ಓವರ್‍ಟೇಕ್: ಸೇತುವೆಗೆ ಬಸ್ ಡಿಕ್ಕಿ
ಹಾಸನ

ಓವರ್‍ಟೇಕ್: ಸೇತುವೆಗೆ ಬಸ್ ಡಿಕ್ಕಿ

May 30, 2018

ಅರಕಲಗೂಡು: ಎರಡು ಬಸ್‍ಗಳ ಚಾಲಕರು ಓವರ್‍ಟೇಕ್ ಮಾಡುವ ಧಾವಂತದಲ್ಲಿ ಕೆಎಸ್‍ಆರ್ ಟಿಸಿ ಬಸ್ ಹಳ್ಳದ ಸೇತುವೆಗೆ ಡಿಕ್ಕಿ ಹೊಡೆದಿರುವ ಘಟನೆ ತಾಲೂಕಿನ ಬೆಟ್ಟಸೋಗೆ ಗೇಟ್ ಬಳಿ ನಡೆದಿದೆ. ಇಂದು ಬೆಳಗ್ಗೆ ಮೈಸೂರು ಕಡೆಗೆ ಹೋಗುತ್ತಿದ್ದ ಬಸ್‍ಅನ್ನು ಮತ್ತೊಂದು ಬಸ್ ಓವರ್‍ಟೇಕ್ ಮಾಡಲು ಮುಂದಾಗಿ ಸೇತುವೆ ಕಡೆಗೆ ನುಗ್ಗಿದೆ. ಆದರೆ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಸೇತುವೆ ತಡೆಗೋಡೆಗೆ ಗುದ್ದಿ ಅಲ್ಲೆ ನಿಂತಿತು.

ಎರಡು ಬಸ್ ಚಾಲಕರ ಅವಾಂತರ ದಿಂದಾಗಿ ಬಸ್‍ನಲ್ಲಿದ್ದ ಪ್ರಯಾಣ ಕರು ಕೆಲಕಾಲ ಆತಂಕಕ್ಕೊಳಗಾದರಲ್ಲದೆ, ಚಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Translate »