ಬಿಎಸ್‍ವೈ ಮುಂದೆ ಸವಾಲುಗಳ ಸಾಲು ಸಾಲು…
ಮೈಸೂರು

ಬಿಎಸ್‍ವೈ ಮುಂದೆ ಸವಾಲುಗಳ ಸಾಲು ಸಾಲು…

December 15, 2019

ಸಂಪುಟದಿಂದ ಯಾರನ್ನು ಕೈಬಿಡುವುದು, ಯಾರ ‘ಕೈ’ ಹಿಡಿದು ಸಂಪುಟಕ್ಕೆ ಸೇರಿಸಿಕೊಳ್ಳುವುದು ಎಂಬುದೆಲ್ಲ ಯಕ್ಷಪ್ರಶ್ನೆಯಂತೆ ಕಾಣುತ್ತಿದೆ. ಸಚಿವರಾಗುವ ಕನಸು ಕಾಣುತ್ತಿರುವವರಿಗೆ ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನ ಬೇಕಾಗಿಲ್ಲ. ಗೂಟದ ಕಾರು, ವಿಧಾನಸೌಧದ ಕೊಠಡಿ ಬೇಕೇಬೇಕು. ಈಗ ವಿಧಾನಸೌಧದಲ್ಲಿ ಕೊಠಡಿಗಳೂ ಖಾಲಿ ಇಲ್ಲ. ಏಕೆಂದರೆ ಎಲ್ಲವನ್ನೂ ಮುಖ್ಯಮಂತ್ರಿಗಳ ಸಲಹೆಗಾರರೇ ಆಕ್ರಮಿಸಿಕೊಂಡಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನ ಕೊಡಲಾಗದಿದ್ದರೆ, ಪ್ರತಿ ಸಚಿವರಿಗೆ ಒಬ್ಬೊಬ್ಬ ಸಲಹೆಗಾರರನ್ನು ನೇಮಿಸಿ ಅವರಿಗೂ ಸಚಿವ ಸ್ಥಾನಮಾನ ಕೊಟ್ಟರೂ ಆಶ್ಚರ್ಯವಿಲ್ಲ. ಹಿಂದಿನ ಸರ್ಕಾರದಲ್ಲಿ ಈ ಪ್ರಯೋಗ ಸ್ವಲ್ಪಮಟ್ಟಿಗೆ ನಡೆದಿದೆ. ಒಟ್ಟಾರೆ ಬಿಜೆಪಿ ವರಿಷ್ಠರಿಗೆ, ಅದರಲ್ಲೂ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಗ್ನಿಪರೀಕ್ಷೆ ಕಾದಿರುವುದು ಖಚಿತ.

ವಿಧಾನಸಭೆ ಉಪಚುನಾವಣೆ ಗೆಲುವಿ ನಿಂದ ಬೀಗಬೇಕಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಲ್ಲಕ್ಕೂ, ಎಲ್ಲರಿಗೂ ಬಾಗಬೇಕಾಗಿ ಬಂದಿದೆ. ಅಂದರೆ ಸಂಪುಟ ವಿಸ್ತರಣೆ, ಇಲ್ಲವೆ ಪುನರ್ರಚನೆ ಹಾಗೂ ಖಾತೆಗಳ ಹಂಚಿಕೆ ಅವರ ಪಾಲಿಗೆ ಸಾಲು ಸಾಲು ಸವಾಲು ಗಳನ್ನು ತಂದೊಡ್ಡಿದೆ. ಜಿಲ್ಲೆ ಹಾಗೂ ಜಾತಿವಾರು ಪ್ರಾತಿನಿಧ್ಯ ನೀಡುವುದು, ಜೊತೆಗೆ ಸಾಮಾಜಿಕ ನ್ಯಾಯ ಮರೆಯ ದಂತೆ ಎಚ್ಚರ ವಹಿಸುವುದು ಯಡಿಯೂರಪ್ಪ ಅವರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಸಂಕ್ರಾಂತಿವರೆಗೆ ಸಂಪುಟ ವಿಸ್ತರಣೆ ಮುಂದೂಡುವ ಸಾಧ್ಯತೆಯೇ ಹೆಚ್ಚಾಗಿದೆ.

