ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ನ್ಯಾಕ್ ಮಾನ್ಯತೆಗಾಗಿ ಸಿದ್ಧತೆ ನಡೆಸುತ್ತಿದ್ದು, ಈ ನಡುವೆ ಉಪ ನ್ಯಾಸಕರ ಕೊರತೆಯನ್ನೂ ಎದುರಿಸುತ್ತಿದೆ. ಪ್ರಸ್ತುತ ಕೇವಲ ಶೇ.49ರಷ್ಟು ಬೋಧಕ ವರ್ಗ ಹೊಂದಿದೆ ಎಂದು ಸ್ವತಃ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ವಿಷಾದಿಸಿದ್ದಾರೆ.
ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ವಿಶ್ವ ವಿದ್ಯಾನಿಲಯದ ನ್ಯಾಕ್ ಮಾನ್ಯತೆ ಪ್ರಕ್ರಿಯೆ ಸಂಬಂಧ ವಿವಿಯ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಬೋರ್ಡ್ (ಪಿಎಂ ಇಬಿ) ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತ ನಾಡಿದರು. ಇದೀಗ 4ನೇ ನ್ಯಾಕ್ ಮಾನ್ಯತಾ ಪ್ರಕ್ರಿಯೆಗೆ ವಿಶ್ವವಿದ್ಯಾನಿಲಯ ತೆರೆದುಕೊಳ್ಳು ತ್ತಿದೆ. ಈ ಹಿಂದೆ ಪ್ರೊ.ಎನ್.ಎನ್.ಹೆಗ್ಡೆ, ಪ್ರೊ.ಶಶಿಧರ್ ಪ್ರಸಾದ್ ಹಾಗೂ ಪ್ರೊ.ವಿ. ಜಿ.ತಳವಾರ್ ಕುಲಪತಿಗಳಾಗಿದ್ದ ಸಂದರ್ಭ ದಲ್ಲಿ ಕ್ರಮವಾಗಿ 3 ನ್ಯಾಕ್ ಮಾನ್ಯತಾ ಪ್ರಕ್ರಿಯೆ ಯಲ್ಲಿ ಉತ್ತಮ ದರ್ಜೆ ಸಿಕ್ಕಿತ್ತು. ಆ ಸಂದರ್ಭ ದಲ್ಲಿ ಸಾಕಷ್ಟು ಸಂಖ್ಯೆಯ ಬೋಧಕ ವರ್ಗವೂ ಲಭ್ಯವಿತ್ತು. ಆದರೆ ಪ್ರಸ್ತುತ ಕೇವಲ ಶೇ.49 ರಷ್ಟು ಬೋಧಕ ವರ್ಗ ಮಾತ್ರವೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
2017ರಿಂದ ಹೊಸ ರೀತಿಯ ನ್ಯಾಕ್ ಮಾನ್ಯತಾ ಮಾರ್ಗಸೂಚಿ ಬಂದಿದ್ದು, ಅದರ ಪ್ರಕಾರ ಶೇ.70ರಷ್ಟು ಮಾಹಿತಿಯ ದತ್ತಾಂಶ ವನ್ನು ಸ್ವತಃ ವಿಶ್ವವಿದ್ಯಾನಿಲಯ ಸ್ವಯಂ ಮೌಲ್ಯಮಾಪನದೊಂದಿಗೆ ನ್ಯಾಕ್ ವೆಬ್‍ಸೈಟ್ ಅಪ್‍ಲೋಡ್ ಮಾಡಬೇಕು. ಉಳಿದ ಶೇ. 30ರಷ್ಟು ಮಾಹಿತಿ ಪಡೆಯಲು ನ್ಯಾಕ್ ಸಮಿತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದರು.
