ಮಾವು ಮೇಳ: ಒಂದೇ ದಿನದಲ್ಲಿ 19513 ಕೆಜಿ ಮಾವು ಮಾರಾಟ
ಮೈಸೂರು

ಮಾವು ಮೇಳ: ಒಂದೇ ದಿನದಲ್ಲಿ 19513 ಕೆಜಿ ಮಾವು ಮಾರಾಟ

May 26, 2019

ಮೈಸೂರು: ಮಾವು ಮೇಳದಲ್ಲಿ ಕೆಲವು ಮಳಿಗೆಗಳಲ್ಲಿ ನಿಗದಿ ಪಡಿಸಿರುವ ಬೆಲೆಗಿಂತ ಹೆಚ್ಚಾಗಿ ಹಣ ವಸೂಲಿ ಮಾಡಲಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶನಿವಾರ ತೋಟ ಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಎಲ್ಲಾ ಮಳಿಗೆಗಳಲ್ಲಿ ಪರಿಶೀಲಿಸಿದರಲ್ಲದೆ, ಹೆಚ್ಚುವರಿ ಹಣ ಪಡೆದರೆ ಮೇಳದಲ್ಲಿ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಕರ್ಜನ್ ಪಾರ್ಕ್ ಆವ ರಣದಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಮಾವು ಮತ್ತು ಹಲಸು ಮೇಳಕ್ಕೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು, ನೂರಾರು ಗ್ರಾಹಕರು ಮಾವು ಮತ್ತು ಹಲಸಿನ ಹಣ್ಣನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಮೇಳದಲ್ಲಿ 40 ಮಳಿಗೆ ಗಳಲ್ಲಿ ಮಾವಿನ ಹಣ್ಣು, 2 ಮಳಿಗೆಗಳಲ್ಲಿ ಹಲಸು ಮಾರಾಟ ಮಾಡಲಾಗುತ್ತಿದ್ದು, ಹಾಪ್‍ಕಾಮ್ಸ್ ಮತ್ತು ಎಪಿಎಂಸಿಯಲ್ಲಿ ಹಣ್ಣುಗಳ ದರ ಅವಲೋಕಿಸಿ ಪ್ರತಿದಿನ ಮಾವು ಮೇಳದಲ್ಲಿ ಮಾರಾಟ ಮಾಡಲು ತೋಟಗಾರಿಕಾ ಇಲಾಖೆ ದರ ನಿಗದಿ ಮಾಡುತ್ತದೆ. ಶುಕ್ರವಾರದ ಮಾರುಕಟ್ಟೆ ದರಕ್ಕೂ ಶನಿವಾರದ ದರಕ್ಕೂ 5 ರಿಂದ 10 ರೂ. ವ್ಯತ್ಯಾಸವಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಮಾರಾಟಗಾರರು ಇಲಾಖೆ ನಿಗದಿ ಮಾಡಿದ್ದ ಬೆಲೆಗಿಂತ 5 ರಿಂದ 10 ರೂ. ಹೆಚ್ಚಾಗಿ ಪಡೆಯುತ್ತಿದ್ದರು. ಇದನ್ನು ಆಕ್ಷೇಪಿಸಿ ಕೆಲವು ಗ್ರಾಹಕರು ದೂರು ನೀಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ತೋಟಗಾರಿಕಾ ಇಲಾಖೆಯ ಉಪ ನಿರ್ದೇ ಶಕ ಸಂಜಯ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಹಬೀಬಾ ನಿಶಾತ್ ಪರಿಶೀಲನೆ ನಡೆಸಿದರು. ಅಲ್ಲದೆ, ಎಲ್ಲಾ ಮಳಿಗೆಗಳಲ್ಲೂ ಕಡ್ಡಾಯವಾಗಿ ಹಣ್ಣುಗಳ ದರ ಪಟ್ಟಿಯನ್ನು ಪ್ರದರ್ಶಿ ಸಬೇಕು. ಯಾರಾದರೂ ಹೆಚ್ಚಾಗಿ ಹಣ ಪಡೆದರೆ, ಮಳಿಗೆ ಖಾಲಿ ಮಾಡಿಸುವು ದರೊಂದಿಗೆ ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದ ಆಯೋಜಿಸುವ ಯಾವುದೇ ಮೇಳಕ್ಕೂ ಆಹ್ವಾನ ನೀಡುವುದಿಲ್ಲ. ಪ್ರತಿದಿನ ಮಾರುಕಟ್ಟೆಯಲ್ಲಿನ ದರಕ್ಕೆ ಅನುಗುಣ ವಾಗಿ ದರ ನಿಗದಿ ಮಾಡಲಾಗುತ್ತದೆ. ಇದಕ್ಕೆ ಬದ್ಧವಾಗಿರಬೇಕೆಂದು ಸೂಚಿಸಿದರು.