ಒಂದೆಡೆ ದಶಕಗಳಿಂದ ಬಿಜೆಪಿಯಲ್ಲೇ ಇದ್ದು ಶಿಸ್ತಿನ ಸಿಪಾಯಿಗಳಾದ ಶಾಸಕ ರನ್ನು ನಿರ್ಲಕ್ಷಿಸುವುದೇ? ಇಲ್ಲವೇ ಈ ಸರ್ಕಾರ ಅಸ್ತಿತ್ವಕ್ಕೆ ಬರಲು ಅಧಿಕಾರ- ಶಾಸಕ ಸ್ಥಾನವನ್ನು ಒತ್ತೆಯಿಟ್ಟು ಮತ್ತೆ ಅಗ್ನಿಪರೀಕ್ಷೆ ಗೆದ್ದುಬಂದವರ ವಿಶ್ವಾಸ ಉಳಿಸಿ ಕೊಳ್ಳುವುದೇ? ಇನ್ನು ಕಳೆದ ಬಾರಿ ಸಚಿವ ಸ್ಥಾನದಿಂದ ವಂಚಿತರಾಗಿ ಚಾತಕ ಪಕ್ಷಿ ಗಳಂತೆ ಕಾಯುತ್ತಿರುವವರನ್ನು ತೃಪ್ತಿ ಪಡಿಸುವುದೇ? ನಿಜಕ್ಕೂ ಮುಖ್ಯಮಂತ್ರಿ ಗಳಿಗೆ ದಾರಿಯೇ ಕಾಣದಂತಾಗಿದೆ. ಚುನಾವಣೆ ಸಮಯದಲ್ಲಿ ಹಾಗೂ ಹತ್ತು ಹಲವು ಸಂದರ್ಭಗಳಲ್ಲಿ ಎಲ್ಲಾ “ಅನರ್ಹ” ಶಾಸಕರನ್ನೂ (ಸೋಲಲಿ, ಗೆಲ್ಲಲಿ) ಸಚಿವ ರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಈ ಹದಿನೈದು ಮಂದಿ ಈಗ ಸಚಿವ ಸ್ಥಾನದ ಜೊತೆಗೆ ಇಂತಹ ಖಾತೆಯೇ ಬೇಕೆಂದು ಪಟ್ಟುಹಿಡಿದಂತೆ ಕಾಣುತ್ತದೆ. ಈ ಕಾರಣದಿಂದ ಸಂಪುಟ ಪುನರ್ರಚನೆ ಹಾಗೂ ಖಾತೆಗಳ ಮರುಹಂಚಿಕೆ ಅನಿವಾರ್ಯವಾಗಿದೆ.

ಇನ್ನು ಕಾನೂನಿನ ದವಡೆಯಲ್ಲಿ ಸಿಕ್ಕಿ ಹೊರಬರಲಾಗದೆ ಒದ್ದಾಡುತ್ತ ತ್ರಿಶಂಕು ಸ್ಥಿತಿಯಲ್ಲಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಹಾಗೂ ರಾಯಚೂರಿನ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ತಮ್ಮನ್ನು ಈ ಎಡಬಿಡಂಗಿ ಸ್ಥಿತಿಯಿಂದ ಪಾರುಮಾಡಿ ಮಾನ ಉಳಿಸಿ ಕೊಳ್ಳಲು ಎಂಎಲ್‍ಸಿ ಮಾಡಿ, ಸಚಿವ ರನ್ನಾಗಿ ಮಾಡಿ ಎಂದು ಬಿಎಸ್‍ವೈಗೆ ದುಂಬಾಲು ಬಿದ್ದಿದ್ದಾರೆ.

