ಮೃಗಾಲಯ ವೀಕ್ಷಣೆಯ ಕಾಂಬೋ ಟಿಕೆಟ್‍ಗೆ ಡಿಮ್ಯಾಂಡ್
ಮೈಸೂರು

ಮೃಗಾಲಯ ವೀಕ್ಷಣೆಯ ಕಾಂಬೋ ಟಿಕೆಟ್‍ಗೆ ಡಿಮ್ಯಾಂಡ್

May 10, 2019

ಮೈಸೂರು: ಮೈಸೂರು ಮೃಗಾಲಯ ವೀಕ್ಷಿಸಿ ಕಾರಂಜಿ ಕೆರೆಗೆ ಭೇಟಿ ನೀಡುವ ಪ್ರವಾಸಿಗರ ಅನು ಕೂಲಕ್ಕಾಗಿ ಜಾರಿಗೆ ತಂದಿರುವ ಕಾಂಬೋ ಟಿಕೆಟ್‍ಗೆ ಬೇಡಿಕೆ ಹೆಚ್ಚಾಗುತ್ತಿದ್ದು, ದಿನಕ್ಕೆ ಸರಾಸರಿ 35 ಮಂದಿ ಪ್ರವಾಸಿಗರು ಕನೆ ಕ್ಟಿಂಗ್ ಪಾಥ್ ಮೂಲಕ ಮೃಗಾಲಯದಿಂದ ಕಾರಂಜಿಕೆರೆ ವೀಕ್ಷಣೆಗೆ ತೆರಳುತ್ತಿದ್ದಾರೆ.

ಮೃಗಾಲಯದ ವ್ಯಾಪ್ತಿಗೆ ಕಾರಂಜಿಕೆರೆ ಬಂದರೂ ಎರಡೂ ಕಡೆಗೂ ಪ್ರತ್ಯೇಕ ಪ್ರವೇಶ ಟಿಕೆಟ್ ಪಡೆಯಬೇಕಾಗಿತ್ತು. ಈ ಹಿನ್ನೆಲೆ ಯಲ್ಲಿ ದಸರೆಯ ವೇಳೆ ಎರಡೂ ಸ್ಥಳಗಳಿಗೂ ಒಂದೇ ಟಿಕೆಟ್ ಪಡೆದು ಭೇಟಿ ನೀಡುವ ಅವಕಾಶವನ್ನು ಕಲ್ಪಿಸಲಾಗಿತ್ತು. ಅಲ್ಲದೆ 10 ರೂ. ರಿಯಾಯಿತಿ ನೀಡಿ ಕಾಂಬೋ ಟಿಕೆಟ್ ಸಿದ್ಧಪಡಿಸಲಾಗಿತ್ತು. ಮೃಗಾಲಯಕ್ಕೆ ಟಿಕೆಟ್ ದರ 80 ರೂ. ನಿಗದಿಯಾಗಿದ್ದರೆ, ಕಾರಂಜಿ ಕೆರೆಗೆ 30 ರೂ. ಪ್ರವೇಶ ಶುಲ್ಕ ಸಂಗ್ರಹಿಸ ಲಾಗುತ್ತಿದೆ. ಆದರೆ ಕಾಂಬೋ ಟಿಕೆಟ್ 100 ರೂ. ದರ ನಿಗದಿ ಮಾಡಿರುವುದ ರಿಂದ 10 ರೂ. ರಿಯಾಯಿತಿ ಸೌಲಭ್ಯ ದೊರೆ ಯುತ್ತಿದೆ. ಕಾಂಬೋ ಟಿಕೆಟ್ ಪಡೆದ ಪ್ರವಾ ಸಿಗರು ಮೃಗಾಲಯವನ್ನು ವೀಕ್ಷಿಸಿದ ಬಳಿಕ ಅಕ್ವೇರಿಯಂ ಕಟ್ಟಡದ ಸ್ಥಳದ ಬಳಿ ಕಾರಂಜಿ ಕೆರೆಗೆ ಹೋಗಲು ಕಲ್ಪಿಸಲಾಗಿರುವ ಸಂಪರ್ಕ ದಾರಿ (ಕನೆಕ್ಟಿಂಗ್ ಪಾಥ್) ಮೂಲಕ ಹೋಗ ಬಹುದಾಗಿತ್ತು. ಮೃಗಾಲಯದ ಮೂಲಕ ಕಾರಂಜಿ ಕೆರೆಗೆ ಬರುವ ಪ್ರವಾಸಿಗರು ಕೆರೆಯ ಸೌಂದರ್ಯವನ್ನು ವೀಕ್ಷಿಸಿದ ಬಳಿಕ ಮೃಗಾ ಲಯಕ್ಕೆ ವಾಪಸ್ಸಾಗಿ ಮುಖ್ಯ ದ್ವಾರದ ಮೂಲಕ ನಿರ್ಗಮಿಸಬಹುದಾಗಿತ್ತು. ಅಥವಾ ಕಾರಂಜಿಕೆರೆ ಮುಖ್ಯ ದ್ವಾರದಿಂದಲೇ ನಿರ್ಗ ಮಿಸುವುದಕ್ಕೂ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ದಿನಕ್ಕೆ ಸರಾಸರಿ 30 ರಿಂದ 40 ಪ್ರವಾಸಿಗರು ಕಾಂಬೋ ಟಿಕೆಟ್ ಪಡೆದು ಮೃಗಾಲಯ ಮತ್ತು ಕಾರಂಜಿಕೆರೆ ವೀಕ್ಷಿಸುತ್ತಿದ್ದಾರೆ. ಸಮಯಾಭಾವದಿಂದ ಹೆಚ್ಚಿನ ಪ್ರವಾಸಿಗರು ಮೃಗಾಲಯ ವೀಕ್ಷಿಸಿದ ಬಳಿಕ ಬೇರೆ ಬೇರೆ ಸ್ಥಳಗಳಿಗೆ ಹೋಗಲು ಬಯಸುವುದರಿಂದ ಕಾರಂಜಿಕೆರೆಗೆ ಭೇಟಿ ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ದಿನದಿಂದ ದಿನಕ್ಕೆ ಕಾಂಬೋ ಟಿಕೆಟ್ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ.

Translate »