ಭಾರತೀನಗರ, ಚಿಕ್ಕರಸಿನಕೆರೆ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆ ಜ: ನಸೇವೆಯೇ ನನ್ನ ಧ್ಯೇಯ: ಡಿ.ಸಿ.ತಮ್ಮಣ್ಣ
ಮಂಡ್ಯ

ಭಾರತೀನಗರ, ಚಿಕ್ಕರಸಿನಕೆರೆ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆ ಜ: ನಸೇವೆಯೇ ನನ್ನ ಧ್ಯೇಯ: ಡಿ.ಸಿ.ತಮ್ಮಣ್ಣ

December 16, 2019

ಭಾರತೀನಗರ, ಡಿ.15(ಅ.ಸತೀಶ್)- ಜನಸೇವೆ ಮಾಡಬೇಕೆಂಬ ಹಂಬಲ ದೊಂದಿಗೆ ರಾಜಕೀಯಕ್ಕೆ ಬಂದಿದ್ದೇನೆ. ಜನಸೇವೆಯೇ ನನ್ನ ಧ್ಯೇಯ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.

ಭಾನುವಾರ ಇಲ್ಲಿನ ಅವರ ನಿವಾಸ ದಲ್ಲಿ ನಡೆದ ಭಾರತೀನಗರ ಹಾಗೂ ಚಿಕ್ಕರಸಿನಕೆರೆ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯನ್ನುz್ದÉೀಶಿಸಿ ಮಾತ ನಾಡಿದ ಅವರು, ಬೆಂಗಳೂರಿನ ರಾಜಾಜಿ ನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಬಂದಿತ್ತು. ಅದನ್ನು ತಿರಸ್ಕರಿಸಿ ಮದ್ದೂರು ತಾಲೂಕಿನಿಂದಲೇ ರಾಜಕೀಯ ಜೀವನ ಆರಂಭಿಸಲು ನಿರ್ಧರಿಸಿದೆ. ಅದರಂತೆ ಸಾರ್ವ ಜನಿಕ ಜೀವನದಲ್ಲಿ ನಡೆಯುತ್ತಿz್ದÉೀನೆ ಎಂದರು.

ಗ್ರಾಪಂ, ತಾಪಂ ಹಾಗೂ ಜಿಪಂಗೆ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಯಾಗಬೇಕೆಂಬುದು ನನ್ನ ಅಭಿಲಾಷೆ. ಅದಕ್ಕಾಗಿ ನಾನು ಜಿಪಂ ಚುನಾವಣೆಯಲ್ಲಿ 2 ಕೋಟಿ ರೂ. ಸಾಲ ತಂದು ಕೆಲಸ ಮಾಡಿದ್ದೆ. ಅದಕ್ಕಾಗಿ 72 ಲಕ್ಷ ರೂ. ಬಡ್ಡಿಯನ್ನೂ ಕಟ್ಟಿ z್ದÉೀನೆ. ಆದರೆ ಇಂದು ನನ್ನನ್ನು ಬಿಟ್ಟು ಬೇರೆಲ್ಲೋ ಹೋಗಿದ್ದಾರೆ. ಇಂತಹ ಕೆಲಸಕ್ಕಾಗಿ ನಾನು ಪಕ್ಷ ಸಂಘಟನೆ ಮಾಡ ಬೇಕಿತ್ತೆ. ಇಂತಹ ಘಟನೆಗಳಿಂದಾಗಿ ನನಗೆ ನೋವುಂಟಾಗಿದೆ ಎಂದು ಭಾವುಕರಾದರು.

ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಿz್ದÉೀವೆ. ಕಾವೇರಿ ನೀರನ್ನು ಮದ್ದೂ ರಿನ ಕೊನೆ ಭಾಗಕ್ಕೆ ತಂದು ಕೊಟ್ಟಿz್ದÉೀವೆ. ಜಲಧಾರೆ ಯೋಜನೆ ಮಂಡ್ಯ, ಮದ್ದೂರು ಕೆಲವು ಭಾಗಗಳಿಗೆ ತಲುಪಬೇಕಿತ್ತು. ಇದಕ್ಕೆ ಜಪಾನ್ 5 ಸಾವಿರ ಕೋಟಿ ರೂ. ಸಾಲ ನೀಡಲು ಒಪ್ಪಿಗೆ ನೀಡಿತ್ತು. ಈ ಯೋಜನೆ ಜಾರಿಯಾಗಿದ್ದರೆ ಮಂಡ್ಯ, ಮದ್ದೂರು ತಾಲೂಕುಗಳಲ್ಲಿ ಸುಮಾರು 75 ರಿಂದ 80ಕ್ಕೂ ಹೆಚ್ಚು ಶುದ್ಧ ನೀರಿನ ಘಟಕ ಸ್ಥಾಪಿಸಲು ಅನುಕೂಲವಾಗುತ್ತಿತ್ತು. ಅದರೆ ಈಗಿನ ಸರ್ಕಾರ ಈ ಯೋಜನೆಗೆ ತಡೆ ಯೊಡ್ಡಿದೆ ಎಂದು ಆರೋಪಿಸಿದರು.