ಯಾವಾಗ ಎಲ್ಲಿಗೆ ಬೇಕಾದರೂ ಹಾರಿ ಅಧಿಕಾರ ಗಿಟ್ಟಿಸಬಹುದೆಂದು ನಂಬಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮಾಜಿ ಸಚಿವ ಆರ್. ಶಂಕರ್ ನಡುನೀರಿನಲ್ಲಿ ನಿಂತಿದ್ದಾರೆ. ಇವರನ್ನು ಎಂಎಲ್‍ಸಿ ಮಾಡಿ ಸಚಿವಸ್ಥಾನ ನೀಡುವ ಭರವಸೆಯನ್ನು ಈಗಾಗಲೇ ನೀಡಲಾಗಿದೆ. ಈ ಹದಿನೇಳು ಮಂದಿಯ ಕಥೆ ಈ ರೀತಿ ಒತ್ತಡದ ಹಂಡೆಯಲ್ಲೇ ಕುದಿಯುತ್ತಿದೆ.

ಇನ್ನು ಬಿಎಸ್‍ವೈ ಅವರ ಕಟ್ಟಾಳುಗಳೂ, ಪ್ರಭಾವಿ ನಾಯಕರೂ ಆದ ಬೆಳಗಾವಿಯ ಉಮೇಶ್ ಕತ್ತಿ, ಆರೋಪದಿಂದ ಪಾರಾಗಿ ರುವ ಬೆಂಗಳೂರಿನ ಅರವಿಂದ ಲಿಂಬಾವಳಿ, ಕಲಬುರಗಿಯ ದತ್ತಾತ್ರೇಯ ರೇವೂರ, ಸುಭಾಶ್ ಗುತ್ತೇದಾರ್, ಮೈಸೂರಿನ ರಾಮ ದಾಸ್ ಹೀಗೆ ಪ್ರಾತಿನಿಧ್ಯವಿಲ್ಲದ ಹತ್ತು ಹಲವು ಜಿಲ್ಲೆಗಳ ಆಕಾಂಕ್ಷಿಗಳ ದೊಡ್ಡ ‘ಕ್ಯೂ’ ಇದೆ. ಶಾಸಕರನ್ನು ಹಿಡಿದು ತರು ವಲ್ಲಿ ಹಾಗೂ ಅವರನ್ನು ಸುರಕ್ಷಿತವಾಗಿ ‘ಬಂಧಿಸಿಡುವಲ್ಲಿ’ ಯಶಸ್ವಿಯಾಗಿ ಹಗಲು ಇರುಳು ಬಿಎಸ್‍ವೈಗಾಗಿ ಶ್ರಮಿಸುತ್ತಿರುವ ಚೆನ್ನಪಟ್ಟಣದ ಸಿ.ಪಿ. ಯೋಗೇಶ್ವರ್ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ ನಾಲ್ಕು ಮಂದಿ, ಬೆಳಗಾವಿಯಲ್ಲಿ ಡಿಸಿಎಂ ಸೇರಿ ದಂತೆ ಇಬ್ಬರು ಸಚಿವರಿದ್ದಾರೆ. ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಇನ್ನೂ ತಲಾ ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ. ಹಾವೇರಿ ಯಲ್ಲಿ ಶಂಕರ್ ಜೊತೆಗೆ ಬಿ.ಸಿ. ಪಾಟೀಲ್ ಅವರಿಗೂ ಕೊಡಬೇಕು. ಗೃಹ ಸಚಿವ ಬಸವ ರಾಜ ಬೊಮ್ಮಾಯಿ ಇದೇ ಜಿಲ್ಲೆಯ ಸಚಿವರು. ಇವು ಕೇವಲ ಕೆಲವು ನಿದರ್ಶನಗಳಷ್ಟೆ. ಹೀಗೆ ಈ ಸಮಸ್ಯೆಗಳನ್ನು ಬಗೆಹರಿಸಿ, ಸಾಮಾಜಿಕ ನ್ಯಾಯ, ಜಿಲ್ಲೆ ಹಾಗೂ ಜಾತಿ ಪ್ರಾತಿನಿಧ್ಯ ನೀಡಬೇಕೆಂಬುದೇ ದೊಡ್ಡ ಕಗ್ಗಂಟಾಗಿದೆ.