ಹೆಚ್ಚಿದ ಜನಜಂಗುಳಿ: ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರಾಸಾ ಯನಿಕ ವಸ್ತುಗಳನ್ನು ಬಳಸದೆ ಮಾಗಿಸಿ ರುವ ಮಾವಿನ ಹಣ್ಣುಗಳ ಮಾರಾಟಕ್ಕೆ ಮಾತ್ರ ಮೇಳದಲ್ಲಿ ಅವಕಾಶ ಕಲ್ಪಿಸಿರುವು ದರಿಂದ ನೂರಾರು ಗ್ರಾಹಕರು ಮೇಳಕ್ಕೆ ಭೇಟಿ ನೀಡಿ, ತಮಗಿಷ್ಟವಾದ ತಳಿಯ ಹಣ್ಣುಗಳನ್ನು ಖರೀದಿಸಲು ಮುಗಿಬಿದ್ದಿ ದ್ದಾರೆ. ಮೇಳದ ಮೊದಲ ದಿನವಾದ ಶುಕ್ರವಾರ ಬೆಳಗ್ಗಿನಿಂದ ಸಂಜೆವರೆಗೂ ಗ್ರಾಹಕರು ಹೆಚ್ಚಾಗಿದ್ದರು. ಆದರೆ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಮೇಳದತ್ತ ಗ್ರಾಹಕರು ಸುಳಿಯಲಿಲ್ಲ. ಆದರೂ ಮೊದಲ ದಿನವೇ ಭರ್ಜರಿ ವ್ಯಾಪಾರವಾ ಗಿರುವುದು ಮಳಿಗೆ ಹೊಂದಿರುವ ಮಾವು ಬೆಳೆಗಾರರಲ್ಲಿ ಹರ್ಷ ತಂದಿದೆ.

ಎಷ್ಟೆಷ್ಟು: ಮಾವು ಮೇಳದಲ್ಲಿ ಬಾದಾಮಿ/ ಆಲ್ಫಾನ್ಸೋ 10,700 ಕೆಜಿ, ರಸಪುರಿ 4025 ಕೆಜಿ, ಮಲಗೋವಾ 500 ಕೆಜಿ, ಮಲ್ಲಿಕಾ 1535 ಕೆಜಿ, ಸೆಂಧೂರ 420 ಕೆಜಿ, ತೋತಾ ಪುರಿ 88 ಕೆಜಿ, ಬಂಗನಪಲ್ಲಿ 310 ಕೆಜಿ, ದಶೇರಿ 860 ಕೆಜಿ, ಸಕ್ಕರೆಗುತ್ತಿ 675 ಕೆಜಿ, ವಾಲಾಜಾ ತಳಿ ಮಾವಿನಿ ಹಣ್ಣು 400 ಕೆಜಿ ಮಾರಾಟ ವಾಗಿದೆ. ಒಂದೇ ದಿನದಲ್ಲಿ 19,513 ಕೆಜಿ( 19ಟನ್, 513 ಕೆಜಿ) ವಿವಿಧ ಬಗೆಯ ಮಾವಿನ ಹಣ್ಣು ಮಾರಾಟವಾಗಿವೆ.

