ನಾಡಿನ 34 ಸಾಹಿತಿಗಳ ದಾಖಲೆ-ಪತ್ರಗಳನ್ನು  ಸಂಗ್ರಹಿಸಿ-ಸಂರಕ್ಷಣೆ: ಮೈವಿವಿ ಚಿಂತನೆ
ಮೈಸೂರು

ನಾಡಿನ 34 ಸಾಹಿತಿಗಳ ದಾಖಲೆ-ಪತ್ರಗಳನ್ನು ಸಂಗ್ರಹಿಸಿ-ಸಂರಕ್ಷಣೆ: ಮೈವಿವಿ ಚಿಂತನೆ

March 18, 2021

ಮೈಸೂರು,ಮಾ.17(ಎಂಟಿವೈ)-ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ರಾಜ್ಯದ 34 ಸಾಹಿತಿಗಳಿಗೆ ಸಂಬಂಧಿಸಿದ ದಾಖಲೆ-ಪತ್ರಗಳನ್ನು ಸಂಗ್ರಹಿಸಿ-ಸಂರಕ್ಷಿಸಲು ಉದ್ದೇಶಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಡಿವಿಜಿ ಬಳಗ ಪ್ರತಿಷ್ಠಾನ ಸಂಯುಕ್ತಾಶ್ರಯ ದಲ್ಲಿ ಬುಧವಾರ ಬಿಎಂಶ್ರೀ ಸಭಾಂಗಣದಲ್ಲಿ ಆಯೋ ಜಿಸಿದ್ದ `ಡಿವಿಜಿ ಮತ್ತು ಬಿಜಿಎಲ್ ಸ್ವಾಮಿ’ ಗ್ಯಾಲರಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ, `ಡಿವಿಜಿ ಮತ್ತು ಬಿಜಿಎಲ್ ಸ್ವಾಮಿ ಗ್ಯಾಲರಿ ಮಾದರಿ ಯಲ್ಲೇ 34 ಸಾಹಿತಿಗಳ ದಾಖಲೆಗಳ ಪ್ರದರ್ಶನಕ್ಕೂ ಅವಕಾಶ ದೊರೆಯಲಿದೆ ಎಂದು ವಿವಿ ಪ್ರಸಾರಾಂಗ ನಿರ್ದೇಶಕ ಪೆÇ್ರ.ಎನ್.ಎಂ.ತಳವಾರ ಮಾಹಿತಿ ನೀಡಿ ದ್ದಾರೆ. ಈ 34 ಸಾಹಿತಿಗಳ ದಾಖಲೆಗಳನ್ನೂ ಸಂರಕ್ಷಿಸಿ ಪ್ರದರ್ಶನಕ್ಕಿಡಲಾಗುವುದು ಎಂದರು.
ಮಹಾನ್ ಚಿಂತಕರ ಮಕ್ಕಳಾಗಿ ಮಹಾ ಮೇಧಾವಿಗಳೇ ಜನಿಸುವುದು ಅಪರೂಪವಲ್ಲ. ಈ ವಿಚಾರದಲ್ಲಿ ಎದ್ದು ಕಾಣುವವರು ಕುವೆಂಪು ಮತ್ತು ತೇಜಸ್ವಿ. ತೇಜಸ್ವಿ ಸ್ವಂತ ಪರಿಶ್ರಮದಿಂದ ಪ್ರತ್ಯೇಕ ಹಾದಿ ಕಂಡುಕೊಂಡು ದೊಡ್ಡ ಲೇಖಕರಾದರು. ಅವರು ಈಗ ಇದ್ದಿದ್ದರೆ ತಜ್ಞರ ಅಭಿಪ್ರಾಯದಂತೆ ಕನ್ನಡಕ್ಕೆ ಇನ್ನೊಂದು `ಜ್ಞಾನಪೀಠ’ ಲಭಿಸುತ್ತಿತ್ತು. ಇದು ಕನ್ನಡಿಗರಿಗೆ ಆದ ನಷ್ಟ ಎಂದರು.

