ವಿಜ್ಞಾನಕ್ಕೆ ಪ್ರಯೋಗಗಳು ಮುಖ್ಯವೇ ಹೊರತು ಮೂಢನಂಬಿಕೆಗಳಲ್ಲ
ಮೈಸೂರು

ವಿಜ್ಞಾನಕ್ಕೆ ಪ್ರಯೋಗಗಳು ಮುಖ್ಯವೇ ಹೊರತು ಮೂಢನಂಬಿಕೆಗಳಲ್ಲ

May 26, 2019

ಮೈಸೂರು: ವಿಜ್ಞಾನಕ್ಕೆ ಪ್ರಯೋಗಗಳ ಅಗತ್ಯವಿದೆಯೇ ಹೊರತು ಮೂಢನಂಬಿಕೆಗಳಲ್ಲ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ಜ್ಞಾನ ಪ್ರೋತ್ಸಾಹ ಸೊಸೈಟಿ ನಿರ್ದೇಶಕ ಡಾ.ಹೆಚ್.ಹೊನ್ನೇಗೌಡ ಹೇಳಿದರು.

ಮಾನಸಗಂಗೋತ್ರಿ ವಿಜ್ಞಾನಭವನದಲ್ಲಿ ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ (ಸಿಡಿ ಎಸ್‍ಎಸ್) ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ವಾರದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಮೂಢನಂಬಿಕೆಗಳಿಂದ ದೂರ ಸರಿಯಬೇಕಾಗಿದೆ. ವಿಜ್ಞಾನವನ್ನು ಕಲಿಯಬೇಕಾದರೆ ಪ್ರಯೋಗಗಳನ್ನು ಮಾಡುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಒಂದೇ ರೀತಿಯಲ್ಲಿ ಅಧ್ಯಯನ ಮಾಡಬೇಕು. ದೇಶಕ್ಕೆ ಇಂದು ಉತ್ತಮ ಕೌಶಲ್ಯತೆಯನ್ನು ಹೊಂದಿರುವ ವಿಜ್ಞಾನಿಗಳ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪ್ರೌಢಶಾಲೆಯ ಹಂತದಲ್ಲಿಯೇ ಪ್ರಯೋಗ ಗಳನ್ನು ಮಾಡಿಸುವ ಮೂಲಕ ಮೂಲಕ ಅವರನ್ನು ಉತ್ತಮ ವಿಜ್ಞಾನಿಗಳನ್ನಾಗಿ ರೂಪಿಸಬಹುದು ಎಂದರು.

ಸರ್ಕಾರ ಸೇರಿದಂತೆ ಇತರೆ ಸಂಘ-ಸಂಸ್ಥೆ ಗಳು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಪಾರ ಕೊಡುಗೆಯನ್ನು ನೀಡುತ್ತಿವೆ. ಇದನ್ನೆಲ್ಲ ಸದ್ಬಳಕೆ ಮಾಡಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿ ಸಹಕರಿಸಬೇಕು. ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆಯೂ ಗಮನ ಹರಿಸಬೇಕು ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರ ಜ್ಞಾನದ ಜ್ಞಾನವನ್ನು ಬೆಳೆಸಲು ಆಯೋ ಜಿಸಿರುವ ಕಾರ್ಯಾಗಾರ ಉತ್ತಮವಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಮುಂದಿನ ಇಂಜಿನಿಯರ್ ಗಳಾಗಿದ್ದಾರೆ ಎಂದು ಪ್ರಶಂಸಿಸಿದರು.

ಚಿಕ್ಕ ವಯಸ್ಸಿನಿಂದಲೇ ಪ್ರಯೋಗಗಳಲ್ಲಿ ತೊಡಗಿಕೊಳ್ಳುವುದರಿಂದ ಹೊಸ ಹೊಸ ಆಲೋಚನೆಗಳು ಬೆಳೆಯುತ್ತವೆ. ಇಂದು ಅಧ್ಯಯನಕ್ಕೆ ಸಂಬಂಧಿಸಿದಂತೆ ಉತ್ಕøಷ್ಟ ಉಪಕರಣಗಳು, ಅಧ್ಯಯನ ಸಾಮಗ್ರಿ ಗಳು ಇವೆ. ವಿಜ್ಞಾನ ಮತ್ತು ತಂತ್ರಜ್ಞಾನ ದಿಂದ ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬೆಳೆಯಬೇಕು ಎಂದರು.

ಮೊದಲಿಗಿಂತ ಇಂದು ಉತ್ತಮ ಶಿಕ್ಷಕರ ಕೊರತೆಯಿದೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಹೆಚ್ಚಾಗಿ ಅವಲಂಬನೆಯಾಗದೆ ಇತರೆ ಮಾರ್ಗ ದಲ್ಲಿ ಮಾಹಿತಿಯನ್ನು ಸಂಗ್ರಹಿಸಬೇಕು. ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊ ಯ್ಯಲು ಶಿಕ್ಷಕರಂತೆ ಇಂಜಿನಿಯರ್‍ಗಳ ಬೇಕಾಗಿದ್ದಾರೆ ಎಂದರು.

ಇದೇ ವೇಳೆ ಕಾರ್ಯಾಗಾರದಲ್ಲಿ ಉತ್ತಮ ಪ್ರಯೋಗಗಳನ್ನು ಮಾಡಿದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಗಳಲ್ಲಿ ವಿಜ್ಞಾನಾಭಿ ವೃದ್ಧಿ ಸಮಿತಿ (ಸಿಡಿಎಸ್‍ಎಸ್) ಅಧ್ಯಕ್ಷ ಪ್ರೊ.ಪಿ.ವೆಂಕಟರಾಮಯ್ಯ, ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Translate »