ಸಂಪುಟದಿಂದ ಯಾರನ್ನು ಕೈಬಿಡುವುದು, ಯಾರ ‘ಕೈ’ ಹಿಡಿದು ಸಂಪುಟಕ್ಕೆ ಸೇರಿಸಿ ಕೊಳ್ಳುವುದು ಎಂಬುದೆಲ್ಲ ಯಕ್ಷಪ್ರಶ್ನೆಯಂತೆ ಕಾಣುತ್ತಿದೆ. ಸಚಿವರಾಗುವ ಕನಸು ಕಾಣು ತ್ತಿರುವವರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಬೇಕಾಗಿಲ್ಲ. ಗೂಟದ ಕಾರು, ವಿಧಾನ ಸೌಧದ ಕೊಠಡಿ ಬೇಕೇಬೇಕು. ಈಗ ವಿಧಾನ ಸೌಧದಲ್ಲಿ ಕೊಠಡಿಗಳೂ ಖಾಲಿ ಇಲ್ಲ. ಏಕೆಂದರೆ ಎಲ್ಲವನ್ನೂ ಮುಖ್ಯಮಂತ್ರಿಗಳ ಸಲಹೆಗಾರರೇ ಆಕ್ರಮಿಸಿಕೊಂಡಿದ್ದಾರೆ.

ಎಲ್ಲರಿಗೂ ಸಚಿವ ಸ್ಥಾನ ಕೊಡಲಾಗ ದಿದ್ದರೆ, ಪ್ರತಿ ಸಚಿವರಿಗೆ ಒಬ್ಬೊಬ್ಬ ಸಲಹೆ ಗಾರರನ್ನು ನೇಮಿಸಿ ಅವರಿಗೂ ಸಚಿವ ಸ್ಥಾನಮಾನ ಕೊಟ್ಟರೂ ಆಶ್ಚರ್ಯವಿಲ್ಲ. ಹಿಂದಿನ ಸರ್ಕಾರದಲ್ಲಿ ಈ ಪ್ರಯೋಗ ಸ್ವಲ್ಪ ಮಟ್ಟಿಗೆ ನಡೆದಿದೆ. ಒಟ್ಟಾರೆ ಬಿಜೆಪಿ ವರಿಷ್ಠ ರಿಗೆ, ಅದರಲ್ಲೂ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಗ್ನಿಪರೀಕ್ಷೆ ಕಾದಿರುವುದು ಖಚಿತ.

ಇದು ಬಿಜೆಪಿಯ ವ್ಯಥೆಯ ಕಥೆಯಾದರೆ, ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಎದುರಿಸುವ ಸವಾಲುಗಳು ಇನ್ನೊಂದು ರೀತಿಯದ್ದು. ಅಲ್ಲಿ ಬದಲಾ ವಣೆಯ ಪರ್ವ ಆರಂಭವಾಗಿದೆ. ಈ ವಿಚಾರ ದಲ್ಲಿ ಎರಡೂ ಪಕ್ಷಗಳಲ್ಲಿ ಜಿಜ್ಞಾಸೆ ಉಂಟಾಗಿದೆ.