ಡಿವಿಜಿ ಸ್ಮರಣೆ ನಾಡಿನಲ್ಲಿ ನಿರಂತರ. ವಿದ್ವಾಂ ಸರು, ಸಂಶೋಧಕರು, ಪ್ರವಚನಕಾರರು, ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕೃತಿಯಿಂದ ಆಯ್ದ ಸಂದೇಶಗಳನ್ನು ಬಿತ್ತರಿಸುತ್ತಲೇ ಇದ್ದಾರೆ. ರಾಜ್ಯದಲ್ಲಿ ಸರ್ವಜ್ಞನ ವಚನಗಳಂತೆಯೇ ಮಂಕುತಿಮ್ಮನ ಕಗ್ಗವೂ ಜನರ ನೆಮ್ಮದಿಯ ಜೀವನಕ್ಕೆ ಆಧಾರವೆನಿಸಿದೆ. ಎಲ್ಲ ವಿದ್ವಾಂಸರೂ ಮಂಕುತಿಮ್ಮನ ಕಗ್ಗವನ್ನು ಆಧಾರವಾಗಿ ತೆಗೆದುಕೊಳ್ಳುವುದು ನೋಡಿದರೆ, ಸಮಾಜ ಮತ್ತು ಸಂಸ್ಕೃತಿಯ ಏಳಿಗೆ ಬಗ್ಗೆ ಮಾಡಿದ ಗಾಢವಾದ ಧ್ಯಾನ ಅನವರತವೂ ಬೆಳಕಿನ ಪುಂಜವಾಗಿ ಪರಿಣಮಿಸು ತ್ತದೆ ಎನ್ನುವುದು ಖಾತ್ರಿಯಾಗುತ್ತದೆ ಎಂದರು.

ಡಿವಿಜಿ ಗದ್ಯ, ಪದ್ಯ, ನಾಟಕ, ವಿಚಾರ, ಸಾಹಿತ್ಯವನ್ನು ವಿಪುಲವಾಗಿ ರಚಿಸಿದ್ದಾರೆ. ಬೇರೆ ಭಾಷೆಗಳಲ್ಲೂ ಡಿವಿಜಿ ಅವರಂತಹ ಮಹಾಮೇಧಾವಿಗಳು ಇರಬಹುದು. ಆದರೆ, ಅವರು ಕನ್ನಡ ಭಾಷೆಗೆ ದಕ್ಕಿದ್ದು ನಮ್ಮ ಪುಣ್ಯವೇ ಸರಿ. ಡಿವಿಜಿ ಹಾಗೂ ಬಿಜಿಎಲ್ ಸ್ವಾಮಿ ಅವರ ಬಗೆಗೆ ಇಂದು ವೆಬ್‍ಸೈಟ್ ಲೋಕಾರ್ಪಣೆಯಾಗಿದೆ. ಡಿವಿಜಿ ಕಲ್ಪಿಸಿಕೊಂಡ ಆದರ್ಶ ಬದುಕು, ಕನ್ನಡಿಗರ ಪಾಲಿಗೆ ಸಾಕಾರಗೊಳ್ಳಲಿ ಎಂದು ಹಾರೈಸಿದರು.

ವಿವಿ ಆವರಣದ ಜಯಲಕ್ಷ್ಮಿ ವಿಲಾಸ ಅರಮನೆ ಯನ್ನು 6 ಕೋಟಿ ರೂ. ವೆಚ್ಚದಲ್ಲಿ ಹಂತ, ಹಂತ ವಾಗಿ ದುರಸ್ತಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪೆÇ್ರ.ಆರ್.ಶಿವಪ್ಪ, ವಿಶ್ರಾಂತ ಪ್ರಾಧ್ಯಾ ಪಕರಾದ ಪೆÇ್ರ.ಎನ್.ಎಸ್.ತಾರಾನಾಥ, ಪೆÇ್ರ. ಸಿ.ಆರ್. ನಾಗೇಂದ್ರನ್, ಬಿ.ಜಿ.ಎಲ್.ಸ್ವಾಮಿ ಅವರ ಬಂಧು ಗೀತಾ ನಾರಾಯಣ ಅಯ್ಯರ್, ಡಿವಿಜಿ ಬಳಗ ಪ್ರತಿಷ್ಠಾನದ ಎಚ್.ರಾಜಕುಮಾರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೆಶಕ ಪೆÇ್ರ.ಎಂ.ಬಿ.ಮಂಜು ನಾಥ್, ಪ್ರಸಾರಾಂಗ ನಿರ್ದೇಶಕ ಪೆÇ್ರ.ಎನ್.ಎಂ. ತಳವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »