ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ
ಹಾಸನ

ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ

July 14, 2018

ಹಾಸನ: ಉಚಿತ ಬಸ್‍ಪಾಸ್‍ಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಎಐಎಂಎಸ್‍ಎಸ್, ಎಐಡಿಯುಓ ಹಾಗೂ ಎಐಡಿಎಸ್‍ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನಾ ಮೆರವಣಿಗೆ ನಡೆಸಿದರು.ನಗರದ ಹೇಮಾವತಿ ಪ್ರತಿಮೆ ಬಳಿ ಯಿಂದ ಮೆರವಣಿಗೆ ಹೊರಟ ಪ್ರತಿಭಟನಾ ಕಾರರು, ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ರಾಜ್ಯ ಸರ್ಕಾರ ಉಚಿತ ಬಸ್‍ಪಾಸ್ ನೀಡು ವುದಾಗಿ ಆಶ್ವಾಸನೆ ನೀಡಿ, ಈಗ ನಿರ್ಲಕ್ಷ್ಯ ತೋರುತ್ತಿದೆ. ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಚಳುವಳಿ ಫಲವಾಗಿ ಹಿಂದಿನ ರಾಜ್ಯ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವುದಾಗಿ ಘೋಷಣೆ ಮಾಡಿತ್ತು. ಹೊಸ ಸರ್ಕಾರ ಈ ನಿರ್ಧಾರ ಕೈಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲಿ ಸಾರಿಗೆ ಸಚಿವರು ತಮ್ಮ ಇಲಾಖೆಯ ಮೂಲಕ ಎಲ್ಲಾ ವಿದ್ಯಾರ್ಥಿ ಗಳಿಗೆ ಉಚಿತ ಬಸ್‍ಪಾಸ್ ನೀಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಇತ್ತೀಚೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಹ ತಮ್ಮ ಸಮನ್ವಯ ಸಮಿತಿ ಸಭೆಯ ನಂತರ ಹಿಂದಿನ ಸರ್ಕಾರ ಘೋಷಿಸಿ ದಂತೆಯೇ ಈ ಬಾರಿ ಕೂಡ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದರು. ಇವರ ಭರವಸೆಯಿಂದಾಗಿ ಆಲ್ ಇಂಡಿಯಾ ಮಹಿಳಾ ಸನ್ಸ್‍ಕ್ರಿಟಿಕ್ ಸಂಘಟನೆ, ಆಲ್ ಇಂಡಿಯಾ ಡೆಮಾಕ್ರಟಿಕ್ ಯುತ್ ಆರ್ಗನೈಸೇಷನ್ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದವು. ಆದರೆ ಈಗ ಹೊಸ ಸರ್ಕಾರದ ಬಜೆಟ್‍ನಲ್ಲೂ ಬಸ್‍ಪಾಸ್ ಬಗ್ಗೆ ಯಾವ ಪ್ರಸ್ತಾಪವೂ ಆಗಲಿಲ್ಲ. ಸಾರಿಗೆ ಸಚಿವರು, ಮುಖ್ಯಮಂತ್ರಿಗಳೂ ಪ್ರತಿಕ್ರಿಯಿಸಿಲ್ಲ. ಇಂತಹ ನಿರ್ಧಾರಗಳು ವಿದ್ಯಾರ್ಥಿ ಸಮುದಾಯಕ್ಕೆ ರಾಜ್ಯ ಸರ್ಕಾರ ಮಾಡಿದ ದ್ರೋಹವಾಗಿದೆ ಎಂದು ದೂರಿದರು.

ಉಚಿತ ಬಸ್‍ಪಾಸ್ ಯೋಜನೆಯಿಂದಾಗಿ ಸುಮಾರು 630 ಕೋಟಿ ರೂ.ಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದು ಲಾಭದ ಆಧಾರದ ಮೇಲೆ ಮಾಡಿದ ಅಂದಾಜು ರೂ.ಗಳು. ಸರ್ಕಾರವೇನು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಬಿಡುತ್ತ ದೆಯೇ ಎಂದು ಪ್ರಶ್ನೆ ಮಾಡಿದ ಪ್ರತಿಭಟನಾ ಕಾರರು, ಉಚಿತ ಬಸ್‍ಪಾಸ್ ನೀಡುವುದ ರಿಂದ ಸಾರಿಗೆ ಇಲಾಖೆಗೆ ನಷ್ಟವಾಗುತ್ತದೆ ಎಂಬ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ನಿಗ್ರಹಿಸಿ, ಇಲಾಖೆ ಮಾಡುತ್ತಿರುವ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದರೆ ಉಚಿತ ಬಸ್‍ಪಾಸ್ ನೀಡಿಯೂ ಸಹ ಸಾರಿಗೆ ಇಲಾಖೆ ಲಾಭ ಗಳಿಸಬಹುದು ಎಂದು ಸಲಹೆ ನೀಡಿದ ಪ್ರತಿಭಟನಾಕಾರರು, ಉಚಿತ ಬಸ್‍ಪಾಸ್ ವಿದ್ಯಾರ್ಥಿಗಳ ಕೈಗೆ ತಲುಪುವವರೆಗೂ ನಮ್ಮ ಹೋರಾಟ ಮುಂದುವಸುರುವುದಾಗಿ ಎಚ್ಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಡೆಮಾ ಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ಸಂಘಟನೆ ಅಧ್ಯಕ್ಷ ಪ್ರಮೋದ್, ರಮೇಶ್, ಸಂಜಯ್, ಸಂಪತ್ತು, ಸುಭಾಷ್ ಇತರರಿದ್ದರು.

Translate »