ಕಾಂಗ್ರೆಸ್: ಸೋಲಿನ ಹೊಣೆ ಹೊತ್ತು ನೈತಿಕತೆ ಹೆಸರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸೂತ್ರಧಾರ ಕೆ.ಸಿ. ವೇಣುಗೋಪಾಲ್ ಹೀಗೆ ಈ ತ್ರಿಮೂರ್ತಿ ಗಳು ರಾಜೀನಾಮೆ ನೀಡಿದ್ದಾರೆ. ಪಕ್ಷದವರು ಇಲ್ಲವೇ ಆಡಳಿತ ಪಕ್ಷದವರು ಒತ್ತಾಯಿಸುವ ಮೊದಲೇ ಅಧಿಕಾರ ಸ್ಥಾನ ತ್ಯಾಗ ಮಾಡಿ ಮೇಲ್ಪಂಕ್ತಿ ಹಾಕಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನೆಲಕಚ್ಚಿದಾಗಲೇ ಈ ತ್ರಿಮೂರ್ತಿಗಳು ತಾವಿದ್ದ ಸ್ಥಾನಗಳನ್ನು ತ್ಯಜಿಸಬೇಕಿತ್ತು. ರಾಜ್ಯ ದಲ್ಲಿ ಕಾಂಗ್ರೆಸ್ ತನ್ನ ಇತಿಹಾಸದಲ್ಲಿ ಕಂಡರಿಯ ದಂತಹ ಸೋಲು ಕಂಡು ಒಂದೇ ಒಂದು ಸ್ಥಾನಕ್ಕೆ ಕುಸಿದಿದೆ. ಆದರೂ ಕಾಂಗ್ರೆಸ್ ಹೈಕಮಾಂಡ್ ಸಿದ್ದುವಿಗೆ ಬಡ್ತಿ ನೀಡಿ ವಿರೋಧ ಪಕ್ಷದ ನಾಯಕನ ಸ್ಥಾನಮಾನ ನೀಡಿತ್ತು. ಈಗ ಪಕ್ಷ ಮತ್ತೆ ಮಕಾಡೆ ಮಲಗಿದೆ.

ಮೂಲ ಕಾಂಗ್ರೆಸ್ಸಿಗರನ್ನೂ ಹಿರಿಯರನ್ನೂ ಧಿಕ್ಕರಿಸಿ ತಾವು ಆಡಿದ್ದೇ ಆಟವೆಂದು ಭ್ರಮಿಸಿ, ‘ಫಿಲ್ಟರ್’ ಇಲ್ಲದ ನಾಲಿಗೆ ಆಡಿಸು ತ್ತಿದ್ದ ಸಿದ್ದುವಿಗೆ ಕಡಿವಾಣ ಹಾಕುವುದು ಅನಿವಾರ್ಯ. ಇದು ಅವರ ವಿರೋಧಿಗಳ ಸಂಕಲ್ಪ ಮತ್ತು ಬಹುದಿನಗಳ ಬೇಡಿಕೆ.

ಕಾಂಗ್ರೆಸ್ ಪಕ್ಷದ ಸೋಲಿಗೆ ಬಹುಮಟ್ಟಿನ ಕಾರಣವೆಂದರೆ ಸಿದ್ದು ಅವರ ಮಾತಿನ ಶೈಲಿ. ಬಿಎಸ್‍ವೈ ಅವರನ್ನು ಏಕವಚನದಲ್ಲಿ ನಿಂದಿಸುವ ಹಾಗೂ ಹೀಯ್ಯಾಳಿಸುವ ಮೂಲಕ ಲಿಂಗಾಯಿತರ ವಿರೋಧ ಕಟ್ಟಿ ಕೊಂಡರು. ಪ್ರಧಾನಿಯಾದ ಏಕೈಕ ಕನ್ನಡಿಗ ದೇವೇಗೌಡರು, ಅವರ ಮಗ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಮತ್ತು ಮತ್ತೊಬ್ಬ ಮಗ ರೇವಣ್ಣ ಅವರನ್ನು ಅವಕಾಶ ಸಿಕ್ಕಾಗ ಲೆಲ್ಲ ಹಳಿದಿದ್ದು ಒಕ್ಕಲಿಗರನ್ನು ಕೆರಳಿಸಿತು.

ಜೊತೆಗೆ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಡಿಸಿಎಂ ಡಾ. ಪರಮೇಶ್ವರ, ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಈಗ ಬಿಜೆಪಿಯಲ್ಲಿರುವ ಶ್ರೀನಿವಾಸ ಪ್ರಸಾದ್ ಅಂಥವರ ವಿರೋಧ ಕಟ್ಟಿಕೊಂಡಿದ್ದು, ಇನ್ನು ತಮ್ಮ ಕುಲಬಾಂಧವ ರಾದ ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್, ಭೈರತಿ ಬಸವರಾಜು ಮೊದಲಾದವರು ಪಕ್ಷದಿಂದ ಹೊರಗೆ ಹೋಗುವಂತೆ ಹೊಗೆ ಹಾಕಿದ್ದೂ ಕಾರಣವಾಯಿತು.

