ್ಣು ದೀಪೋತ್ಸವ ಸಂಭ್ರಮ ದೊಂದಿಗೆ ನೆರವೇರಿತು. ದೀಪೋತ್ಸವ ದಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು.

ರಾತ್ರಿ 9ರ ವೇಳೆಗೆ ಚೆಲುವನಾರಾಯಣ ಸ್ವಾಮಿಗೆ ಒಳಪ್ರಾಕಾರದ ಉತ್ಸವ ನಡೆದ ನಂತರ ರಾಜ ಗೋಪುರದ ಮುಂಭಾಗ ವೇದಘೋಷದ ಪಠಣದೊಂದಿಗೆ ಕುಂಭ ದೀಪದಿಂದ ವಿಶೇಷ ಆರತಿ ನೆರವೇರಿಸಿ ಗರುಡಗಂಭದ ಮೇಲೆ ದೀಪ ಇರಿಸಲಾಯಿತು.

ಈ ವೇಳೆ ಗಂಡಭೇರುಂಡ ರೂಪಿಯಾದ ಚತುರ್ಮುಖ ರಾಜ ಗೋಪುರದ ಮುಂಭಾಗ ಬಟ್ಟೆಯನ್ನು ಎಣ್ಣೆಯಿಂದ ನೆನಲಿ ತಯಾರಿ ಸಿದ ಕರುಗನ್ನು ಸ್ವಾಮಿ ಮುಂದೆ ಹತ್ತಿಸಿ ದಹನ ಮಾಡಲಾಯಿತು. ಸುಟ್ಟ ಕರಗನ್ನು ಭಕ್ತರು ಪ್ರಸಾದವಾಗಿ ತೆಗೆದುಕೊಂಡು ಹಣೆಗೆ ಧರಿಸಿ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ನಂತರ ಬಂಡೀಕಾರರಿಗೆ ಮಾಲೆ ಮಾರ್ಯಾದೆ ಮಾಡಿದ. ನಂತರ ಸ್ವಾಮಿಗೆ ಚತುರ್ವೀದಿ ಗಳಲ್ಲಿ ಮಂಟಪ ವಾಹನೋತ್ಸವ ವೈಭವ ದಿಂದ ನೆರವೇರಿತು. ವಿಷ್ಣು ದೀಪೋತ್ಸವದ ಅಂಗವಾಗಿ ದೇವಾಲಯದ ಪಾತಾಳಾಂಕಣ, ಚಿನ್ನದ ಧ್ವಜಸ್ತಂಭ, ರಾಮಾನುಜರ ಸನ್ನಿಧಿ ಹಾಗೂ ಅಮ್ಮನವರ ಸನ್ನಿಧಿಗಳ ಆವರಣಗಳಲ್ಲಿ ಸಾಲಾಗಿ ಹಣತೆಗಳನ್ನು ಹಚ್ಚಲಾಗಿತ್ತು. ಇದರೊಂ ದಿಗೆ ಉತ್ಸವ ಗಳು ಮುಕ್ತಾಯಗೊಂಡಿದ್ದು 20ದಿನಗಳ ನಂತರದ ಕೊಠಾರೋತ್ಸವ ದಿಂದ ಉತ್ಸವಗಳು ಆರಂಭವಾಗಲಿವೆ.

Translate »