ಕೆ.ಆರ್.ಪೇಟೆಯಲ್ಲಿ ಮಾದಾರ ಚೆನ್ನಯ್ಯಗೆ ಭಕ್ತಿ ನಮನ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಮಾದಾರ ಚೆನ್ನಯ್ಯಗೆ ಭಕ್ತಿ ನಮನ

December 16, 2019

ಕೆ.ಆರ್.ಪೇಟೆ, ಡಿ.15- ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಾದಿಗ ದಂಡೋರ ಹೋರಾಟ ಸಮಿತಿ ಹಾಗೂ ತಾಲೂಕು ಮಾದಾರ ಚೆನ್ನಯ್ಯ ಸಾಂಸ್ಕøತಿಕ ಕಲಾ ವೇದಿಕೆ ವತಿಯಿಂದ ಶಿವಶರಣ ಮಾದಾರ ಚೆನ್ನಯ್ಯನವರ ಜಯಂತಿ ಹಮ್ಮಿಕೊಂಡು ಶರಣರಿಗೆ ಭಕ್ತಿ ಪೂರ್ವಕ ಗೌರವ ಸಲ್ಲಿಸಲಾಯಿತು.

ಉಪನ್ಯಾಸಕ ಶಿವಕುಮಾರ್ ಮಾತ ನಾಡಿ, 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರ ವಿಶೇಷ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಮಾದಾರ ಚೆನ್ನಯ್ಯ ಅವರು, ಬಸವಣ್ಣ ಅವರೊಂದಿಗೆ ಜಾತಿ ವ್ಯವಸ್ಥೆ, ಲಿಂಗಬೇದ, ವರ್ಣ ಬೇದ ವ್ಯವಸ್ಥೆ ವಿರುದ್ಧ ಅವಿರತ ಹೋರಾಟ ನಡೆಸಿದರು. ಅಂತ ರ್ಜಾತಿ ವಿವಾಹಗಳಿಗೆ ಬಸವಣ್ಣ ಅವರೊಂ ದಿಗೆ ಸಾಕಷ್ಟು ದುಡಿದರು. ಸಾವಿರಾರು ವಚನಗಳನ್ನು ರಚಿಸುವ ಮೂಲಕ ಸಾಮಾ ಜಿಕ ಸಮಾನತೆಗಾಗಿ ಕ್ರಾಂತಿ ಉಂಟು ಮಾಡಿದರು. ಬಸವಣ್ಣನವರ ಸಮ ಕಾಲೀನರಾಗಿ ಸಮಾಜದ ಅಭಿವೃದ್ಧಿ ಶ್ರಮಿ ಸುವ ಮೂಲಕ ಬಸವಣ್ಣನವರ ಅನುಭವ ಮಂಟಪ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನಮಾನ ಪಡೆದುಕೊಂಡಿದ್ದರು. ಇಂತಹ ಮಹನೀಯರನ್ನು ಸಮಾಜವು ಇಂದಿಗೂ ಸ್ಮರಿಸುತ್ತದೆ ಎಂದರೆ ಅವರು ಸಮಾಜದ ಪರಿವರ್ತನೆಗೆ ಮಾಡಿದ ಉತ್ತಮ ಕೆಲಸ. ಹಾಗಾಗಿ ನಾವೆಲ್ಲರೂ ಸಮಾಜಕ್ಕಾಗಿ ಏನಾದರೊಂದು ಸೇವೆ ಸಲ್ಲಿಸಲು ಮುಂದಾಗ ಬೇಕು ಎಂದು ಸಲಹೆ ನೀಡಿದರು.

ತಾಲೂಕು ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಪೂಜಾರಿ ಯಾಲಕ್ಕಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮಾದಾರ ಚೆÀನ್ನಯ್ಯ ಸಾಂಸ್ಕøತಿಕ ಕಲಾ ವೇದಿಕೆ ಸಂಚಾಲಕ ಸಂಗೀತ ಶಿಕ್ಷಕ ರವಿ ಶಿವಕುಮಾರ್, ಗ್ರಾಪಂ ಸದಸ್ಯರಾದ ನಾಗರಾಜು, ಚನ್ನಕೇಶವ, ಲೋಕೇಶ್, ದಲಿತ ಮುಖಂಡರಾದ ಶಿವನಂಜಯ್ಯ, ಕುಮಾರ್, ಗೋಪಿನಾಥ್, ವೆಂಕಟೇಶ್, ನರಸಿಂಹಮೂರ್ತಿ, ವೈರಮುಡಯ್ಯ, ಕೆ.ಮಂಜುನಾಥ್, ಕೃಷ್ಣಯ್ಯ, ಹರೀಶ್, ರಾಮಕೃಷ್ಣ ಮತ್ತಿತರರಿದ್ದರು.

Translate »