ಸಾಲದೆಂಬಂತೆ ದ್ವೇಷ ಸಾಧಿಸಲೆಂದೇ ತಮ್ಮ ಜನಾಂಗದವರಾದ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರನ್ನು ಸೋಲಿಸುವ ಮೂಲಕ ತಮ್ಮವರನ್ನೇ ತುಳಿದದ್ದು ಎಲ್ಲರಿಗೂ ತಿಳಿಯಿತು. ಹೀಗೆ ‘ಅಹಿಂದ’ ಸಂಘಟನೆ ಯನ್ನೇ ದುರ್ಬಲಗೊಳಿಸುವ ಮೂಲಕ ಕಾಂಗ್ರೆಸ್ ‘ಕೈ’ ಮೇಲೆ ಬರೆ ಎಳೆದರೆಂಬ ಆರೋಪವೂ ಸಿದ್ದುವಿನ ಮೇಲಿದೆ.

ದಲ್ಲಾಳಿ ಜಮೀರ್ ಅಹಮದ್ ಅವರನ್ನು ಕರೆತಂದು ಸಚಿವರನ್ನಾಗಿ ಮಾಡಿ, ಹಿರಿಯ ರಾದ ರೋಷನ್ ಬೇಗ್ ಹಾಗೂ ರಾಮ ಲಿಂಗಾ ರೆಡ್ಡಿ ಅವರನ್ನು ಕಡೆಗಣಿಸಿದ್ದು ಪಕ್ಷಕ್ಕೆ ಮುಳುವಾಯಿತು. ಇನ್ನು ಬಹಿರಂಗ ಸಭೆಗಳಲ್ಲಿ ಸರ್ಕಾರವನ್ನು ಟೀಕಿಸುವ ಬದಲು ವೈಯಕ್ತಿಕವಾಗಿ ಅವಹೇಳನ ಮಾಡುತ್ತಾ ಸಭಿಕರನ್ನು ರಂಜಿಸಲು ‘ಜೋಕರ್’ನಂತೆ ವರ್ತಿಸಿದ್ದು ನಗೆಪಾಟಲಿಗೀಡಾಯಿತು.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಂತೂ ಸಿದ್ದು ಪ್ರಭಾವ ಮತ್ತು ಸಾಧನೆ ಶೂನ್ಯ. ಹೈಕಮಾಂಡ್ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಪಕ್ಷದ ಪಾಡು ಏನೆಂಬುದು ಎಲ್ಲರ ಊಹೆಗೆ ನಿಲುಕುತ್ತದೆ. ಆದರೂ ನಿಜಸ್ಥಿತಿ ಏನೆಂದರೆ ಸಿದ್ದುವಿಗೆ ಪರ್ಯಾಯ ನಾಯಕ ಕಾಂಗ್ರೆಸ್ ಪಕ್ಷಕ್ಕೆ ಕಾಣುತ್ತಿಲ್ಲ. ಇದೇ ಕಾಂಗ್ರೆಸ್ ಹೈಕಮಾಂಡ್‍ನ ಧರ್ಮಸಂಕಟ. ಇದು 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‍ನ ಹೀನಾಯ ಸ್ಥಿತಿಗೆ ಹಿಡಿದ ಕನ್ನಡಿ.

