ಶೇ.25 ಆಹಾರ ಉತ್ಪನ್ನ ವ್ಯರ್ಥ; ಸಂಸ್ಕರಣೆಗೆ ಆದ್ಯತೆ ಅಗತ್ಯ
ಮೈಸೂರು

ಶೇ.25 ಆಹಾರ ಉತ್ಪನ್ನ ವ್ಯರ್ಥ; ಸಂಸ್ಕರಣೆಗೆ ಆದ್ಯತೆ ಅಗತ್ಯ

December 15, 2019

ಮೈಸೂರು, ಡಿ. 14(ಎಸ್‍ಬಿಡಿ)- ಆಹಾರ ಉತ್ಪನ್ನ ಸಂಸ್ಕರಣೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಇಂಡಿಯನ್ ಇನ್ಸ್‍ಟಿ ಟ್ಯೂಟ್ ಆಫ್ ಸೈನ್ಸ್‍ನ ಸಾಲಿಡ್ ಸ್ಟೇಟ್ ಅಂಡ್ ಸ್ಟ್ರಕ್ಚರಲ್ ಕೆಮಿಸ್ಟ್ರಿ ವಿಭಾಗದ ಪೆÇ್ರ. ಗೌತಮ್ ಆರ್.ದೇಸಿರಾಜು ಗಮನ ಸೆಳೆದರು.

ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ವತಿಯಿಂದ ಆಯೋಜಿಸಿರುವ ಮೂರು ದಿನಗಳ 7ನೇ ಜೈವಿಕ ಸಂಸ್ಕರಣ ಸಮ್ಮೇ ಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಆಹಾರ ಸಂಸ್ಕರಣೆ ವಿಚಾರ ದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಪರಿಣಾಮ ಶೇ. 20ರಿಂದ 25 ರಷ್ಟು ಆಹಾರ ಉತ್ಪನ್ನ ಗಳು ವ್ಯರ್ಥವಾಗುತ್ತಿವೆ. ಕೃಷಿಗೆ ಅಗತ ್ಯಕ್ಕಿಂತ ಹೆಚ್ಚು ಪ್ರಮಾಣದ ನೀರು ಬಳಕೆ ಯಾಗುತ್ತಿದೆ. ನೀರಾವರಿ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಪೋಲಾಗು ತ್ತಿದೆ. ಕೃಷಿ ಮತ್ತು ಆಹಾರ ಕ್ಷೇತ್ರದಲ್ಲಿ ಮಾತ್ರ ವಲ್ಲ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಸೂಕ್ತ ಅರಿವು ಹಾಗೂ ನಿರ್ವಹಣೆ ಕೊರತೆಯಿಂದ ನಷ್ಟ ಉಂಟಾಗುತ್ತಿದೆ. ಆದರೆ ಸಣ್ಣ ಬದಲಾ ವಣೆಯಿಂದ ದೊಡ್ಡ ಕ್ರಾಂತಿಯಾಗಿ ಜನತೆಗೆ ಉಪಯೋಗಬಹುದು. ಈ ನಿಟ್ಟಿನಲ್ಲಿ ದೇಶ ದಲ್ಲಿ ಹೆಚ್ಚುತ್ತಿರುವ ಆಹಾರ ಉತ್ಪನ್ನಗಳ ತ್ಯಾಜ್ಯವನ್ನು ತಾಂತ್ರಿಕ ಪರಿಹಾರಗಳ ಮೂಲಕ ನಿರ್ವಹಣೆ ಮಾಡಲು ಮುಂದಾಗ ಬೇಕೆಂದು ತಿಳಿಸಿದರು.

ಸಂಶೋಧನಾಲಯ ಹಾಗೂ ಪ್ರಯೋ ಗಾಲಯಗಳು ಜನರಿಗೆ ಹೆಚ್ಚು ಉಪಯುಕ್ತ ವಾದ ಸಂಶೋಧನೆ ನಡೆಸಬೇಕು. ಜೊತೆಗೆ ಕೃಷಿಕರಿಗೆ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಶೈಕ್ಷಣಿಕ ವ್ಯವಸ್ಥೆ ಎಲ್ಲೆಡೆ ವಿಸ್ತರಿಸ ದಿರುವ ಕಾರಣ ರೈತರಿಗೆ ಅನಾನುಕೂಲ ವಾಗುತ್ತಿದೆ. ಹಣ್ಣು ಬೆಳೆಯುವ ರೈತರು ಮಾಹಿತಿ ಕೊರತೆಯಿಂದ ಸಕಾಲದಲ್ಲಿ ಉತ್ಪನ್ನ ವನ್ನು ರಫ್ತು ಮಾಡಲಾಗದೆ ಪರಿತಪಿಸು ತ್ತಿದ್ದಾರೆ. ಪೈನಾಪಲ್ ಹಣ್ಣನ್ನು 3 ದಿನದಲ್ಲಿ ಸಂಸ್ಕರಣ ಘಟಕಗಳಿಗೆ ಸಾಗಿಸಬೇಕು. ಆದರೆ ಮೇಘಾಲಯದ ರೈತರಿಗೆ ಇದು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಹೀಗೆ ನಷ್ಟ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯ ಬೇಕೆಂದು ಸಲಹೆ ನೀಡಿದರು.

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿಎಸ್‍ಐಆರ್) ಪ್ರಧಾನ ನಿರ್ದೇಶಕ ಶೇಖರ್ ಸಿ.ಮಂಡೆ, ಐಐಎಸ್‍ಸಿ ಉಪ ನಿರ್ದೇಶಕ ಪೆÇ್ರ. ಜಯಂತ್ ಮೋದಕ್, ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ನಿರ್ದೇಶಕ ಡಾ. ಕೆಎಸ್ ಎಂಎಸ್ ರಾಘವರಾವ್, ಐಐಟಿ ರಾಸಾ ಯನಿಕ ಎಂಜಿನಿಯರಿಂಗ್ ವಿಭಾಗದ ಪೆÇ್ರ. ಅನುರಾಗ್ ಎಸ್.ರಾಥೋರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »