2022ರೊಳಗಾಗಿ ಕೆ.ಆರ್.ಕ್ಷೇತ್ರದ ಬಾಡಿಗೆ ಮನೆಯಲ್ಲಿರುವವರಿಗೆ ಸೂರು
ಮೈಸೂರು

2022ರೊಳಗಾಗಿ ಕೆ.ಆರ್.ಕ್ಷೇತ್ರದ ಬಾಡಿಗೆ ಮನೆಯಲ್ಲಿರುವವರಿಗೆ ಸೂರು

May 26, 2019

ಮೈಸೂರು: 2022ರೊಳಗಾಗಿ ಪ್ರಧಾನಮಂತ್ರಿಗಳ ಕನಸಿನಂತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮೈಸೂರಿನ ಕೆ.ಆರ್.ಕ್ಷೇತ್ರದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸ್ವಂತ ಸೂರು ಒದಗಿಸಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ಪ್ರಕಟಿಸಿದ್ದಾರೆ.

ಸಂಸದರಾಗಿ ಎರಡನೇ ಬಾರಿ ಪ್ರತಾಪ್ ಸಿಂಹ ಅವರನ್ನು ಆಯ್ಕೆ ಮಾಡಿದ ಮತ ದಾರರಿಗೆ ಕೃತಜ್ಞತೆ ಹೇಳುವ ಸಲುವಾಗಿ ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ ಹೋಟೆಲ್ ಪ್ರೆಸಿಡೆಂಟ್‍ನಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಭಾರತದ 75ನೇ ಸ್ವಾತಂತ್ರ್ಯ ವರ್ಷ ವಾದ 2022ರ ಆಗಸ್ಟ್ 15ರೊಳಗಾಗಿ ಪ್ರಧಾನಮಂತ್ರಿಗಳ ಆವಾಜ್ ಹಾಗೂ ಆಶ್ರಯ ಯೋಜನೆಗಳಡಿ ಪ್ರತಿಯೊಬ್ಬ ರಿಗೂ ಸ್ವಂತ ಸೂರು ಕಲ್ಪಿಸಲು ನಿರ್ಧರಿಸಲಾಗಿದ್ದು. ಆ ನಿಟ್ಟಿನಲ್ಲಿ ತಾವು ಕಾರ್ಯೋ ನ್ಮುಖರಾಗಿರುವುದಾಗಿ ತಿಳಿಸಿದರು.

ಕೆ.ಆರ್.ಕ್ಷೇತ್ರದಲ್ಲಿ 54,316 ಕುಟುಂಬ ಬಾಡಿಗೆ ಮನೆಯಲ್ಲಿದ್ದಾರೆ ಎಂಬ ಪ್ರಾಥ ಮಿಕ ವರದಿ ಇದೆ. ಜೂನ್ ಮಾಹೆಯಿಂದಲೇ ಮನೆ ನಿರ್ಮಿಸಿ ಕೊಡುವ ಪ್ರಕ್ರಿಯೆ ಆರಂಭಿ ಸಲಿದ್ದು, ಸಬ್ಸಿಡಿ ರೂಪದಲ್ಲಿ 2,70,000 ರೂ ಸಾಲ ಸೌಲಭ್ಯವನ್ನು ಬ್ಯಾಂಕ್ ಮೂಲಕ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ರಾಮದಾಸ್ ನುಡಿದರು.

ಆನ್‍ಲೈನ್‍ನಲ್ಲಿ ಅರ್ಜಿ ಪಡೆದು ಪಾರ ದರ್ಶಕವಾಗಿ ನಿಜವಾದ ಫಲಾನುಭವಿಗಳನ್ನು ಗುರ್ತಿಸಿ ಮನೆ ಒದಗಿಸಲು ತಾವು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿ ರುವುದಾಗಿಯೂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ `ಆರೋಗ್ಯ ಮೈಸೂರು’ ಯೋಜನೆಯನ್ನು ಮುಂದುವರೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಶ್ರಯದಲ್ಲಿ ಮೈಸೂರಲ್ಲಿ ಆಯುರ್ವೇದ, ಯೋಗ, ನ್ಯಾಚು ರೋಪತಿಯನ್ನು ಅಭಿವೃದ್ಧಿಪಡಿಸಿ ಪ್ರತಿಯೊ ಬ್ಬರಿಗೂ ಆರೋಗ್ಯ ಒದಗಿಸುವುದು ನಮ್ಮ ಗುರಿಯಾಗಿದ್ದು, ಅದಕ್ಕಾಗಿ ಮೈಸೂರಿಗೆ ಯೋಗ ವಿಶ್ವವಿದ್ಯಾನಿಲಯ ಬೇಕೆಂದೂ ಕೇಳುವವರಿದ್ದೇವೆ ಎಂದೂ ನುಡಿದರು.

ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಭದ್ರತೆ, ಪಿಂಚಣಿ, ಅವರ ಮಕ್ಕಳಿಗೆ ಶಿಕ್ಷಣ ನೀಡಲು ತಾವು ಆದ್ಯತೆ ನೀಡುವ ಜತೆಗೆ ರಾಜ್ಯಸಭೆಯಲ್ಲಿ ಬಾಕಿ ಉಳಿದಿರುವ ಮಸೂದೆಗೆ ಅಂಗೀಕಾರ ಪಡೆದು 8ನೇ ತರಗತಿವರೆಗೆ ವ್ಯಾಸಂಗ ಮಾಡಿದ ಪ್ರತಿಯೊಬ್ಬರಿಗೂ ಡಿಎಲ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ರಾಮದಾಸ್ ನುಡಿದರು.

ಮುಖಂಡರಾದ ಬಿ.ವಿ.ಮಂಜುನಾಥ್, ಮೈಪು ರಾಜೇಶ್, ವಿದ್ಯಾ ಅರಸ್, ಕೃಷ್ಣ, ನೂರ್ ಫಾತಿಮಾ, ಜಗದೀಶ್ ಹಾಗೂ ಬಾಲ ಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Translate »