ಈ ಬಾರಿ ಮೈಸೂರು ಮೃಗಾಲಯಕ್ಕೆ ಅತೀ ಹೆಚ್ಚು ಪ್ರವಾಸಿಗರ ಭೇಟಿ
ಮೈಸೂರು

ಈ ಬಾರಿ ಮೈಸೂರು ಮೃಗಾಲಯಕ್ಕೆ ಅತೀ ಹೆಚ್ಚು ಪ್ರವಾಸಿಗರ ಭೇಟಿ

October 10, 2019

ಮೈಸೂರು, ಅ.9(ಪಿಎಂ)- ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದಸರಾ ಮಹೋತ್ಸವದ 10 ದಿನಗಳ ಅವಧಿಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದು, ಆ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.

ಪ್ರಸಕ್ತ ವರ್ಷದ ದಸರಾ ಅವಧಿಯಲ್ಲಿ 1.65 ಲಕ್ಷ ವೀಕ್ಷಕರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಇದರಿಂದ 1.59 ಕೋಟಿ ರೂ. (159.76 ಲಕ್ಷ ರೂ.) ಆದಾಯ ಸಂಗ್ರಹ ಗೊಂಡಿದೆ. 2016ರ ಇದೇ ಅವಧಿಯಲ್ಲಿ 1.24 ಲಕ್ಷ ವೀಕ್ಷಕರು ಭೇಟಿ ನೀಡಿ, 70.53 ಲಕ್ಷ ರೂ., 2017ರಲ್ಲಿ 1.23 ಲಕ್ಷ ಪ್ರವಾಸಿ ಗರ ಭೇಟಿಯಿಂದ 69.17 ಲಕ್ಷ ರೂ. ಹಾಗೂ 2018ರಲ್ಲಿ 1.53 ಲಕ್ಷ ಮಂದಿ ವೀಕ್ಷಣೆಯಿಂದ 1.5 ಕೋಟಿ ರೂ. (105. 64 ಲಕ್ಷ ರೂ.) ಸಂಗ್ರಹವಾಗಿತ್ತು.

ಈ ಬಾರಿ ಕಳೆದ 3 ವರ್ಷಗಳ ದಾಖಲೆ ಮುರಿದು ವೀಕ್ಷಕರು ಹಾಗೂ ಆದಾಯ ಎರಡರಲ್ಲೂ ಹೆಚ್ಚಳವಾಗಿದೆ. ವರ್ಷದಿಂದ ವರ್ಷಕ್ಕೆ ಪ್ರವೇಶದ ಟಿಕೆಟ್ ದರದಲ್ಲಿ ಹೆಚ್ಚಳ ಉಂಟಾಗಿರುವುದು ಇಲ್ಲಿ ಗಮನಾರ್ಹ ಅಂಶ. ವಿಜಯದಶಮಿ ಮೆರವಣಿಗೆ ದಿನವಾದ ಮಂಗಳವಾರ (ಅ.8) 28,386 ಪ್ರೇಕ್ಷಕರು ಮೃಗಾಲಯದ ಪ್ರಾಣಿ-ಪಕ್ಷಿಗಳ ಪರಿಸರ ದಲ್ಲಿ ಸುತ್ತಾಡಿದ್ದಾರೆ. ಇದರಿಂದ 28,28, 480 ರೂ. (28 ಲಕ್ಷದ 28 ಸಾವಿರ ರೂ.) ಆದಾಯ ಸಂಗ್ರಹವಾಗಿದೆ.

ಅದೇ ರೀತಿ 2016ರ ಆಯುಧ ಪೂಜೆ ದಿನದಂದು 26,191 ಪ್ರವಾಸಿಗರು ಭೇಟಿ ನೀಡಿ, 15.26 ಲಕ್ಷ ರೂ. ಆದಾಯ ಬಂದಿ ದ್ದರೆ, ವಿಜಯದಶಮಿ ದಿನದಂದು 25,504 ವೀಕ್ಷಕರ ಭೇಟಿಯಿಂದ 15.08 ಲಕ್ಷ ರೂ. ಆದಾಯ ಶೇಖರಣೆಗೊಂಡಿತ್ತು. ಅಂತೆಯೇ 2017ರಲ್ಲಿ ಆಯುಧ ಪೂಜೆ ದಿನದಂದು 15,449 ಮಂದಿ ಭೇಟಿ ನೀಡಿ, 9.61 ಲಕ್ಷ ರೂ. ಹಾಗೂ ವಿಜಯದಶಮಿ ದಿನದಂದು 31,722 ಮಂದಿ ವೀಕ್ಷಣೆಯ ಮೂಲಕ 18.81 ಲಕ್ಷ ರೂ. ಸಂಗ್ರಹಗೊಂಡಿತ್ತು.

2018ರ ಆಯುಧ ಪೂಜೆ ದಿನದಂದು 22,398 ಪ್ರೇಕ್ಷಕರು ಭೇಟಿ ಮಾಡಿದ್ದರಿಂದ 17.74 ಲಕ್ಷ ರೂ. ಸಂಗ್ರಹಗೊಂಡಿದ್ದರೆ, ವಿಜಯದಶಮಿ ದಿನದಂದು 32,301 ಮಂದಿ ಭೇಟಿ ನೀಡುವ ಮೂಲಕ 25.40 ಲಕ್ಷ ರೂ. ಆದಾಯ ಬಂದಿತ್ತು. ಈ ಬಾರಿಯ ವಿಜಯ ದಶಮಿ ದಿನದಂದು ಕಳೆದ ಬಾರಿಗೆ ಹೋಲಿಸಿ ದರೆ ಭೇಟಿ ನೀಡಿದವರ ಸಂಖ್ಯೆಯಲ್ಲಿ ಇಳಿಕೆ ಯಾಗಿದ್ದು, 28,386 ಮಂದಿ (ಕಳೆದ ವರ್ಷ 32,301 ಮಂದಿ) ಭೇಟಿ ನೀಡಿದ್ದಾರೆ. ಇದ ರಿಂದ 28.28 ಲಕ್ಷ ರೂ. ಆದಾಯ ಸಂಗ್ರಹ ವಾಗಿದೆ. ಈ ಬಾರಿ ಆಯುಧ ಪೂಜೆ ದಿನ ದಂದು 30,273 ಪ್ರೇಕ್ಷಕರು ಭೇಟಿ ನೀಡಿ, 29,77 ಲಕ್ಷ ರೂ. ಸಂಗ್ರಹವಾಗಿದೆ. ಇದರಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಭೇಟಿ ನೀಡಿ ದವರ ಸಂಖ್ಯೆ ಹಾಗೂ ಆದಾಯ ಎರಡ ರಲ್ಲೂ ಹೆಚ್ಚಳ ಉಂಟಾಗಿರುವುದನ್ನು ಕಾಣ ಬಹುದು. ಜಂಬೂಸವಾರಿ ಕಣ್ತುಂಬಿಕೊಂಡ ಮಾರನೆ ದಿನವಾದ ಇಂದೂ ಮೃಗಾಲಯಕ್ಕೆ ಪ್ರವಾಸಿಗರು ಲಗ್ಗೆ ಇಟ್ಟಿದ್ದರು. ಬೆಳಿಗ್ಗೆ 11 ಗಂಟೆ ವೇಳೆಗಾಗಲೇ ಸುಮಾರು 4,500 ಮಂದಿ ಭೇಟಿ ನೀಡಿದ್ದರು.

Translate »