ಮೈಷುಗರ್ ಹಾಗೂ ಪಿಎಸ್‍ಎಸ್‍ಕೆ ಪ್ರಾರಂಭಿಸಲು ನಮ್ಮ ಸರ್ಕಾರ ಯೋಜನೆ ರೂಪಿಸಿತ್ತು. ಆದರೆ ರಾಜಕೀಯ ಮನ್ವಂತರ ದಿಂದಾಗಿ ನಮ್ಮ ಸರ್ಕಾರ ಬಿದ್ದು ಹೋಗಿದೆ. ಈಗಿನ ಸರ್ಕಾರದ ಮೇಲೆ ನಾವು ಒತ್ತಡ ಹೇರುತ್ತಿz್ದÉೀವೆ. ಆದರೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಜನತೆ, ರೈತರು, ಸಂಘ ಸಂಸ್ಥೆಗಳು ಹೋರಾಟ ಮಾಡಿದರೆ ನಾವೂ ಅದಕ್ಕೆ ಕೈ ಜೋಡಿಸುತ್ತೇವೆ ಎಂದರು.

ಈ ವೇಳೆ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾ. ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ರಾಜಣ್ಣ, ದಾಸೇಗೌಡ, ದೊಡ್ಡಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊನ್ನೇಗೌಡ, ಎಚ್.ಎಂ. ಮರಿಮಾದೇಗೌಡ, ತಮ್ಮಯ್ಯ, ಎ.ಟಿ. ಬಲ್ಲೇಗೌಡ, ಎ.ಎಸ್.ಬೋರೇಗೌಡ, ಪುಟ್ಟ ಸ್ವಾಮಿ, ಸುಬ್ಬಣ್ಣ, ಕೆ.ಎಲ್.ಶಿವರಾಮು, ಮಧು, ಪಾರ್ವತಮ್ಮ ಸೇರಿದಂತೆ ಇತರರಿದ್ದರು.

ಕೊನೆ ಘಳಿಗೆಯಲ್ಲಿ ಈಡೇರದ ಶಾಸಕರ ಉದ್ದೇಶ
ಗ್ರಾಮೀಣ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ನೀಡುವ ಶಾಸಕ ಡಿ.ಸಿ.ತಮ್ಮಣ್ಣ ನವರ ಉz್ದÉೀಶ ಕೊನೆ ಘಳಿಗೆಯಲ್ಲಿ ಕೈ ಗೂಡಲಿಲ್ಲ ಎಂದು ಸಂತೋಷ್ ತಮ್ಮಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.

ಇಂದಿಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಾರಿಗೆ ಸಚಿವರಾಗಿದ್ದ ತಮ್ಮಣ್ಣ ಅವರು ಗ್ರಾಮೀಣ ಯುವಜನರಿಗೆ ಉದ್ಯೋಗ ಕೊಡಿ ಸಲು ಯೋಜನೆ ಸಿದ್ಧಪಡಿಸಿದ್ದರು. ಆದರೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಅದಕ್ಕೆ ಅಡ್ಡಿಯಾಗಿದ್ದರು. ಇದರಿಂದ ಬೇಸತ್ತು ನಾಲ್ಕೈದು ಸಂಪುಟ ಸಭೆಗೂ ಗೈರು ಹಾಜರಾಗಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳು ವಿವರಣೆ ಕೇಳಿದಾಗ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರ ಧೋರಣೆಯಿಂದ ಬೇಸರವಾಗಿದ್ದು, ಅವರನ್ನು ಬದಲಿಸು ವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಎಂಡಿ ಅವರನ್ನು ಬದಲಿಸಿದ್ದರು. ಈ ಬೆಳವಣಿಗೆ ನಡೆಯುವಷ್ಟರಲ್ಲಿ ನಮ್ಮ ಸರ್ಕಾರ ಬಿದ್ದು ಹೋಗಿತ್ತು. ಮುಂದೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದರು.
ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಪಕ್ಷದ ಸಂಘಟನೆಗಾಗಿ ಎಲ್ಲರೂ ದುಡಿಯೋಣ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು.

Translate »