ಮದ್ದೂರು ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಡಿಸಿಟಿ
ಮಂಡ್ಯ

ಮದ್ದೂರು ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಡಿಸಿಟಿ

December 16, 2019

ಮದ್ದೂರು, ಡಿ.15- ತಾಲೂಕಿನ ಕೆರೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.
27 ವರ್ಷಗಳ ಬಳಿಕ ತಾಲೂಕಿನ ರುದ್ರಾಕ್ಷಿ ಪುರದ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಕೆರೆಗೆ ಬಾಗಿನ ಅರ್ಪಿಸಿ ಮಾತ ನಾಡಿದ ಅವರು, ನನ್ನ ಅಧಿಕಾರವಧಿ ಯಲ್ಲಿ ತಾಲೂಕಿನ ಅಂಕನಾಥಪುರ, ನವಿಲೆ, ಹೆಬ್ಬೆರಳು, ಆತಗೂರು, ಕೆಸ್ತೂರು ಸೇರಿದಂತೆ ಹಲವು ಕೆರೆಗಳನ್ನು ಅಭಿವೃದ್ಧಿಪಡಿಸಿ ಆ ಭಾಗದಲ್ಲಿ ರೈತರ ಬೆಳೆ ಹಾಗೂ ಜನ, ಜಾನು ವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಯಾಗದಂತೆ ಕ್ರಮ ಕೈಗೊಂಡಿದ್ದೇನೆ ಎಂದರು.

ಪ್ರಸ್ತುತ ರುದ್ರಾಕ್ಷಿಪುರ, ತೈಲೂರು, ಸೋಮನ ಹಳ್ಳಿ, ಮಾರದೇವರಹಳ್ಳಿ, ಆಲಂಶೆಟ್ಟಿಹಳ್ಳಿ, ಅರೆತಿಪ್ಪೂರು ಸೇರಿದಂತೆ ಇನ್ನು ಹಲವು ಕೆರೆಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾಣಾಂಜಿಪಂತ್ ಏತ ನೀರಾವರಿ ಯೋಜನೆ ಸಮಗ್ರ ಅಭಿವೃದ್ಧಿಗೆ 11.50 ಕೋಟಿ ಪ್ರಸ್ತಾ ವನೆ ಸಲ್ಲಿಸಿದ್ದು, ಹಣ ಬಿಡುಗಡೆಯಾದ ನಂತರ ಕಾಮಗಾರಿಗಳು ಪ್ರಾರಂಭ ವಾಗಲಿದೆ ಎಂದರು.

ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ವೇಳೆ ಜಲಧಾರೆ ಯೋಜನೆ ಯಡಿ ಕೆಆರ್‍ಎಸ್‍ನಿಂದ ತಾಲೂಕಿಗೆ ಶುದ್ಧ ಕುಡಿಯುವ ನೀರನ್ನು ಮನೆ ಮನೆಗೆ ತಲುಪಿಸಲು 500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಈ ಯೋಜನೆ ಮೊಟಕು ಗೊಳಿಸಿದೆ ಎಂದು ಆರೋಪಿಸಿದರು.

ಕೆರೆಗಳ ಸಮಗ್ರ ಅಭಿವೃದ್ಧಿ ಜತೆ, ಜತೆಗೆ ಶಿಕ್ಷಣ, ಆರೋಗ್ಯ, ರಸ್ತೆ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಹಾಗೂ ಎಲ್ಲಾ ವರ್ಗದವರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಂಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕಿ ಕಲ್ಪನಾ, ಜಿಪಂ ಸದಸ್ಯ ಬೋರಯ್ಯ, ತಾಪಂ ಸದಸ್ಯ ಸತೀಶ್, ಗ್ರಾಪಂ ಅಧ್ಯಕ್ಷೆ ವೀಣಾ, ಉಪಾಧ್ಯಕ್ಷ ಪ್ರೀತಮ್ ಗೌಡ, ಮುಖಂಡ ರಾಜಣ್ಣ ಇದ್ದರು.

Translate »