ಚಾಮರಾಜನಗರ: ತೋಟಗಾರಿಕೆ ಇಲಾಖೆಯು ಈರುಳ್ಳಿ ಎಲೆಯ ಮೇಲೆ ಮಚ್ಚೆರೋಗ ಲಕ್ಷಣಗಳು ಹಾಗೂ ಹತೋಟಿ ಕ್ರಮಗಳ ಕುರಿತು ಈರುಳ್ಳಿ ಬೆಳೆಗಾರರಿಗೆ ಮಾಹಿತಿ ನೀಡಿದೆ.
ಈರುಳ್ಳಿ ಎಲೆಯ ಮೇಲೆ ಮೊದಲಿಗೆ ಸಣ್ಣನೆಯ ತಗ್ಗಾದ ಬಿಳಿ ಮಚ್ಚೆಗಳು ಕಾಣ ಸಿ ಕೊಂಡು ನಂತರ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಆಮೇಲೆ ದೊಡ್ಡದಾಗಿ ಎಲೆಗಳು ಒಣಗುತ್ತವೆ. ಮುಂಗಾರಿನಲ್ಲಿ ಈ ರೋಗದ ತೀವ್ರತೆ ಹೆಚ್ಚಾಗಿ ಹರಡುತ್ತದೆ. ಮಳೆ ಹಾಗೂ ಮೋಡ ಕವಿದ ವಾತಾವರಣ ರೋಗ ಹರಡಲು ಅನುಕೂಲವಾಗಿದ್ದು, ಹೆಚ್ಚು ನೀರು ನಿಂತ ತಾಕಿನಲ್ಲೂ ಸಹ ರೋಗ ಕಂಡುಬರುತ್ತದೆ. ಏಪ್ರಿಲ್ ಮೇ ಮಾಹೆ ಯಲ್ಲಿ ನಾಟಿ ಮಾಡಿದ ಈರುಳ್ಳಿ ಬೆಳೆ ಹೆಚ್ಚಾಗಿ ಹಾನಿಗೊಳಗಾಗುತ್ತವೆ.
ರೋಗÀ ನಿವಾರಣೆಗೆ ತೋಟಗಾರಿಕೆ ಇಲಾಖೆ ಕೆಲವು ಸಲಹಾ ಕ್ರಮಗಳನ್ನು ಸೂಚಿಸಿದೆ. ರೋಗ ಮೊದಲ ಹಂತದಲ್ಲಿ ಕಂಡುಬಂದಾಗ 2 ಗ್ರಾಂ ಮೆಟಲಾಕ್ಸಿಲ್ ಅಥವಾ ಕ್ಲೋರೋಥ ಲಾನಿಲ್ 2 ಗ್ರಾಂ ಮತ್ತು ಮ್ಯಾಂಕೋಜೆಬ್ 2.5 ಗ್ರಾಂ.ನಷ್ಟು ಪ್ರತಿ ಲೀಟರ್ ನೀರಿಗೆ ಬೆರೆಸಿ 7 ರಿಂದ 10 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ರೋಗ ಹೆಚ್ಚಾದಲ್ಲಿ ಕಾಂಟಾಫ್ 2 ಗ್ರಾಂ ಅಥವಾ 2 ರಿಂದ 3 ಮಿ.ಲೀ. ಇಪ್ರೊಬೆನ್‍ಫಾಸ್ ಅಥವಾ 2.5 ಗ್ರಾಂ ಕುಫÀ್ರಸ್ ಆಕ್ಸೈಡ್ ಅನ್ನು 1 ಲೀ ನೀರಿನಲ್ಲಿ ಬೆರೆಸಿ 15 ದಿನಗಳ ಅಂತರ ದಲ್ಲಿ ಎರಡು ಬಾರಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚÉೀರಿ ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.