ಕೆ.ಆರ್.ಕ್ಷೇತ್ರದಲ್ಲಿ ಪ್ರತಾಪ್‍ಸಿಂಹಗೆ ಅತೀ ಹೆಚ್ಚು ಮತಗಳ ಮುನ್ನಡೆ
ಮೈಸೂರು

ಕೆ.ಆರ್.ಕ್ಷೇತ್ರದಲ್ಲಿ ಪ್ರತಾಪ್‍ಸಿಂಹಗೆ ಅತೀ ಹೆಚ್ಚು ಮತಗಳ ಮುನ್ನಡೆ

May 26, 2019

ಮೈಸೂರು: ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಪ್ರತಾಪ್‍ಸಿಂಹರಿಗೆ ಅತ್ಯಧಿಕ ಮತಗಳ ಮುನ್ನಡೆ ದೊರೆತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಪ್ರೆಸಿಡೆಂಟ್ ಹೋಟೆಲಿನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾ ಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 60,000 ಮತಗಳ ಮುನ್ನಡೆ ಸಾಧಿಸಲು ಅವಕಾಶ ನೀಡಿ, ಪ್ರತಾಪ್‍ಸಿಂಹ 2ನೇ ಬಾರಿ ಸಂಸದರಾಗಿ ಆಯ್ಕೆಯಾಗಲು ಕಾರಣಕರ್ತರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

2018ರ ವಿಧಾನಸಭೆ ಚುನಾವಣೆಯಲ್ಲಿ 1,46,690 ಮತಗಳು ಚಲಾವಣೆಯಾಗಿತ್ತು. 100 ದಿನಗಳಲ್ಲಿ 1 ಲಕ್ಷ ಮತ ಕ್ಷೇತ್ರವಾಗಿಸುವ ತಮ್ಮ ಸಂಕಲ್ಪ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದೂ ಅವರು ತಿಳಿಸಿದರು.

ಇದು ನಿಮ್ಮ ಜಯ, ದೇಶದ ಜಯ, ಯುವ ಭಾರತದ ಜಯ. ಈ ಬಾರಿ 127 ಎನ್‍ಆರ್‍ಐಗಳು ವಿದೇಶದಿಂದ ಬಂದು ಮತ ಚಲಾಯಿಸಿದ್ದಾರೆ. 7800ಕ್ಕೂ ಹೆಚ್ಚು ಮಂದಿ ಮೊದಲ ಬಾರಿ ಮತ ಚಲಾಯಿಸಿದ್ದಾರೆ. ಓರ್ವ 107 ವರ್ಷದ ವೃದ್ಧೆಯೂ ಮತ ಹಾಕಿದ್ದಾರೆ ಎಂದ ರಾಮದಾಸ್, 6,950 ಹಿಂದುಳಿದ ವರ್ಗಗಳ, 2207 ಮುಸ್ಲಿಂ, 4773 ಪರಿಶಿಷ್ಟ ಜಾತಿ, 5,479 ಪರಿಶಿಷ್ಟ ಪಂಗಡ, 1,200 ಕ್ರಿಶ್ಚಿಯನ್ ಮತಗಳು ಈ ಬಾರಿ ಬಿಜೆಪಿಗೆ ಬಂದಿರುವುದು ವಿಶೇಷ ಎಂದರು.

ಪ್ರಧಾನಿ ನರೇಂದ್ರಮೋದಿ ಅವರ ಕಾರ್ಯಕ್ರಮಗಳು, 4,000 ಸರ್ವಿಸ್ ಓಟಗಳು, ಮತದಾನದ ಸಂಖ್ಯೆಯಲ್ಲಿನ ಹೆಚ್ಚಳ, 120 ಟೆರೇಸ್ ಮೀಟಿಂಗ್‍ಗಳು, ಕಡ್ಡಾಯ ಮತದಾನದ ಬಗ್ಗೆ ಜಾಗೃತಿಯಂತಹ ಹಲವು ಕಾರ್ಯಕ್ರಮಗಳು ಬಿಜೆಪಿಗೆ ವರದಾನವಾಯಿತು ಎಂದು ರಾಮದಾಸ್ ನುಡಿದರು. ದೇಶದಲ್ಲಿ ಕಡ್ಡಾಯ ಮತದಾನ ಹಾಗೂ ಜನಪ್ರತಿನಿಧಿಗಳ ಕಾಯ್ದೆಗೆ ಬದಲಾವಣೆ ತರಲು ತಾವು ಒತ್ತಾಯಿಸುತ್ತೇವೆ ಎಂದ ಅವರು, ದೇಶದಾದ್ಯಂತ ಬಿಜೆಪಿಗೆ ಅತ್ಯಂತ ಹೆಚ್ಚು ಸ್ಥಾನ ನೀಡಿರುವ ಮತದಾರರಿಗೆ ತಾವು ಧನ್ಯವಾದ ಸಲ್ಲಿಸುವುದಾಗಿಯೂ ತಿಳಿಸಿದರು.

Translate »