ಜೆಡಿಎಸ್: ಜಾತ್ಯತೀತ ಜನತಾ ದಳದ್ದು ಇನ್ನೊಂದು ಕಥೆ. ಆ ಪಕ್ಷಕ್ಕೆ ಅಪ್ಪ-ಮಕ್ಕಳನ್ನು ಬಿಟ್ಟರೆ ವಾರಸುದಾರರೇ ಇಲ್ಲ. ಏಕೆಂದರೆ ಅಧ್ಯಕ್ಷ ದೇವೇಗೌಡರ ತಲೆಮೇಲಿನ ತೆನೆಯ ಹೊರೆ ಇಳಿಸಿದರೆ ಅದನ್ನು ಹೊರುವವರು ಯಾರೂ ಇಲ್ಲ. ಮಣ್ಣಿನ ಮಗನಿಗೆ ಮಣ್ಣಿನ ಮಗನೇ ಸಾಟಿ. ಆದ್ದರಿಂದ ಎಂಥ ಸ್ಥಿತಿ ಎದುರಾಗಲೀ ದೊಡ್ಡಗೌಡರು ಪಕ್ಷಕ್ಕೆ ರಾಜೀನಾಮೆ ಕೊಡುವ ಪರಿಸ್ಥಿತಿಯೇ ಉದ್ಭವವಾಗುವುದಿಲ್ಲ.

ಸೋಲಿನ ಮೇಲೆ ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಡಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಏನು ಸ್ಥಾನಮಾನ ಅಲಂಕರಿಸದಿದ್ದರೂ ಮಾಜಿ ಮುಖ್ಯಮಂತ್ರಿ ಅನ್ನುವುದಂತೂ ಶಾಶ್ವತ ಬಿರುದು. ಇನ್ನು ಸ್ಥಾನಮಾನ ತ್ಯಾಗ ಮಾಡಲು ಏನಿದೆ? ಇದರಂತೆ ‘ಸೂಪರ್ ಸಿಎಂ’ ರೇವಣ್ಣನವರ ಸ್ಥಿತಿ ಬೇರೇನೂ ಇಲ್ಲ. ಏಕೆಂದರೆ ಅವರೂ ತಮ್ಮನಂತೆ ಮಾಜಿಯೇ ಹೊರತು ಯಾವ ಜವಾ ಬ್ದಾರಿಯನ್ನೂ ಹೊಂದಿಲ್ಲ.

ಈಗ ಉಳಿದಿರುವ ಏಕೈಕ ವ್ಯಕ್ತಿ ಎಂದರೆ ಯುವಘಟಕದ ಅಧ್ಯಕ್ಷ ನಿಖಿಲ್. ಈಗಾ ಗಲೇ ಅವರು ಹರಕೆಯ ಕುರಿಯಾಗಿ ಸೋತು ಸುಣ್ಣವಾಗಿದ್ದಾರೆ. ಈ ಸ್ಥಾನ ಹೋದರೂ ಇದ್ದರೂ ವ್ಯತ್ಯಾಸ ಆಗದು. ಇನ್ನು ಹಂಗಾಮಿ ಅಧ್ಯಕ್ಷರಂತಿರುವ ಎಚ್.ಕೆ. ಕುಮಾರಸ್ವಾಮಿ ಜೆಡಿಎಸ್ ಅಧ್ಯಕ್ಷ ಸ್ಥಾನ ತ್ಯಜಿಸಬೇಕು ಅಷ್ಟೆ. ಅವರು ಈ ದಾರಿ ಕಂಡುಕೊಂಡಿದ್ದಾರೆ. ಹೀಗಾಗಿ ತೆನೆ ಹೊರುವವರಿಗೆ ಬರ ಬಂದಿದೆ.

ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ದಿಂದ ಮಗ ನಿಖಿಲ್ ಕೂಡಾ ಗೆಲ್ಲಲಿಲ್ಲ. ಈ ವಿಧಾನಸಭೆ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆ ನಾರಾಯಣಗೌಡ ಕೂಡಾ ಸೋಲಲಿಲ್ಲ. ಪಕ್ಷ ನೆಲೆ ಕಳೆದುಕೊಳ್ಳು ತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ಏಕೆ ಹೀಗೆ ಎಂದರೆ, ಪಕ್ಷದ ಅಧಿಕಾರ ಹಾಗೂ ಖಜಾನೆ ಗೌಡರ ಮನೆಯಲ್ಲಿಯೇ ಕೈಕಾಲು ಮುರಿದು ಕೊಂಡು ಬಿದ್ದಿದೆ. ಅಧ್ಯಕ್ಷರಾದವರು ನಾಮಕಾವಸ್ತೆ ಅಷ್ಟೆ. ಹೀಗಾಗಿ ಜೆಡಿಎಸ್ ಅನ್ನುವುದು ಗೌಡರ ಕುಟುಂಬದ ಪಕ್ಷ ಎಂದಷ್ಟೇ ಸೀಮಿತ.