ನ್ಯಾಕ್ ಮಾನ್ಯತಾ ಪ್ರಕ್ರಿಯೆಯಲ್ಲಿ ಅನೇಕ ಕಠಿಣ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಿದರೆ ಉನ್ನತ ದರ್ಜೆಯ ಮಾನ್ಯತೆ ದೊರೆಯಲಿದೆ. ಈ ಪ್ರಕ್ರಿಯೆಯಲ್ಲಿ ಕೇವಲ ಕುಲಪತಿ, ಕುಲಸಚಿವರ ಪಾತ್ರವಷ್ಟೇ ಮುಖ್ಯ ವಲ್ಲ. ವಿಶ್ವವಿದ್ಯಾನಿಲಯದ ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಸೇರಿ ದಂತೆ ಪ್ರತಿ ಸಿಬ್ಬಂದಿಯ ಪಾತ್ರವೂ ಪ್ರಾಮು ಖ್ಯತೆ ಹೊಂದಿರಲಿದೆ. ಹೀಗಾಗಿ ಇದು ಕೇವಲ ಕುಲಪತಿ, ಕುಲಸಚಿವರ ಜವಾಬ್ದಾರಿ ಎಂದು ಕೈಕಟ್ಟಿ ಕುಳಿತರೆ ಉನ್ನತ ದರ್ಜೆಯಿಂದ ವಂಚಿತರಾಗಬೇಕಾಗುತ್ತದೆ. ಮೈಸೂರು ವಿಶ್ವ ವಿದ್ಯಾಲಯದ ಬೋಧಕ ವೃಂದ ಜ್ಞಾನ ಮತ್ತು ಬೋಧನೆಯಲ್ಲಿ ಉತ್ತಮವಾಗಿದೆ. ಆದರೆ ಕಾರ್ಯವೈಖರಿಯನ್ನು ಸಾದರ ಪಡಿಸುವ ಕೌಶಲ್ಯ ಬೆಳೆಸಿಕೊಳ್ಳಲು ಒತ್ತು ನೀಡಬೇಕು ಎಂದು ತಿಳಿಸಿದರು.
ಮೈಸೂರು ವಿವಿ ಕುಲಸಚಿವ (ಆಡಳಿತ) ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ಮೈಸೂರು ವಿವಿ ಉನ್ನತ ಪರಂಪರೆ ಹೊಂದಿದ್ದು, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಶಿಕ್ಷಣ ತಜ್ಞರ ಸಲಹೆ ಯೊಂದಿಗೆ ನ್ಯಾಕ್‍ನ ಅಗ್ರಮಾನ್ಯ ದರ್ಜೆ ಪಡೆಯಲು ಸರಿಯಾದ ಮಾರ್ಗದಲ್ಲಿ ಪೂರ್ವ ಸಿದ್ಧತೆ ನಡೆಸಬೇಕು ಎಂದರು.
ಒಂದು ದಿನದ ಕಾರ್ಯಾಗಾರದಲ್ಲಿ ವಿವಿಯ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಹಲವು ಅಧ್ಯಾಪಕರು ಪಾಲ್ಗೊಂಡಿದ್ದರು. 2 ತಾಂತ್ರಿಕ ಗೋಷ್ಠಿಗಳು ಹಾಗೂ ಸಂವಾದ ಕಾರ್ಯಾಗಾರ ನಡೆಯಿತು. ನ್ಯಾಕ್ ಮಾಜಿ ಸಲಹೆಗಾರ ಪ್ರೊ.ವಿಷ್ಣುಕಾಂತ್ ಛಟ್ಪಾಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿ ಸಿದ್ದರು. ಮೈಸೂರು ವಿವಿ ಹಣಕಾಸು ಅಧಿಕಾರಿ ಪ್ರೊ.ಮಹದೇವಪ್ಪ, ಪಿಎಂಇಬಿ ನಿರ್ದೇ ಶಕ ಪ್ರೊ.ಯಶವಂತ್ ಡೋಂಗ್ರೆ, ಐಕ್ಯೂಎಸಿ ನಿರ್ದೇಶಕ ಪ್ರೊ.ಗುರು ಇತರರಿದ್ದರು.