ಸಸ್ಯ ಸಂತೆಗೂ ಹೆಚ್ಚಾದ ಒಲವು: ನಾಲ್ಕು ಮಳಿಗೆಗಳಲ್ಲಿ ಹಲವು ಬಗೆಯ ಹಣ್ಣು, ಹೂವು, ಅಲಂಕಾರಿಕಾ ಗಿಡ ಗಳನ್ನು ಮಾರಾಟ ಮಾಡಲಾಗುತ್ತಿದೆ. ಎಲಚನಹಳ್ಳಿ ತೋಟಗಾರಿಕಾ ಕ್ಷೇತ್ರ, ಕುಕ್ಕರಹಳ್ಳಿ, ಹೆಬ್ಬಾಳು ಹಾಗೂ ರಂಗ ಸಮುದ್ರ ತೋಟಗಾರಿಕಾ ಕ್ಷೇತ್ರದ ನರ್ಸರಿ ಗಳು ಪ್ರತ್ಯೇಕ ಮಳಿಗೆಯಲ್ಲಿ ಸಸ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಮಳಿಗೆಯಲ್ಲಿ ಕರಿಬೇವು 15, ಬೇಲ 20, ಕಣಗಲೆ 10, ಮಾವು 50, ಸೀಬೆ 40, ಬೆಟ್ಟದ ನೆಲ್ಲಿ 25, ನೇರಳೆ 15, ಮೈಸೂರು ಮಲ್ಲಿಗೆ 50, ವಿಳ್ಳೆದೆಲೆ ಗಿಡ 20, ದಾಸ ವಾಳ 20, ಕ್ರೊಟಾನ್ 20, ಚೆರ್ರೀ 10, ಅಡಿಕೆ 60, ನೇರಳೆ 12, ತುಳಸಿ 50, ಮರುಗ 50, ಬೆಟ್ಟದನೆಲ್ಲಿ 15, ಸೀತಾಫಲ 15 ಹಾಗೂ ಇತರೆ ತಳಿಗಳ 100ಕ್ಕೂ ಗಿಡಗಳು ಮಾರಾಟವಾಗಿವೆ.

ಇದರೊಂದಿಗೆ ಹಲಸಿನ ಹಣ್ಣಿನ ಮಾರಾಟವೂ ಜೋರಾಗಿದೆ. ಚಂದ್ರ ಬಂಗಾರ, ಕೆಂಪು, ಹಳದಿ ಹಲಸು, ರುದ್ರಾಕ್ಷಿ ಹಲಸು ಸೇರಿದಂತೆ ಇನ್ನಿತರ ತಳಿಗಳ ಹಲಸಿನ ಮಾರಾಟವೂ ಬಿರುಸಾಗಿ ಸಾಗಿದೆ. ಕೆಜಿವೊಂದಕ್ಕೆ 20 ರೂ. ನಿಗದಿ ಮಾಡಲಾಗಿದ್ದು, ಸಣ್ಣ ಗಾತ್ರದ 5 ತೊಳೆಗೆ 10 ರೂ., ದೊಡ್ಡ ಗಾತ್ರದ 4 ತೊಳೆಗೆ 10 ರೂ. ದರ ನಿಗದಿ ಮಾಡಲಾಗಿದೆ. ಕೆಲವು ಗ್ರಾಹಕರು ಉಂಡೆ ಸಹಿತ ಹಲಸಿನ ಹಣ್ಣನ್ನು ಖರೀದಿಸುತ್ತಿದ್ದರೆ, ಮತ್ತೆ ಕೆಲವರು ಐದಾರು ಕೆಜಿ ಅಥವಾ ಬಿಡಿ ಬಿಡಿಯಾಗಿ ತೊಳೆಗಳಲ್ಲಿ ಖರೀದಿಸುತ್ತಿದ್ದಾರೆ..

Translate »