ಜೆಡಿಎಸ್ ಹೀಗೆಯೇ ಕುಟುಂಬ ಪಕ್ಷ ವಾಗಿ ಮುಂದುವರೆದರೆ, ಅದರ ಬಹು ತೇಕ ಶಾಸಕರು ಬಿಜೆಪಿಗೆ ವಲಸೆ ಬಂದರೆ ಇಲ್ಲವೇ ವಿಧಾನಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಕೂರಲು ನಿರ್ಧರಿಸುವ ಸಾಧ್ಯತೆ ಗಳನ್ನು ಅಲ್ಲಗಳೆಯುವಂತಿಲ್ಲ. ಆಗ ಜೆಡಿಎಸ್ ಕೇವಲ 8-10 ಶಾಸಕರ ಪಕ್ಷವಾಗಿ ಉಳಿಯ ಬೇಕಾಗುತ್ತದೆ. ಎಚ್ಚೆತ್ತು ಅಪಾಯದಿಂದ ಪಕ್ಷವನ್ನು ಪಾರು ಮಾಡಿಕೊಳ್ಳುವ ಹೊಣೆ ದೊಡ್ಡಗೌಡರ ಮೇಲಿದೆ.

ಹೀಗೆ ಮೂರೂ ಪಕ್ಷಗಳಲ್ಲಿ ಒಂದಲ್ಲಾ ಒಂದು ರೀತಿಯ ಬೇಗುದಿ ಕಾಣುತ್ತಿದೆ. ಆಡಳಿತ ಪಕ್ಷವಾದ ಬಿಜೆಪಿ ಸುಭದ್ರ ಹಾಗೂ ದಕ್ಷ ಆಡಳಿತ ಕೊಟ್ಟರೆ ಮಾತ್ರ ಜನರ ನಿರೀಕ್ಷೆ ಹುಸಿಯಾಗುವುದಿಲ್ಲ. ಇನ್ನು ಕಾಂಗ್ರೆಸ್ ಬದಲಾವಣೆ ಪರ್ವ ದಲ್ಲಿದೆ. ಜೆಡಿಎಸ್ ಆತ್ಮವಿಮರ್ಶೆ ಮಾಡಿ ಕೊಳ್ಳಬೇಕಿದೆ. ಒಟ್ಟಾರೆ ಮೂರೂ ಪಕ್ಷ ಗಳು ಮೂರು ಹಾದಿಯಲ್ಲಿ ಸಾಗುತ್ತಿವೆ.

ಮೊನ್ನೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅನಾರೋಗ್ಯದ ಸಂದರ್ಭದಲ್ಲಿ ಎಲ್ಲ ರಾಜಕಾರಣಿಗಳು ‘ಮಾದರಿ’ ಸ್ನೇಹ ಮೆರೆದಿದ್ದಾರೆ. ಆಸ್ಪತ್ರೆ ಹಾಸಿಗೆಯ ಮುಂದೆ ಪರಸ್ಪರ ಹಾಸ್ಯಪ್ರಜ್ಞೆ ತೋರಿದ್ದಾರೆ. ಅವರ ಸಲುವಾಗಿ ಹೊಡೆ ದಾಡಿಕೊಂಡ ಅಭಿಮಾನಿಗಳನ್ನು ಈಗ ಏನೆಂದು ಕರೆಯಬೇಕೋ ತಿಳಿಯುತ್ತಿಲ್ಲ!

Translate »