ಮೇ 13ರಂದು ಚೆಸ್ ಪಂದ್ಯಾವಳಿ
ಮೈಸೂರು

ಮೇ 13ರಂದು ಚೆಸ್ ಪಂದ್ಯಾವಳಿ

May 10, 2019

ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ರೋಟರಿ ವೆಸ್ಟ್ ಶಾಲೆಯ ಸಭಾಂಗಣದಲ್ಲಿ ಮೇ 13ರಂದು ರ್ಯಾಪಿಡ್ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ರೋಟರಿ ವಾಣಿವಿಲಾಸ ಕ್ಲಬ್ ಅಧ್ಯಕ್ಷೆ ಹೆಚ್.ಎಲ್. ಯಮುನಾ ತಿಳಿಸಿದ್ದಾರೆ.
ಲರ್ನಸ್ ಚೆಸ್ ಕ್ಲಬ್, ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ಹಾಗೂ ರೋಟರಿ ವಾಣಿವಿಲಾಸ ಕ್ಲಬ್ ಸಂಯು ಕ್ತಾಶ್ರಯದಲ್ಲಿ ಚೆಸ್ ಪಂದ್ಯಾವಳಿ ನಡೆಸ ಲಾಗುತ್ತಿದೆ. 7, 9, 11, 13 ಹಾಗೂ 15 ವರ್ಷದೊಳಗಿನ ಪ್ರತ್ಯೇಕ ವಿಭಾಗದಲ್ಲಿ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ. ಮೇ 13ರಂದು ಬೆಳಿಗ್ಗೆ 10ಕ್ಕೆ ಆರಂಭ ವಾಗಲಿರುವ ಪಂದ್ಯಾವಳಿ ಸಂಜೆವರೆಗೂ ನಡೆಯಲಿದೆ. ಪ್ರತಿ ಪಂದ್ಯಕ್ಕೆ 15 ನಿಮಿಷ, 5 ಸೆಕೆಂಡ್ ಸಮಯ ನಿಗದಿ ಮಾಡಲಾಗಿದೆ. ಸುಮಾರು 5ರಿಂದ 7 ಸುತ್ತುಗಳಲ್ಲಿ ಪಂದ್ಯ ಜರುಗಲಿವೆ. ಈಗಾಗಲೇ ಪಟುಗಳು ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಮೇ 12ರವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಬಾಲಕ-ಬಾಲಕಿಯರು ಪ್ರತ್ಯೇಕ ಐದು ವಿಭಾಗಗಳಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಕ್ತ ವಿಭಾಗದಲ್ಲಿಯೂ ಹೆಚ್ಚಿನ ಪಟುಗಳು ಪಾಲ್ಗೊಳ್ಳಲಿದ್ದಾರೆ. ಈ ವಿಭಾಗದ ಮೊದಲ ಐದು ಸ್ಥಾನ ಗಳಿ ಸಿದ ಪಟುಗಳಿಗೆ ನಗದು ಬಹುಮಾನದೊಂದಿಗೆ ಟ್ರೋಫಿಯನ್ನು ನೀಡಲಾಗುತ್ತದೆ. ಉಳಿದಂತೆ ಬಾಲಕ-ಬಾಲಕಿಯರ ಐದು ವಿಭಾಗದದಲ್ಲಿ ಮೊದಲ ಮೂರು ಸ್ಥಾನ ಪಡೆದ ಪಟುಗಳಿಗೆ ಟ್ರೋಫಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 8496003565, 9902698623, 9902698623 ಮೊಬೈಲ್ ಸಂಖ್ಯೆ ಸಂಪರ್ಕಿಸುವಂತೆ ಕೋರಿದ್ದಾರೆ.

Translate »